ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರಪಂಚದಾದ್ಯಂತ ಬಿಡುಗಡೆಗೊಂಡು ಅಬ್ಬರಿಸುತ್ತಿರುವ ಕಾಂತಾರ -1 #Kantara-1 ಚಿತ್ರ ನಿರೀಕ್ಷೆಯಂತೆ ಬಾಕ್ಸಾಫೀಸಿನಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡಿದ್ದು, ಒಂದೇ ವಾರದಲ್ಲಿ 500 ಕೋಟಿ ರೂ. ಕಲೆಕ್ಷನ್ ದಾಟಿದೆ.
ಹೌದು… ಹೊಂಬಾಳೆ ಫಿಲ್ಸ್ಂ #Hombale Films ಅಧಿಕೃತವಾಗಿ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ವಿಶ್ವದಾದ್ಯಂತ ಮೊದಲ ವಾರದಲ್ಲಿ ಕಾಂತಾರ -1 ಸಿನಿಮಾ 509.25 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ತಿಳಿಸಿದೆ.
ಕಾಂತಾರ -1 ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ನಿರೀಕ್ಷೆ ಹುಟ್ಟಿಸಿತ್ತು. ಅ.2ರಂದು ಪ್ರಪಂಚದಾದ್ಯಂತ 7 ಭಾಷೆಗಳಲ್ಲಿ ಸುಮಾರು 9000 ಸ್ಕೀನ್’ಗಳಲ್ಲಿ ತೆರೆಕಂಡಿತು.
ಕನ್ನಡ ಹಾಗೂ ಹಿಂದಿಯಲ್ಲಿ ಅದ್ಬುತ ಪ್ರತಿಕ್ರಿಯೆ ದೊರೆತಿದ್ದು, ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಸಹ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ನಿರೀಕ್ಷೆಯಂತೆಯೇ ಮೊದಲ ವಾರದಲ್ಲಿಯೇ 509 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಇನ್ನೂ ಮುನ್ನುಗ್ಗುತ್ತಿದೆ.
ಕನ್ನಡದಲ್ಲಿ ಅತಿವೇಗದಲ್ಲಿ ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಮೊದಲನೇ ಚಿತ್ರ ಕೆಜಿಎಫ್2 ಚಿತ್ರ ಒಟ್ಟು 1215 ಕಲೆಕ್ಷನ್ ಮಾಡಿದ್ದು, ಕಾಂತಾರ -1 ಈಗ ಎರಡನೇ ಸ್ಥಾನದಲ್ಲಿದೆ.
ಇನ್ನು, ಒಟಿಟಿಯಲ್ಲೂ ಸಹ ಕಾಂತಾರ -1 ಕಮಾಲ್ ಮಾಡಿದೆ. ಡಿಜಿಟಲ್ ಪ್ರಸಾರದ ಹಕ್ಕನ್ನು ಅಮೇಜಾನ್ ಪ್ರೈಮ್ ಸುಮಾರು 125 ಕೋಟಿ ರೂ.ಗೆ ಪಡೆದುಕೊಂಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post