ಕಲ್ಪ ಮೀಡಿಯಾ ಹೌಸ್ | ಗದಗ |
ಕೇಂದ್ರ ಸರ್ಕಾರದ ವಿಶೇಷ ಸ್ವಚ್ಚತಾ ಅಭಿಯಾನ ಸ್ವಚ್ಚತಾ ಹಿ ಅಭಿಯಾನ #Cleanliness Campaign 5.0ದ ಅಂಗವಾಗಿ, ಹುಬ್ಬಳ್ಳಿ ವಿಭಾಗೀಯ ರೈಲ್ವೆ ವತಿಯಿಂದ ಇಂದು ಗದಗ ರೈಲು ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಅಮೃತ ಸಂವಾದ ಕಾರ್ಯಕ್ರಮ ಯಶಸ್ವಿಯಾಯಿತು.
ಅಮೃತ ಸಂವಾದ ಎಂಬುವುದು ಸ್ವಚ್ಛತೆಯ ಪರಿಕಲ್ಪನೆ ಅಡಿಯಲ್ಲಿ ರೂಪಗೊಂಡ ಸ್ವಚ್ಛತೆಯ ಕುರಿತು ಜಾಗೃತ ಮೂಡಿಸುವ ಅಭಿಯಾನವಾಗಿದೆ.

ನಿಲ್ದಾಣದಲ್ಲಿ ಹಸಿರು ವಾತಾವರಣ ನಿರ್ಮಿಸಲು ಗಿಡಗಳನ್ನು ನೆಡವುದರ ಕುರಿತು ತಿಳಿಸಿದರು. ಅದೇ ರೀತಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ಕುರಿತು ಜಾಗೃತಿ ಮೂಡಿಸಿದರು.
ನಂತರ ಪ್ರಯಾಣಿಕರು ಮತ್ತು ರೈಲ್ವೆ ಬಳಕೆದಾರರು ಸಂವಾದ ನಡೆಸಿದ್ದು, ಈ ಸಂವಾದದಲ್ಲಿ ವಿಭಾಗೀಯ ರೈಲ್ವೆ ಹಿರಿಯ ಅಧಿಕಾರಿಗಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post