ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ನೈಋತ್ಯ ರೈಲ್ವೆ #SWR ವಿಭಾಗದ ಅಖಿಲ ಭಾರತ ಸ್ಟೇಷನ್ ಮಾಸ್ಟರ್ #StationMaster ಅಸೋಸಿಯೇಷನ್ ವಾರ್ಷಿಕ ಆಯೋಜಿಸಿದ್ದ ಸಾಮಾನ್ಯ ಸಭೆ ಯಶಸ್ವಿಯಾಗಿ ನಡೆಯಿತು.
ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಭಾಂಗಣದಲ್ಲಿ ನಡೆದ ಮಹತ್ವದ ಸಭೆಯಲ್ಲಿ ವಿಭಾಗದಾದ್ಯಂತದ ಸ್ಟೇಷನ್ ಮಾಸ್ಟರ್’ಗಳು ಭಾಗವಹಿಸಿದ್ದರು.
ಸಭೆಯಲ್ಲಿ ಸಂಘದ ಹಿಂದಿನ ಅವಧಿಯ ಸಾಧನೆಗಳ ವಿಮರ್ಶೆ, ಮುಂದಿನ ಕಾರ್ಯತಂತ್ರಗಳ ರೂಪುರೇಷೆ ಹಾಗೂ ನೂತನ ಪದಾಧಿಕಾರಿಗಳ ನೇಮಕದ ವಿಚಾರಗಳ ಸಭೆಯಲ್ಲಿ ಪ್ರಸ್ತಾಪವಾದವು.
ಹಿಂದಿನ ಕಾರ್ಯಕಾರಿ ಸಮಿತಿಯ ಅಧಿಕಾರಾವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಈ ಸಂದರ್ಭದಲ್ಲಿ ಹೊಸ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.ಯಾರೆಲ್ಲಾ ಆಯ್ಕೆಯಾದರು?
- ವಿಭಾಗೀಯ ಅಧ್ಯಕ್ಷರು: ಮಾನವೇಂದ್ರ ಓಜಾ
- ಕಾರ್ಯಕಾರಿ ಅಧ್ಯಕ್ಷರು: ನೂರಪ್ಪ ಸಿ. ಲಮಾಣಿ
- ವಿಭಾಗೀಯ ಕಾರ್ಯದರ್ಶಿ: ರಂಜನ್ ಕುಮಾರ್ ಝಾ
- ವಿಭಾಗೀಯ ಹಣಕಾಸು ಕಾರ್ಯದರ್ಶಿ: ಪ್ರಕಾಶ್ ಕುಮಾರ್ ರಜಾಕ್
- ಉಪಾಧ್ಯಕ್ಷರು: ಲೋಕೇಶ್ ಕುಮಾರ ಜಾಟವ ಮತ್ತು ಅಶೋಕ್ ಕುಮಾರ್ ಸಿಂಗ್
- ಸಂಯುಕ್ತ ವಿಭಾಗೀಯ ಕಾರ್ಯದರ್ಶಿ: ಹೇಮೇಶ್ ಕುಮಾರ್
- ಸಂಘಟನಾ ಕಾರ್ಯದರ್ಶಿ: ಬರುಣ್ ಕುಮಾರ್ ದಾಸ್ ಮತ್ತು ರಾಜೇಶ್ ನಹಾಕ್
ವಿಶೇಷ ಸನ್ಮಾನ
ಇನ್ನು, ಇದೇ ಅ.31ರಂದು ಸೇವೆಯಿಂದ ನಿವೃತ್ತರಾಗಲಿರುವ ನೈಋತ್ಯ ರೈಲ್ವೆಯ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಡಾ. ಅನೂಪ್ ದಯಾನಂದ ಸಾಧು ಅವರಿಗೆ ಸಂಘವು ವಿಶೇಷ ಸನ್ಮಾನ ಮಾಡಲಾಯಿತು.
ರೈಲ್ವೆ ವ್ಯವಸ್ಥೆಗೆ ಡಾ. ಸಾಧು ಅವರು ನೀಡಿದ ಸುದೀರ್ಘ, ಸಮರ್ಪಿತ ಸೇವೆ ಮತ್ತು ಗಣನೀಯ ಕೊಡುಗೆಗಳನ್ನು ಗುರುತಿಸಿ ಸಂಘವು ಕೃತಜ್ಞತೆ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಸಾಧು, ಭಾರತೀಯ ರೈಲ್ವೆಯಲ್ಲಿ ಸ್ಟೇಷನ್ ಮಾಸ್ಟರ್’ಗಳ ಪಾತ್ರ ಬಹಳ ಮಹತ್ವದ್ದಾಗಿದೆ. ಅವರೇ ರೈಲ್ವೆಯ ಹೃದಯ ಭಾಗ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸಂಘದ ವತಿಯಿಂದ ಡಾ. ಸಾಧು ಅವರು ನಿವೃತ್ತಿಯ ನಂತರವೂ ಸಂತೋಷದ ಜೀವನ ನಡೆಸಲಿ ಎಂದು ಶುಭ ಕೋರಲಾಯಿತು.
ವಿಭಾಗೀಯ ಕಾರ್ಯದರ್ಶಿ ಮಾನವೇಂದ್ರ ಓಜಾ ಅವರು ಮಾತನಾಡಿ, 2021 ರಿಂದ 2025 ರವರೆಗಿನ ಸಂಘದ ಚಟುವಟಿಕೆಗಳು, ಆಯವ್ಯಯ ವರದಿ ಮತ್ತು ಸಾಧನೆಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು.
ಸ್ಟೇಷನ್ ಮಾಸ್ಟರ್’ಗಳ ಹಕ್ಕುಗಳ ರಕ್ಷಣೆ ಮತ್ತು ಕಲ್ಯಾಣಕ್ಕಾಗಿ ನಡೆಸಿದ ಕಾರ್ಯಗಳನ್ನು ಅವರು ವಿವರಿಸಿದರು. ಸದಸ್ಯರ ಹಕ್ಕುಗಳನ್ನು ಮತ್ತಷ್ಟು ಬಲಪಡಿಸಲು ಮತ್ತು ಅವರ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಕುಮಾರಸ್ವಾಮಿ ಚರ್ಚಿಸಿದರು.
ಇನ್ನು, ಸ್ಟೇಷನ್ ಮಾಸ್ಟರ್ ಹುದ್ದೆಯಿಂದ ಸಹಾಯಕ ಆಪರೇಷನ್ ಮ್ಯಾನೇರ್ಜ ಆಗಿ ನೇಮಕಗೊಂಡ ರಾಮಕೃಷ್ಣ ರುದ್ರಗಂಟಿ ಅವರಿಗೂ ಸಹ ಸನ್ಮಾನ ಮಾಡಿ ಗೌರವಿಸಲಾಯಿತು.
ಸತೀಶ್ ಕುಮಾರ್ ಸೇರಿದಂತೆ ಅರವಿಂದ ಹರ್ಲೆ, ಆನಂದ ರಾವ್, ಕುಮಾರ ಸ್ವಾಮಿ, ಜಯಣ್ಣ ಹರಿ ವಲ್ಲಭ್ ಮತ್ತು ಐಸ್ಮಾ ಸಂಘದ ಅನೇಕ ಹಿರಿಯ ಗಣ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post