ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಬಾಗೇವಾಡಿ ಹಾಲ್ಟ್ ಮತ್ತು ಚಿಕ್ಕೋಡಿ ರೋಡ್ ನಿಲ್ದಾಣಗಳ ನಡುವೆ ರಸ್ತೆ ಕೆಳಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ, ಈ ಕೆಳಗಿನ ರೈಲು ಸೇವೆಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ, ಮತ್ತೆ ಕೆಲವು ನಿಯಂತ್ರಿಸಲಾಗಿದೆ.
ಯಾವೆಲ್ಲಾ ರೈಲುಗಳ ಭಾಗಷಃ ಸಂಚಾರ ರದ್ದು:
- ಅಕ್ಟೋಬರ 16 ರಂದು ಪ್ರಯಾಣ ಪ್ರಾರಂಭಿಸುವ ರೈಲು ಸಂಖ್ಯೆ 51462 (07302) ಮೀರಜ್-ಬೆಳಗಾವಿ ಪ್ಯಾಸೆಂಜರ್ ವಿಶೇಷ ರೈಲು ಚಿಕ್ಕೋಡಿ ರೋಡ್ ಮತ್ತು ಬೆಳಗಾವಿ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಚಿಕ್ಕೋಡಿ ರೋಡ್’ನಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.
- ಅಕ್ಟೋಬರ್ 16 ರಂದು ರೈಲು ಸಂಖ್ಯೆ 51463 (07303) ಬೆಳಗಾವಿ- ಮೀರಜ್ ಪ್ಯಾಸೆಂಜರ್ ವಿಶೇಷ ರೈಲು, ಬೆಳಗಾವಿಯ ಬದಲಿಗೆ ಚಿಕ್ಕೋಡಿ ರೋಡ್ನಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಲಿದೆ. ಬೆಳಗಾವಿ- ಚಿಕ್ಕೋಡಿ ರೋಡ್ ನಡುವಿನ ಸೇವೆಯನ್ನು ರದ್ದುಗೊಳಿಸಲಾಗಿದೆ.
ಯಾವೆಲ್ಲಾ ರೈಲುಗಳ ನಿಯಂತ್ರಣ:
- ಅಕ್ಟೋಬರ್ 15, 2025 ರಂದು ತಿರುಪತಿಯಿಂದ ಹೊರಡುವ ರೈಲು ಸಂಖ್ಯೆ 17415 ತಿರುಪತಿ-ಕೊಲ್ಹಾಪುರ ಹರಿಪ್ರಿಯ ಎಕ್ಸ್’ಪ್ರೆಸ್ ರೈಲು ಮಾರ್ಗಮಧ್ಯೆ 120 ನಿಮಿಷಗಳ ಕಾಲ ನಿಯಂತ್ರಣವಾಗಲಿದೆ.
- ಅಕ್ಟೋಬರ್ 16ರಂದು ಮೀರಜ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17333 ಮೀರಜ್-ಕ್ಯಾಸಲ್ ರಾಕ್ ಎಕ್ಸ್’ಪ್ರೆಸ್ ರೈಲು ಮಾರ್ಗಮಧ್ಯೆ 70 ನಿಮಿಷಗಳ ಕಾಲ ನಿಯಂತ್ರಣವಾಗಲಿದೆ.
- ಅಕ್ಟೋಬರ್ 16 ರಂದು ಕೊಲ್ಹಾಪುರದಿಂದ ಹೊರಡುವ ರೈಲು ಸಂಖ್ಯೆ 17416 ಕೊಲ್ಹಾಪುರ-ತಿರುಪತಿ ಹರಿಪ್ರಿಯ ಎಕ್ಸ್’ಪ್ರೆಸ್ ರೈಲು ಮಾರ್ಗಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಣವಾಗಲಿದೆ.
31 ದಿನಗಳವರೆಗೆ ಡೆಮು ರೈಲುಗಳ ಸಂಚಾರ ರದ್ದು
ವಾಸ್ಕೋ ಡ ಗಾಮಾ-ಕನ್ಸೌಲಿಮ್ ನಿಲ್ದಾಣದ ನಡುವೆ ಹಳಿ ನಿರ್ವಹಣೆ ಮತ್ತು ಸುರP್ಷÀತೆಗೆ ಸಂಬAಧಿಸಿದ ಕಾಮಗಾರಿ ಸಲುವಾಗಿ, ರೈಲು ಸಂಖ್ಯೆ 56964/56963 ವಾಸ್ಕೋ ಡ ಗಾಮಾ-ಕುಲೆಮ್-ವಾಸ್ಕೋ ಡ ಗಾಮಾ ಡೆಮು ರೈಲನ್ನು 31 ದಿನಗಳ ಅವಧಿಗೆ, ಅಂದರೆ 16.10.2025 ರಿಂದ 15.11.2025 ರವರೆಗೆ ರದ್ದುಗೊಳಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post