ಕಲ್ಪ ಮೀಡಿಯಾ ಹೌಸ್ | ಬೇಲೂರು(ಹಾಸನ) |
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ವತಿಯಿಂದ ಅ.16 ರಂದು ಬೇಲೂರು ತಾಲೂಕಿನ ಹಳೇಬೀಡು ಮತ್ತು ಗಂಗೂರು ವಿ.ವಿ. ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸಗಳನ್ನು ಹಮ್ಮಿಕೊಂಡಿರುವುದರಿಂದ, ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕವಿಪ್ರನಿನಿ, ಹಾಸನ ಕಾರ್ಯಾಚರಣೆಗಳ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ತಿಳಿಸಿದ್ದಾರೆ.
ಎಲ್ಲೆಲ್ಲಿ ಕರೆಂಟ್ ಇರಲ್ಲ?
ಹಳೇಬೀಡು ವಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಹಳೇಬೀಡು, ಅಡಗೂರು, ಗೋಣಿಸೋಮನಹಳ್ಳಿ, ಕ್ಯಾತನಕೆರೆ, ಮತ್ತಿಘಟ್ಟ, ಕರಿಕಟ್ಟೆಹಳ್ಳಿ, ದ್ಯಾವಪ್ಪನಹಳ್ಳಿ, ಹರುಬೀಹಳ್ಳಿ, ಹುಲ್ಲೇನಹಳ್ಳಿ, ರಾಜನಸಿರಿಯೂರು, ವೀರದೇವನಹಳ್ಳಿ ಮತ್ತು ಚೀಲನಾಯಕನಹಳ್ಳಿ ಹಾಗೂ ಗಂಗೂರು ವಿವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಕನಕೇನಹಳ್ಳಿ, ಕೋಡಿಹಳ್ಳಿ, ಗಂಗೂರು, ಸೊಣೇನಹಳ್ಳಿ ಪ್ರದೇಶಗಳ ವಿದ್ಯುತ್ ಸ್ಥಾವರಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post