ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ದೀಪಾವಳಿ ಹಬ್ಬದ #Deepavali Festival ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಹಬ್ಬದ ಜನದಟ್ಟಣೆಯನ್ನು ನಿವಾರಿಸಲು ದಕ್ಷಿಣ ಮಧ್ಯ ರೈಲ್ವೆ ಹೈದರಾಬಾದ್ ಮತ್ತು ಬೆಳಗಾವಿ ನಡುವೆ ಆರು ಟ್ರಿಪ್’ಳಿಗೆ ವಿಶೇಷ ಎಕ್ಸ್’ಪ್ರೆಸ್ ರೈಲುಗಳ #Special Express Train ಕಾರ್ಯಾಚರಣೆಯನ್ನು ಪ್ರಕಟಿಸಿದೆ.
07043 ಸಂಖ್ಯೆಯ ಹೈದರಾಬಾದ್ – ಬೆಳಗಾವಿ ಎಕ್ಸ್’ಪ್ರೆಸ್ ವಿಶೇಷ ರೈಲು ಅಕ್ಟೋಬರ್ 23, 30 ಮತ್ತು ನವೆಂಬರ್ 6, 13, 20 ಮತ್ತು 27, 2025 ರಂದು ಸಂಜೆ 4:30 ಕ್ಕೆ ಹೈದರಾಬಾದ್’ನಿಂದ ಹೊರಟು ಮರುದಿನ ಬೆಳಿಗ್ಗೆ 10:30 ಕ್ಕೆ ಬೆಳಗಾವಿಗೆ ಆಗಮಿಸಲಿದೆ.
ಹಿಂದಿರುಗುವ ದಿಕ್ಕಿನಲ್ಲಿ, 07044 ಸಂಖ್ಯೆಯ ಬೆಳಗಾವಿ-ಹೈದರಾಬಾದ್ ಎಕ್ಸ್’ಪ್ರೆಸ್ ವಿಶೇಷ ರೈಲು ಬೆಳಗಾವಿಯಿಂದ 24, 31 ಅಕ್ಟೋಬರ್ ಮತ್ತು 7, 14, 21 ಮತ್ತು 28 ನವೆಂಬರ್ 2025 ರಂದು ಮಧ್ಯಾಹ್ನ 13:00 ಗಂಟೆಗೆ ಹೊರಟು ಮರುದಿನ 07:00 ಗಂಟೆಗೆ ಹೈದರಾಬಾದ್ ತಲುಪಲಿದೆ.
ಎಲ್ಲೆಲ್ಲಿ ನಿಲುಗಡೆ?
ಬೇಗಂಪೇಟೆ, ಲಿಂಗಂಪಲ್ಲಿ, ವಿಕಾರಾಬಾದ್, ತಾಂಡೂರು, ಸೇಡಂ, ಯಾದಗಿರಿ, ಕೃಷ್ಣಾ, ರಾಯಚೂರು, ಮಂತ್ರಾಲಯ ರೋಡ್, ಆದೋನಿ, ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಭಾನಾಪುರ, ಗದಗ, ಹುಬ್ಬಳ್ಳಿ, ಧಾರವಾಡ, ಅಳ್ನಾವರ ಮತ್ತು ಲೋಂಡಾ ನಿಲ್ದಾಣಗಳು.
ಎಷ್ಟು ಬೋಗಿಗಳು ಇರಲಿವೆ?
ಈ ವಿಶೇಷ ರೈಲು 22 ಬೋಗಿಗಳನ್ನು ಒಳಗೊಂಡಿದ್ದು, 1 ಎಸಿ ಪ್ರಥಮ ದರ್ಜೆ, 3 ಎಸಿ 2-ಟೈರ್, 4 ಎಸಿ 3-ಟೈರ್, 7 ಸ್ಲೀಪರ್‌ಕ್ಲಾಸ್, 1 ಪ್ಯಾಂಟ್ರಿ ಕಾರ್, 4 ಜನರಲ್ ಸೆಕೆಂಡ್ ಕ್ಲಾಸ್, 1 ಲಗೇಜ್/ಜನರೇಟರ್/ಬ್ರೇಕ್ ವ್ಯಾನ್ ಮತ್ತು 1 ಎಸ್’ಎಲ್’ಆರ್/ಡಿ ಕೋಚ್’ಗಳನ್ನು ಒಳಗೊಂಡಿರುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post