ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬೆಂಗಳೂರಿನ ಸಂಸ್ಥೆಯಾದ ನಟನ ತರಂಗಿಣಿ ಅಕಾಡೆಮಿ ಆಯೋಜಿಸಿದ್ದ ನಟನ ತಂಗಿಣಿ ಸಂಗೀತ- ನೃತ್ಯ ಶಾಲೆಯ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಪ್ರಸನ್ನ ವೆಂಕಟೇಶ್ವರ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಶಾಸ್ತಿçÃಯ ಸಂಗೀತ, ದೇವರ ನಾಮ, ನಾಮ ಸಂಕೀರ್ತನೆಯ ಸಾಮೂಹಿಕ ಪ್ರಸ್ತುತಿ, ಭರತನಾಟ್ಯ ಪ್ರದರ್ಶನಗಳಲ್ಲಿ ಶಾಲೆಯ ವಿದ್ಯಾರ್ಥಿ -ವಿದ್ಯಾರ್ಥಿನಿಯರು ಪಾಲ್ಗೊಂಡರು.
ಸಮನ್ವಿತ ಇವರಿಂದ ನಡೆದ ಭರತನಾಟ್ಯ ಪ್ರದರ್ಶನ ಅಮೋಘವಾಗಿ ಮೂಡಿಬಂದಿತು. ನರಸಿಂಹ ಕೌತ್ವಮ್, ಶ್ರೀಪದ್ಮಚರಣ್ ಅವರ ಶೃಂಗ ಪುರಾಧೀಶ್ವರಿ, ಶ್ರೀಪುರಂದರದಾಸರ ಆಡಿದನೋ ರಂಗ ಉತ್ತಮವಾಗಿ ನರ್ತಿಸಿದರು.
ಕು. ಹರಿಣೆ ಭಾರದ್ವಾಜ್ ಒಳ್ಳೆಯ ವೀಣಾ ವಾದನ ಕಾರ್ಯಕ್ರಮ ನೀಡಿದರೆ,ಕು. ಅಹಿಕ ನಾಗದೀಪ್ ಉತ್ತಮ ಗಾಯನ ಕಛೇರಿಯನ್ನು ನೀಡಿದರು.
ಕಾಮವರ್ದಿನಿ ರಾಗದ ಸಾಮಿ ನಿನ್ನೆ ವರ್ಣ, ಶ್ರೀತ್ಯಾಗರಾಜರ ಅಸಾವೇರಿರಾಗದ ಮಾಪಾಲವೆಲಸಿಕ, ಮೈಸೂರು ವಾಸುದೇವಾಚಾರ್ಯರ ಬಾಲಂಗೋಪಾಲಮಖಿಲ ಲೋಕಪಾಲಂ, ದೇವರನಾಮ, ಅಭಂಗ್, ನಾಮ ಸಂಕೀರ್ತನೆಗಳೊಂದಿಗೆ ಕೂಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಇನ್ನು, ಶಾಲೆಯ ವಿದ್ಯಾರ್ಥಿಗಳಿಂದ ಸಮೂಹ ಗಾಯನದಲ್ಲಿ ನಾಮ ಸಂಕೀರ್ತನೆ, ಸುನಾದ ವಿನೋದಿನಿ ತಂಡದಿAದ ಹಾಗೂ ಕು.ನಮ್ರತ ಇವರ ಗಾಯನ ನಡೆಯಿತು.
ಹನುಮಾನ್ ಚಾಲೀಸ, ಮಹಾಲಕ್ಷ್ಮೀ ಅಷ್ಟೋತ್ತರ, ಮಹಿಷಾಸುರ ಮರ್ದಿನಿ ಸ್ತೋತ್ರ, ತ್ಯಾಗರಾಜರ ಉತ್ಸವ ಸಂಪ್ರದಾಯ ಕೃತಿಗಳು, ಭದ್ರಾಚಲ ರಾಮದಾಸರ ರಚನೆಗಳು, ಮುತ್ತುಸ್ವಾಮಿ ದೀಕ್ಷಿತರ ನೋಟು ಸ್ವರಗಳು, ಹರಿದಾಸರ ಪದಗಳನ್ನು ಸುಶ್ರಾವ್ಯವಾಗಿ ಹಾಡಿದರು.
ಇನ್ನು, ಕು.ಅಭಿಜ್ಞ ರಾವ್ ಗಾಯನ ಕಾರ್ಯಕ್ರಮ ನೀಡಿದರು. ನಾರಾಯಣ ನಿನ್ನ ನಾಮದ, ಪಾಲಿಸೆ ಎನ್ನ, ಲಲಿತರಾಗದ ಶ್ರೀಮುತ್ತು ಸ್ವಾಮಿ ದೀಕ್ಷಿತರ ಹಿರಣ್ಮಯೀಂ ಲಕ್ಷ್ಮೀ, ವಾಚಸ್ಪತಿಯಲ್ಲಿ ಮುಖ್ಯ ಪ್ರಸ್ತುತಿಯಾಗಿ ಶ್ರೀಸ್ವಾತಿ ತಿರುನಾಳ್ಮಹಾರಾಜರ ‘ಪಾಹಿಜಗದ್ಜನನಿ, ಚಂದ್ರಶೇಖರ ಭಾರತೀ ಸ್ವಾಮಿಗಳ ಶಾರದೆ ಕರುಣಾನಿಧೇ, ಶ್ರೀಕನಕದಾಸರ ರಾಮ ಗೋವಿಂದಹರೇ ಮುಂತಾದ ಒಳ್ಳೆಯ ಆಯ್ಕೆಗಳೊಂದಿಗೆ ಉತ್ತಮ ಪ್ರದರ್ಶನ ನೀಡಿದರು.
ದೇವಸ್ಥಾನದ ಅರ್ಚಕರಿಗೂ ಹಾಗೂ ಮುಖ್ಯಸ್ಥರಾದ ಡಾ.ಬಿಂದುರಾಜ ಶೇಖರ ದಂಪತಿಗಳಿಗೂ ನಟನ ತರಂಗಿಣಿ ಸಂಸ್ಥೆಯು ಅನಂತ ಧನ್ಯವಾದಗಳನ್ನು ಕೋರಿದೆ. ಇದೇ ರೀತಿಯ ಜಂಟಿ ಆಯೋಗದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಕೈಗೊಳ್ಳಲು ಉದ್ಯುಕ್ತವಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post