ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ #Newdelhi ಭಾರೀ ದಾಳಿಗೆ ಸಂಚು ರೂಪಿಸಿದ್ದ ಇಬ್ಬರು ಶಂಕಿತ ಐಸಿಸ್ ಉಗ್ರರನ್ನು ದೆಹಲಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಈ ಕುರಿತಂತೆ ಇಂದು ವರದಿಯಾಗಿದ್ದು, ದೀಪಾವಳಿಯಂದು ದಕ್ಷಿಣ ದೆಹಲಿಯ ಮಾಲ್ ಹಾಗೂ ಸಾರ್ವಜನಿಕ ಉದ್ಯಾನವನ ಸೇರಿದಂತೆ ಹಲವು ಕಡೆಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಹೇಳಲಾಗಿದೆ.
ಶಂಕಿತ ಐಸಿಸ್ #ISIS ಉಗ್ರರರನ್ನು ದೆಹಲಿಯ ಸಾದಿಕ್ ನಗರ ನಿವಾಸಿ ಅದ್ನಾನ್ ಮತ್ತು ಇನ್ನೊಬ್ಬ ಭೋಪಾಲ್ ಮೂಲದ ವ್ಯಕ್ತಿ ಎಂದು ಗುರುತಿಸಲಾಗಿದೆ ಎಂದು ವರದಿಯಾಗಿದೆ.
ಈ ಬಂಧನ ದೆಹಲಿಯಲ್ಲಿ ಸಂಭವನೀಯ ಭಯೋತ್ಪಾದಕ ದಾಳಿಯನ್ನು #TerroristAttack ತಪ್ಪಿಸಿದೆ.

ಶಂಕಿತ ಉಗ್ರರಿಂದ ಐಇಡಿಗಾಗಿ ಟೈಮರ್ ಮಾಡಲು ಅವರು ಬಳಸುತ್ತಿದ್ದ ಗಡಿಯಾರ ಮತ್ತು ಐಇಡಿ ತಯಾರಿಸಲು ಅಗತ್ಯವಾದ ವಸ್ತುಗಳನ್ನು ಸಂಗ್ರಹಿಸಲು ಹೋಗುತ್ತಿದ್ದ ಸ್ಥಳಗಳ ಫೋಟೋಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಅಲ್ಲದೇ, ಐಸಿಸ್’ಗೆ ನಿಷ್ಠರಾಗಿ ಪ್ರತಿಜ್ಞೆ ತೆಗೆದುಕೊಳ್ಳುತ್ತಿರುವ ವಿಡಿಯೋ ಮತ್ತು ದೆಹಲಿಯಲ್ಲಿ ಸ್ಫೋಟ ನಡೆಸಲು ಅವರು ಯೋಜಿಸುತ್ತಿರುವ ಸ್ಥಳಗಳ ಫೋಟೋಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ದಕ್ಷಿಣ ದೆಹಲಿಯ ಮಾಲ್ ಮತ್ತು ಸಾರ್ವಜನಿಕ ಉದ್ಯಾನವನ ಸೇರಿದಂತೆ ದೆಹಲಿಯಲ್ಲಿ ದಾಳಿ ನಡೆಸಲು ಯೋಜಿಸುತ್ತಿರುವ ಸ್ಥಳಗಳ ಪರಿಶೀಲನೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post