ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಈಗಾಗಲೇ ಹಲವು ಸಾಧನೆಗಳನ್ನು ಮಾಡಿರುವ ಭಾರತೀಯ ರೈಲ್ವೆಯ ಹುಬ್ಬಳ್ಳಿ ವಿಭಾಗ #Indian Railway Hubli Division ಈಗ ಮತ್ತೊಂದು ದಾಖಲೆ ಬರೆದಿದ್ದು, ಸರಕು ಲೋಡಿಂಗ್’ನಲ್ಲಿ ದೇಶದಲ್ಲೇ ಪ್ರಥಮ ಸ್ಥಾನ ಗಳಿಸಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತೀಯ ರೈಲ್ವೆಯ ಎಲ್ಲಾ 70 ವಿಭಾಗಗಳ ಪೈಕಿ ಸರಕು ಲೋಡಿಂಗ್ ಸುಧಾರಣೆಯಲ್ಲಿ ಮೊದಲ ಸ್ಥಾನವನ್ನು ಪಡೆದು ಮಹತ್ತರ ಸಾಧನೆ ಮಾಡಿದೆ.

ರೈಲ್ವೆ ಬೋರ್ಡ್’ನ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಹುಬ್ಬಳ್ಳಿ ವಿಭಾಗವು ಈ ವರ್ಷ 20.78 ಮಿಲಿಯನ್ ಟನ್ ಸರಕುಗಳನ್ನು ಲೋಡ್ ಮಾಡಿದ್ದು, ಹಿಂದಿನ ವರ್ಷದ 16.42 ಮಿಲಿಯನ್ ಟನ್’ಗೆ ಹೋಲಿಸಿದರೆ 4.36 ಮಿಲಿಯನ್ ಟನ್ (26.57%) ವೃದ್ಧಿಯನ್ನು ಸಾಧಿಸಿದೆ.
ವರ್ಷಕ್ಕೆ 10 ಮಿಲಿಯನ್ ಟನ್’ಗಿಂತ ಹೆಚ್ಚು ಸರಕುಗಳನ್ನು ನಿರ್ವಹಿಸುವ ಎಲ್ಲಾ ವಿಭಾಗಗಳ ಪೈಕಿ ಇದು ಅತ್ಯಧಿಕ ಸುಧಾರಣೆ ದಾಖಲಿಸಿದ ವಿಭಾಗವಾಗಿದೆ. ಈ ಸಾಧನೆ ಮೂಲಸೌಕರ್ಯ ವೃದ್ಧಿ, ಸರಕು ಬೋಗಿಗಳ ಸಮರ್ಪಕ ಅನುಷ್ಠಾನ, ಟರ್ಮಿನಲ್ ಹ್ಯಾಂಡ್ಲಿAಗ್ ಸುಧಾರಣೆ ಹಾಗೂ ವೇಗವಾದ ರೇಕ್ ಟರ್ನ್ ಅರೌಂಡ್ ಖಾತ್ರಿಪಡಿಸುವಲ್ಲಿ ರೈಲ್ವೆಯ ನಿಷ್ಠಾವಂತ ಪ್ರಯತ್ನಗಳನ್ನು ತೋರಿಸಿದೆ.

ವಿಭಾಗದ ರೈಲ್ವೆ ವ್ಯವಸ್ಥಾಪಕರಾದ ಬೇಲಾ ಮೀನಾ ಅವರ ನೇತೃತ್ವದಲ್ಲಿ ವಿಭಾಗವು ಗ್ರಾಹಕರ ಅನುಭವವನ್ನು ಸುಧಾರಿಸಲು ಮತ್ತು ಕೈಗಾರಿಕೆಗಳಿಗೆ ನವೀನ ಕ್ರಮಗಳನ್ನು ತೆಗೆದುಕೊಂಡಿದೆ.
ವಿಭಾಗವು ಕಲ್ಲಿದ್ದಲು, ಕಬ್ಬಿಣ, ಉಕ್ಕು, ಸಿಮೆಂಟ್, ಧಾನ್ಯಗಳು ಮತ್ತು ರಸಗೊಬ್ಬರಗಳು ಸೇರಿದಂತೆ ವಿವಿಧ ವಾಣಿಜ್ಯ ಸರಕುಗಳ ಲೋಡಿಂಗ್’ನಲ್ಲಿ ಗಣನೀಯ ವೈವಿಧ್ಯತೆ ಸಾಧಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post