ಕಲ್ಪ ಮೀಡಿಯಾ ಹೌಸ್ | ಬೀದರ್ |
ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ವಿವಿಧ ಹಬ್ಬಗಳ ಸಂದರ್ಭದ ಅಂಗವಾಗಿ ಬೆಂಗಳೂರು ಹಾಗೂ ಬೀದರ್ ನಡುವಿನ ವಿಶೇಷ ಎಕ್ಸ್’ಪ್ರೆಸ್ ರೈಲುಗಳ #Bangalore-Bidar Special Express Train ಸೇವೆಯ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ನೀಡಿದ್ದು, ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಹಬ್ಬದ ಸಂದರ್ಭದಲ್ಲಿ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, ನೈಋತ್ಯ ರೈಲ್ವೆಯು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಬೀರ್ದ ನಡುವೆ ಸಂಚರಿಸುವ ವಿಶೇಷ ಎಕ್ಸ್’ಪ್ರೆಸ್ ರೈಲು ಸೇವೆಗಳ ಅವಧಿಯನ್ನು ವಿಸ್ತರಿಸಿದೆ.

ಅದೇ ರೀತಿ, ರೈಲು ಸಂಖ್ಯೆ 06540 ಬೀದರ್’ನಿಂದ ಎಸ್’ಎಂವಿಟಿ ಬೆಂಗಳೂರಿಗೆ ಪ್ರತಿ ಶನಿವಾರ ಮತ್ತು ಸೋಮವಾರ ನವೆಂಬರ 1, 2025ರವರೆಗೆ ಸಂಚರಿಸಲಿದ್ದು, ಇದರ ಸೇವೆಯನ್ನು ನವೆಂಬರ್ 3, 2025 ರಿಂದ ಡಿಸೆಂಬರ್ 29, 2025ರವರೆಗೆ ವಿಸ್ತರಿಸಲಾಗಿದೆ.
ಈ ವಿಸ್ತÈತ ಅವಧಿಯಲ್ಲಿ, ಎರಡೂ ದಿಕ್ಕುಗಳಲ್ಲಿ ತಲಾ 17 ಟ್ರಿಪ್’ಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ. ಈ ವಿಶೇಷ ರೈಲುಗಳು ಈಗಿರುವ ನಿಲುಗಡೆಗಳು, ವೇಳಾಪಟ್ಟಿ ಮತ್ತು ಬೋಗಿಗಳ ಸಂಯೋಜನೆಯಲ್ಲಿಯೇ ಸಂಚಾರ ಮುಂದುವರೆಸಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post