ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ನೌಕರರು, ಪಾಲುದಾರರು ಹಾಗೂ ನಾಗರಿಕರು ದಿನನಿತ್ಯ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯನ್ನು ಅಳವಡಿಸಿಕೊಳ್ಳಿ ಎಂದು ನೈಋತ್ಯ ರೈಲ್ವೆಯ #Southwestern Railway ಪ್ರಧಾನ ವ್ಯವಸ್ಥಾಪಕರಾದ ಮುಕುಲ್ ಸರನ್ ಮಾಥುರ್ ಕರೆ ನೀಡಿದರು.
2025ರ ವಿಜಿಲೆನ್ಸ್ ಜಾಗೃತಿ ಸಪ್ತಾಹದ #Vigilance Awareness Week ಅಂಗವಾಗಿ ವಲಯದಾದ್ಯಂತ ಆಯೋಜಿಸಲಾದ ವಿವಿಧ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳ ಕುರಿತು ಸಭೆಗೆ ಮಾಹಿತಿ ನೀಡಿ, ಅವರು ಮಾತನಾಡಿದರು.

ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಮುಕುಲ್ ಸರನ್ ಮಾರ್ಥು ಅವರು ಪ್ರಧಾನ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಮಗ್ರತಾ ಪ್ರತಿಜ್ಞೆ ಬೋಧಿಸಿದರು.

ದೇಶದಾದ್ಯಂತ ಅಕ್ಟೋಬರ್27ರಿಂದ ನವೆಂಬರ್ 2ರವರೆಗೆ ನಡೆಯುತ್ತಿರುವ ಈ ವಾರದ ಆಚರಣೆಯ ಥೀಮ್ ವಿಜಿಲೆನ್ಸ್: ನಮ್ಮ ಹಂಚಿಕೆಯ ಜವಾಬ್ದಾರಿ ಎಂದು ನಿಗದಿಯಾಗಿದೆ.
ಇದೇ ಸಂದರ್ಭದಲ್ಲಿ ಅವರು ವಿಜಿಲೆನ್ಸ್ ಜಾಗೃತಿ ವಿಷಯಾಧಾರಿತ ಪೋಸ್ಟರ್’ಗಳನ್ನು ಅನಾವರಣಗೊಳಿಸಿದರು.
ಪ್ರಧಾನ ವ್ಯವಸ್ಥಾಪಕರು ಹಾಗೂ ಹಿರಿಯ ಅಧಿಕಾರಿಗಳು ರೈಲ್ ಸೌಧದ ಇಂಟೆಗ್ರಿಟಿ ಗಾರ್ಡರ್’ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, ಸಸಿಯನ್ನು ನೆಟ್ಟರು. ನೈಋತ್ಯ ರೈಲ್ವೆಯ ಎ¯್ಲÁ ವಿಭಾಗಗಳು, ಘಟಕಗಳು ಹಾಗೂ ಕಚೇರಿಗಳಲ್ಲಿಯೂ ಸಮಗ್ರತಾ ಪ್ರತಿಜ್ಞೆಯನ್ನು ಬೋಧಿಸಲಾಯಿತು.

ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾದ ಪಿ. ಅನಂತ್, ಇಲಾಖೆಗಳ ಪ್ರಧಾನ ಮುಖ್ಯಸ್ಥರು ಹಾಗೂ ಇತರ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post