ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಂಡಕಂಡಲ್ಲಿ ಕಸ ಎಸೆಯುತ್ತಿದ್ದ ಜನರಿಗೆ BSWML ಅಧಿಕಾರಿಗಳು ಮುಟ್ಟಿ ನೋಡಿಕೊಳ್ಳುವಂತಹ ಪಾಠ ಕಲಿಸಿದ್ದಾರೆ.
ಹೌದು… ಬನಶಂಕರಿ 2ನೇ ಹಂತದ ದತ್ತಾತ್ರೇಯ ದೇವಾಲಯದ ರಸ್ತೆಯಲ್ಲಿ ನಿವಾಸಿಗಳು ಕಸ ಸಂಗ್ರಹಣಾ ಆಟೋ ಬಂದರೂ ಕಸ ನೀಡದೆ, ನೇರವಾಗಿ ರಸ್ತೆಗೆ ತ್ಯಾಜ್ಯ ಎಸೆಯುತ್ತಿದ್ದರು. ಇದನ್ನು ಗಮನಿಸಿದ ಬಿಎಸ್’ಡಬ್ಲ್ಯೂಎಂಎಲ್ ಸಿಬ್ಬಂದಿ, ಆ ಕಸದನ್ನೇ ಎತ್ತಿ ಅದನ್ನು ಹಾಕಿದವರ ಮನೆ ಮುಂದೆ ಸುರಿದು 100 ದಂಡ ವಿಧಿಸಿದ್ದಾರೆ.

ನಗರದ ಸ್ವಚ್ಛತೆ ಕಾಪಾಡಲು ಸಿಬ್ಬಂದಿ ಕೈಗೊಂಡ ಈ ನೂತನ ವಿಧಾನ ಈಗ ಪಾಠ ಕಲಿಸುವ ಶೈಲಿ ಎಂದು ಶ್ಲಾಘನೆಗೆ ಪಾತ್ರವಾಗಿದೆ.
BSWML ಅಧಿಕಾರಿಗಳು ಕಸವನ್ನು ನಿಗದಿತ ಸಮಯದಲ್ಲಿ ಆಟೋಗಳಿಗೆ ನೀಡುವಂತೆ ನಿವಾಸಿಗಳಿಗೆ ಮನವಿ ಮಾಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವುದರಿಂದ ಪರಿಸರ ಮಾಲಿನ್ಯ ಹೆಚ್ಚುತ್ತದೆ ಎಂದು ಎಚ್ಚರಿಸಿದ್ದಾರೆ.
ನಿಗದಿತ ಕಸದ ಗಾಡಿಯಲ್ಲಿ ಹಾಕದೇ ಕಂಡ ಕಂಡಲ್ಲಿ ಕಸ ಎಸೆದುಹೋಗುವ ಜನರಿಗೆ BSWML ಅಧಿಕಾರಿಗಳ ಈ ಕ್ರಮ ಎಚ್ಚರಿಕೆಯ ಗಂಟೆಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post