ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದ್ದು, ನಟ ಪ್ರಕಾಶ್ ಹಾಗೂ ನಿರ್ಮಾಪಕಿ ವಿಜಯಲಕ್ಷ್ಮಿ ಸಿಂಗ್ ಅವರುಗಳು ಆಯ್ಕೆಯಾಗಿದ್ದಾರೆ.
ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ ಇಂದು ಘೋಷಣೆಯಾಗಿದ್ದು, ಇಬ್ಬರು ಕಲಾವಿದರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಈ ಬಾರಿ ಒಟ್ಟು 70 ಸಾಧಕರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಮುಖವಾಗಿ, ಇದೇ ಮೊದಲ ಬಾರಿಗೆ ಯಾವುದೇ ಅರ್ಜಿ ಆಹ್ವಾನಿಸದೆ ಈ ಆಯ್ಕೆ ನಡೆದಿದೆ.
ಜಿಲ್ಲಾವಾರು, ಸಾಮಾಜಿಕ ಪರಿಪಾಲನೆ, ಹಾಗೂ ಆಯ್ಕೆ ಸಮಿತಿ ಶಿಫಾರಸ್ಸುಗಳ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆದಿದೆ. ಈ ಬಾರಿ 12 ಮಹಿಳೆಯರು ಹಾಗೂ ಸಮಗಾರ ಹರಳಯ್ಯ ಸಮುದಾಯದ ಇಬ್ಬರು ಪ್ರತಿಭೆಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಆಯ್ಕೆ ಸಲಹಾ ಸಮಿತಿ ಸದಸ್ಯರು ಶಿಫಾರಸ್ಸು ಮಾಡಿದ್ದವರನ್ನು ಬಹುತೇಕ ಆಯ್ಕೆ ಮಾಡಲಾಗಿದೆ.
ಚಲನಚಿತ್ರ /ಕಿರುತೆರೆ
ಪ್ರಕಾಶ್ ರಾಜ್ ದಕ್ಷಿಣ ಕನ್ನಡ
ಮತಿ ವಿಜಯಲಕ್ಷ್ಮಿ ಸಿಂಗ್ ಕೊಡಗು
ಆಡಳಿತ/ ವೈದ್ಯಕೀಯ
ಎಚ್. ಸಿದ್ದಯ್ಯ ಭಾ.ಆ.ಸೇ(ನಿ) ಬೆಂಗಳೂರು ದಕ್ಷಿಣ (ರಾಮನಗರ)
ಡಾ. ಆಲಮ್ಮ ಮಾರಣ್ಣ ತುಮಕೂರು
ಡಾ. ಜಯರಂಗನಾಥ್ ಬೆಂಗಳೂರು ಗ್ರಾಮಾಂತರ
ಸಾಹಿತ್ಯ ಕ್ಷೇತ್ರ
ಪ್ರೊ. ರಾಜೇಂದ್ರ ಚೆನ್ನಿ ಶಿವಮೊಗ್ಗ
ತುಂಬಾಡಿ ರಾಮಯ್ಯ ತುಮಕೂರು
ಪ್ರೊ.ಆರ್ ಸುನಂದಮ್ಮ ಚಿಕ್ಕಬಳ್ಳಾಪುರ
ಡಾ.ಎಚ್.ಎಲ್. ಪುಷ್ಪ ತುಮಕೂರು
ರಹಮತ್ ತರೀಕೆರೆ ಚಿಕ್ಕಮಗಳೂರು
ಹ.ಮ. ಪೂಜಾರ ವಿಜಯಪುರ
ಜಾನಪದ
ಬಸಪ್ಪ ಭರಮಪ್ಪ ಚೌಡ್ಕಿ ಕೊಪ್ಪಳ
ಬಿ. ಟಾಕಪ್ಪ ಕಣ್ಣೂರು ಶಿವಮೊಗ್ಗ
ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ ಬೆಳಗಾವಿ
ಹನುಮಂತಪ್ಪ, ಮಾರಪ್ಪ, ಚೀಳಂಗಿ ಚಿತ್ರದುರ್ಗ
ಎಂ. ತೋಪಣ್ಣ ಕೋಲಾರ
ಸೋಮಣ್ಣ ದುಂಡಪ್ಪ ಧನಗೊಂಡ ವಿಜಯಪುರ
ಮತಿ ಸಿಂಧು ಗುಜರನ್ ದಕ್ಷಿಣ ಕನ್ನಡ
ಎಲ್. ಮಹದೇವಪ್ಪ ಉಡಿಗಾಲ ಮೈಸೂರು
ಸಮಾಜ ಸೇವೆ
ಮತಿ ಸೂಲಗಿತ್ತಿ ಈರಮ್ಮ ವಿಜಯನಗರ
ಮತಿ ಫಕ್ಕೀರಿ ಬೆಂಗಳೂರು ಗ್ರಾಮಾಂತರ
ಮತಿ ಕೋರಿನ್ ಆಂಟೊನಿಯಟ್ ರಸ್ಕೀನಾ ದಕ್ಷಿಣ ಕನ್ನಡ
ಡಾ. ಎನ್. ಸೀತಾರಾಮ ಶೆಟ್ಟಿ ಉಡುಪಿ
ಕೋಣಂದೂರು ಲಿಂಗಪ್ಪ, ಶಿವಮೊಗ್ಗ
ಸಂಕೀರ್ಣ
ಉಮೇಶ ಪಂಬದ ದಕ್ಷಿಣ ಕನ್ನಡ
ಡಾ. ರವೀಂದ್ರ ಕೋರಿಶೆಟ್ಟಿರ್ ಧಾರವಾಡ
ಕೆ. ದಿನೇಶ್ ಬೆಂಗಳೂರು
ಶಾಂತರಾಜು ತುಮಕೂರು
ಜಾಫರ್ ಮೊಹಿಯುದ್ದೀನ್ ರಾಯಚೂರು
ಪೆನ್ನ ಓಬಳಯ್ಯ ಬೆಂಗಳೂರು ಗ್ರಾಮಾಂತರ
ಶಾಂತಿ ಬಾಯಿ ಬಳ್ಳಾರಿ
ಪುಂಡಲೀಕ ಶಾಸ್ತ್ರಿ(ಬುಡಬುಡಕೆ) ಬೆಳಗಾವಿ
ಹೊರನಾಡು/ ಹೊರದೇಶ
ಜಕರಿಯ ಬಜಪೆ (ಸೌದಿ)
ಪಿ.ವಿ. ಶೆಟ್ಟಿ (ಮುಂಬೈ)
ಸಂಗೀತ/ ನೃತ್ಯ ಕ್ಷೇತ್ರ
ದೇವೆಂದ್ರಕುಮಾರ ಪತ್ತಾರ್ ಕೊಪ್ಪಳ
ಮಡಿವಾಳಯ್ಯ ಸಾಲಿ ಬೀದರ್
ಪ್ರೊ. ಕೆ. ರಾಮಮೂರ್ತಿ ರಾವ್ ಮೈಸೂರು
ಪರಿಸರ
ರಾಮೇಗೌಡ ಚಾಮರಾಜನಗರ
ಮಲ್ಲಿಕಾರ್ಜುನ ನಿಂಗಪ್ಪ ಯಾದಗಿರಿ
ಕೃಷಿ
ಡಾ.ಎಸ್.ವಿ. ಹಿತ್ತಲಮನಿ ಹಾವೇರಿ
ಎಂ.ಸಿ. ರಂಗಸ್ವಾಮಿ ಹಾಸನ
ಮಾಧ್ಯಮ ಕ್ಷೇತ್ರ
ಕೆ.ಸುಬ್ರಮಣ್ಯ ಬೆಂಗಳೂರು
ಅಂಶಿ ಪ್ರಸನ್ನಕುರ್ಮಾ ಮೈಸೂರು
ಬಿ.ಎಂ ಹನೀಫ್ ದಕ್ಷಿಣ ಕನ್ನಡ
ಎಂ ಸಿದ್ಧರಾಜು ಮಂಡ್ಯ
ವಿಜ್ಞಾನ ತಂತ್ರಜ್ಞಾನ
ರಾಮಯ್ಯ ಚಿಕ್ಕಬಳ್ಳಾಪುರ
ಏರ್ ಮಾರ್ಷಲ್ ಫೀಲೀಫ್ ರಾಜಕುಮಾರ್ ದಾವಣಗೆರೆ
ಡಾ. ಆರ್.ವಿ. ನಾಡಗೌಡ ಗದಗ
ಸಹಕಾರ
ಶೇಖರಗೌಡ ವಿ ಮಾಲಿಪಾಟೀಲ್ ಕೊಪ್ಪಳ
ಯಕ್ಷಗಾನ/ ಬಯಲಾಟ/ ರಂಗಭೂಮಿ
ಕೋಟ ಸುರೇಶ ಬಂಗೇರ ಉಡುಪಿ
ಐರಬೈಲ್‌ಆನಂದ ಶೆಟ್ಟಿ ಉಡುಪಿ
ಕೃಷ್ಣ ಪರಮೇಶ್ವರ ಹೆಗಡೆ (ಕೆ.ಪಿ. ಹೆಗಡೆ) ಉತ್ತರ ಕನ್ನಡ
ಬಯಲಾಟ:
ಗುಂಡೂರಾಜ್ ಹಾಸನ
ರಂಗಭೂಮಿ:
ಎಚ್.ಎಂ. ಪರಮಶಿವಯ್ಯ ಬೆಂಗಳೂರು ದಕ್ಷಿಣ (ರಾಮನಗರ)
ಎಲ್.ಬಿ.ಶೇಖ್ (ಮಾಸ್ತರ್) ವಿಜಯಪುರ
ಬಂಗಾರಪ್ಪ ಖುದಾನ್ಪುರ ಬೆಂಗಳೂರು
ಮೈಮ್ ರಮೇಶ್ ದಕ್ಷಿಣ ಕನ್ನಡ
ಡಿ.ರತ್ನಮ್ಮ ದೇಸಾಯಿ ರಾಯಚೂರು
ಶಿಕ್ಷಣ ಕ್ಷೇತ್ರ
ಡಾ. ಎಂ.ಆರ್. ಜಯರಾಮ್ ಬೆಂಗಳೂರು
ಡಾ. ಎನ್.ಎಸ್. ರಾಮೇಗೌಡ ಮೈಸೂರು
ಎಸ್.ಬಿ. ಹೊಸಮನಿ ಕಲಬುರಗಿ
ನಾಗರಾಜು ಬೆಳಗಾವಿ
ಕ್ರೀಡೆ
ಆಶೀಶ್ ಕುಮಾರ್ ಬಲ್ಲಾಳ್ ಬೆಂಗಳೂರು
ಎಂ ಯೋಗೇಂದ್ರ ಮೈಸೂರು
ಡಾ. ಬಬಿನಾ ಎನ್.ಎಂ (ಯೋಗ) ಕೊಡಗು
ನ್ಯಾಯಾಂಗ
ನ್ಯಾ. ಪಿ.ಬಿ. ಭಜಂತ್ರಿ (ಪವನ್ ಕುಮಾರ್ ಭಜಂತ್ರಿ ) ಬಾಗಲಕೋಟೆ
ಶಿಲ್ಪಕಲೆ/ ಚಿತ್ರಕಲೆ/ ಕರಕುಶಲ
ಬಸಣ್ಣ ಮೋನಪ್ಪ ಬಡಿಗೇರ ಯಾದಗಿರಿ
ನಾಗಲಿಂಗಪ್ಪ ಜಿ ಗಂಗೂರ ಬಾಗಲಕೋಟೆ
ಬಿ ಮಾರುತಿ ವಿಜಯನಗರ
ಎಲ್. ಹೇಮಾಶೇಖರ್ ಮೈಸೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















