ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ತಾಲ್ಲೂಕಿನ ಕಲ್ಮನೆ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ ಶಿವಮೊಗ್ಗದ ಸಸ್ಯರೋಗ ಶಾಸ್ತ್ರಜ್ಞರಾದ ಡಾ. ನರಸಿಂಹಮೂರ್ತಿ ಮತ್ತು ವಿಸ್ತರಣಾ ಶಿಕ್ಷಣ ವಿಭಾಗದ ಡಾ. ಸಹನಾ ರೈತರ ಅಡಿಕೆ ತೋಟ ಮತ್ತು ಭತ್ತದ ಹೊಲಗಳಿಗೆ ಭೇಟಿ ನೀಡಿ, ಬೆಳೆಯ ಸ್ಥಿತಿ ಹಾಗೂ ಕೀಟ-ರೋಗಗಳ ಕುರಿತು ಪರಿಶೀಲನೆ ನಡೆಸಿದರು.
ವಿಜ್ಞಾನಿಗಳು ಭೀಮನಗೌಡ ಮತ್ತು ಹತ್ತಿರದ ರೈತರ ತೋಟಗಳಲ್ಲಿ ಕಂಡುಬಂದ ಬೆಳೆಯ ಸಮಸ್ಯೆಗಳನ್ನು ನೇರವಾಗಿ ವಿಶ್ಲೇಷಿಸಿದರು.
ಅಡಿಕೆ ತೋಟಗಳಲ್ಲಿ ಪ್ರಮುಖವಾಗಿ ಹಿಡಿಮುಂಡಿಗೆ , ಕೊಳೆರೋಗ, ಅಂಡೋಡಕ, ಹಿಂಗಾರು ಒಣಗುವಿಕೆ , ಕಾಂಡ ಬಿರುಕು, ಎಲೆಚುಕ್ಕೆರೋಗ ಇತ್ಯಾದಿ ಸಮಸ್ಯೆಗಳು ಕಂಡುಬಂದಿದ್ದು, ವಿಜ್ಞಾನಿಗಳು ರೋಗ ಗುರುತು ಮತ್ತು ಹರಡುವಿಕೆಯ ಬಗ್ಗೆ ವಿವರಿಸಿ, ಸೂಕ್ತ ನಿರ್ವಹಣಾ ಕ್ರಮಗಳಾದ ರಾಸಾಯನಿಕ ಸಿಂಪಡಣೆ, ಸರಿಯಾದ ನೀರಿನ ಹಾಯ್ ನಿಯಂತ್ರಣ, ಸಮತೋಲಿತ ಪೋಷಕಾಂಶ ನಿರ್ವಹಣೆ ಮುಂತಾದ ಸಲಹೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ರೈತರು ಭೀಮನಗೌಡ, ಕುಮಾರಸ್ವಾಮಿ, ರುದ್ರಮುನಿ, ಮಂಜಪ್ಪ, ಶಿವಮೂರ್ತಪ್ಪ, ಶಾಂತಮ್ಮ, ಮಂಜುನಾಥ, ರಾಕೇಶ್, ರವಿಕುಮಾರ, ಗೌಡ್ರು ಸಂದೀಪ್ ಹಾಗೂ ಬಸವನಗೌಡ ಮತ್ತು ಇತರರು ಉಪಸ್ಥಿತರಿದ್ದರು.

ವಿಜ್ಞಾನಿಗಳ ಈ ಸ್ಥಳೀಯ ಭೇಟಿ ಮತ್ತು ಸಂವಾದದಿಂದ ರೈತರಿಗೆ ರೋಗ-ಕೀಟ ನಿರ್ವಹಣೆ, ಪೋಷಕಾಂಶ ಪೂರೈಕೆ ಹಾಗೂ ಬೆಳೆ ಉತ್ಪಾದಕತೆ ವೃದ್ಧಿ ಕುರಿತು ಹೊಸ ಅರಿವು ಮತ್ತು ಆತ್ಮವಿಶ್ವಾಸ ಮೂಡಿದೆ. ರೈತರು ಈ ಭೇಟಿಯನ್ನು ಅತ್ಯಂತ ಉಪಯುಕ್ತವೆಂದು ಶ್ಲಾಘಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post