ಕಲ್ಪ ಮೀಡಿಯಾ ಹೌಸ್ | ಮೈಸೂರು |
ದಕ್ಷಿಣ ಮಧ್ಯ ರೈಲ್ವೆಯು #South Central Railway ರೈಲು ಸಂಖ್ಯೆ 07033/34 ನರಸಾಪುರ – ಮೈಸೂರು – ನರಸಾಪುರ ವಿಶೇಷ ಎಕ್ಸ್‌ಪ್ರೆಸ್ ರೈಲಿನ #Narasapura-Mysore-Narasapura Special Express Train ಸಂಚಾರವನ್ನು ನವೆಂಬರ್ 3, 2025 ರಿಂದ ನವೆಂಬರ್ 29, 2025 ರವರೆಗೆ ಕಾಕಿನಾಡ ಟೌನ್‌ವರೆಗೆ ವಿಸ್ತರಿಸಲು ಸೂಚಿಸಿದೆ.
ಈ ಮೊದಲು ನರಸಾಪುರ ಮತ್ತು ಮೈಸೂರು ನಡುವೆ ಸಂಚರಿಸುತ್ತಿದ್ದ ರೈಲು ಸಂಖ್ಯೆ 07033, ಈಗ ನವೆಂಬರ್ 3, 2025 ರಿಂದ ನವೆಂಬರ್ 28, 2025 ರವರೆಗೆ ಕಾಕಿನಾಡ ಟೌನ್ ಮತ್ತು ಮೈಸೂರು ನಡುವೆ ಕಾರ್ಯಾಚರಣೆ ಮಾಡಲಿದೆ. ಅದೇ ರೀತಿ, ಈ ಮೊದಲು ಮೈಸೂರು ಮತ್ತು ನರಸಾಪುರ ನಡುವೆ ಸಂಚರಿಸುತ್ತಿದ್ದ ರೈಲು ಸಂಖ್ಯೆ 07034, ಈಗ ನವೆಂಬರ್ 4, 2025 ರಿಂದ ನವೆಂಬರ್ 29, 2025 ರವರೆಗೆ ಮೈಸೂರು ಮತ್ತು ಕಾಕಿನಾಡ ಟೌನ್ ನಡುವೆ ಸಂಚರಿಸಲಿದೆ.

ಹಿಂತಿರುಗುವ ಪ್ರಯಾಣದಲ್ಲಿ, ರೈಲು ಸಂಖ್ಯೆ 07034 ಮೈಸೂರು – ಕಾಕಿನಾಡ ಟೌನ್ ವಿಶೇಷ ಎಕ್ಸ್‌ಪ್ರೆಸ್ ರೈಲು ಮೈಸೂರಿನಿಂದ ಸಂಜೆ 5:20 ಗಂಟೆಗೆ ಹೊರಟು, ಮರುದಿನ ರಾತ್ರಿ 11 ಗಂಟೆಗೆ ಕಾಕಿನಾಡ ಟೌನ್ ತಲುಪಲಿದೆ.
ಮಾರ್ಗದಲ್ಲಿ, ಈ ರೈಲುಗಳು ಸಮಲಕೋಟೆ, ರಾಜಮಂಡ್ರಿ, ನಿಡದವೋಲು, ತನುಕು, ಭೀಮಾವರಂ ಟೌನ್, ಅಕಿವಿಡು, ಕೈಕಲೂರು, ಗುಡಿವಾಡ, ವಿಜಯವಾಡ, ಗುಂಟೂರು, ಸತ್ತೇನಪಲ್ಲಿ, ಪಿಡುಗುರಲ್ಲ, ನಾದಿಕುಡೆ, ಮರಿಯಾಲಗೂಡ, ನಲ್ಗೊಂಡ, ಸಿಕಂದರಾಬಾದ್, ಬೇಗಂಪೇಟ್, ಲಿಂಗಂಪಲ್ಲಿ, ವಿಕಾರಾಬಾದ್, ತಾಂಡೂರು, ಸೇಡಂ, ಯಾದಗಿರಿ, ಕೃಷ್ಣ, ರಾಯಚೂರು, ಮಂತ್ರಾಲಯಂ ರೋಡ್, ಆದೋನಿ, ಗುತ್ತಿ, ಅನಂತಪುರ, ಧರ್ಮಾವರಂ, ಹಿಂದೂಪುರ, ಯಲಹಂಕ, ಬೆಂಗಳೂರು ಕಂಟೋನ್ಮೆಂಟ್, ಕೆಎಸ್ಆರ್ ಬೆಂಗಳೂರು, ಮತ್ತು ಮಂಡ್ಯ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.

ರೈಲಿನ ಸಂಯೋಜನೆಯಲ್ಲಿ ಒಟ್ಟು 23 ಬೋಗಿಗಳು ಇರಲಿವೆ: 01 ಪ್ರಥಮ ಎಸಿ ಮತ್ತು ದ್ವಿತೀಯ ಎಸಿ ಬೋಗಿ, 01 ಎಸಿ 2-ಟೈರ್ ಬೋಗಿ, 05 ಎಸಿ 3-ಟೈರ್ ಬೋಗಿಗಳು, 11 ಸ್ಲೀಪರ್ ಕ್ಲಾಸ್ ಬೋಗಿಗಳು, 03 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು 02 ಎಸ್‌ಎಲ್‌ಆರ್ ಬೋಗಿಗಳು ಒಳಗೊಂಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post