ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾಜಿ ಸಚಿವರು ಹಾಗೂ ಹಾಲಿ ವಿಧಾನಿಪರಿಷತ್ ಸದಸ್ಯರಾದ ಸಿ.ಟಿ.ರವಿಯವರು ಇತ್ತೀಚೆಗೆ ಸವಿತಾ ಸಮಾಜವನ್ನು ಅವ್ಯಾಚ ಶಬ್ದ ಬಳಸಿ ನಿಂದಿಸಿರುವುದನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವಿಭಾಗವು ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಎಂ.ರಮೇಶ್ ಶಂಕರಘಟ್ಟ ತಿಳಿಸಿದ್ದಾರೆ.
ಅವರು ಇಂದು ಮಾಜಿ ಸಚಿವರ ವಿರುದ್ಧ ಹಿಂದುಳಿದ ವರ್ಗಗಳ ವಿಭಾಗದಿಂದ ಜಿಲ್ಲಾ ಪೊಲೀಸ್ ಅಧೀಕ್ಷರಿಗೆ ದೂರನ್ನು ಸಲ್ಲಿಸಿ ಮಾತನಾಡುತ್ತಿದ್ದರು
ಸಿ.ಟಿ.ರವಿಯವರು ಶಾಸಕರಾಗಿ, ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಅವರ ದುರಾಂಹಕಾರ ವರ್ತನೆಯಿಂದಾಗಿ ಅವರ ಕ್ಷೇತ್ರದ ಜನ ಹೀನಾಯವಾಗಿ ಸೋಲಿಸುವುದರ ಮೂಲಕ ಅವರ ತಲೆಗೆ ಏರಿದ್ದ ಅಧಿಕಾರದ ಅಮಲನ್ನು ಇಳಿಸಿದ್ದಾರೆ, ಆದರೂ ಬುದ್ದಿ ಕಲಿಯದ ಅವರು ಇನ್ನೂ ಕೂಡ ಇಂತಹ ಗೊಂದಲಕಾರಿ ಹೇಳಿಕೆಯನ್ನು ನೀಡುವುದನ್ನು ನಿಲ್ಲಿಸಿಲ್ಲ.
ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿದ ಸವಿತಾ ಸಮಾಜದ ವಿರುದ್ದ ಸಂವಿಧಾನ ಮತ್ತು ಕಾನೂನುಗಳ ಮೂಲಭೂತ ಆಶಯಗಳಿಗೆ ವಿರುದ್ದವಾಗಿ ಮಾತನಾಡಿ ಆ ಸಮಾಜವನ್ನು ಅತ್ಯಂತ ತುಚ್ಚವಾಗಿ ಕಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಘನತೆವೆತ್ತ ರಾಜ್ಯಪಾಲರು ಮಧ್ಯೆ ಪ್ರವೇಶಿಸಿ ವಿಧಾನಪರಿಷತ್ ಸದಸ್ಯತ್ವದಿಂದ ಅವರನ್ನು ವಜಾ ಮಾಡಬೇಕು ಹಾಗೂ ಪೊಲೀಸ್ ಇಲಾಖೆ ಕೂಡಲೇ ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗ ಒತ್ತಾಯಿಸುತ್ತದೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ನಾಗರಾಜ್ ಕಂಕಾರಿ, ಹೆಚ್. ಪಾಲಾಕ್ಷಿ, ಜಿ ಡಿ ಮಂಜುನಾಥ್, ಚೈತ್ರ ಮೋಹನ್, ಶರತ್ ಮರಿಯಪ್ಪ, ಎಸ್ .ಕೆ. ಭಾಸ್ಕರ್, ಪಿ.ಮೋಹನ್, ಆರ್ ರಾಘವೇಂದ್ರ, ಬಸವರಾಜ್, ಗಂಗಾಧರ್, ಟಿ ಡಿ ಶಶಿಕುಮಾರ್, ರವಿಕುಮಾರ್, ಮುರುಗೇಶ್, ಚಂದ್ರಶೇಖರ್, ಮಂಜುನಾಥ್, ಗಂಗಾಧರ್, ಜಯಶೀಲ, ಎಂ.ಸಿದ್ದರಾಮು, ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















