ಕಲ್ಪ ಮೀಡಿಯಾ ಹೌಸ್ | ಸಾಗರ |
ಕರ್ತವ್ಯದಲ್ಲಿದ್ದಾಗಲೇ ಕೆಎಸ್’ಆರ್’ಟಿಸಿ #KSRTC ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತ ಸಿಬ್ಬಂದಿಯನ್ನು ಮಾರಿಕಾಂಬ ದೇವಾಲಯದ ಹಿಂಭಾಗದ ರಸ್ತೆ ನಿವಾಸಿ ಸಂದೀಪ್(41) ಎಂದು ಗುರುತಿಸಲಾಗಿದೆ.
ಸಂದೀಪ್ ಅವರು ಬುಧವಾರ ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದರು. ಆ ವೇಳೆ ಏಕಾಏಕಿ ಅವರಿಗೆ ನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಸಹೋದ್ಯೋಗಿಗಳು ಅವರನ್ನು ಕೆಎಸ್’ಆರ್’ಟಿಸಿ ಬಸ್’ನಲ್ಲಿಯೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಆ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದರು.

ಘಟನೆ ಕುರಿತಂತೆ ಅಲ್ಲಿನ ಸಿಬ್ಬಂದಿ ಚಂದ್ರು ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ತಾನು ಬಸ್’ನಲ್ಲಿ ಚಾಲಕ ಕಂ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದೇನೆ. ರಾತ್ರಿ ನಾನು ಬಸ್ ಅನ್ನು ಡಿಪೋಗೆ ಬಿಡಲು ಬಂದಾಗ ಗೇಟ್ ಬಳಿ ಹಾರನ್ ಮಾಡಿದರೂ ಸಹ ಸಂದೀಪ್ ಅವರು ಹೊರಗೆ ಬರಲಿಲ್ಲ.
ಇವರು ಬಂದು ಬಸ್ ಚೆಕ್ ಮಾಡಿದ ಮೇಲೆಯೇ ಬಸ್ ಅನ್ನು ಒಳಗೆ ಬಿಡಬೇಕಿತ್ತು. ಬಹಳ ಹೊತ್ತು ಇವರು ಬಾರದ ಕಾರಣಕ್ಕೆ ಇವರ ರೂಂ ನಲ್ಲಿ ಹೋಗಿ ನೋಡಿದಾಗ ಇವರು ಕುಸಿದು ಬಿದ್ದಿದ್ದರು. ತಕ್ಷಣ ನಮ್ಮದೇ ಬಸ್’ನಲ್ಲಿ ಸಂದೀಪ್ ಅವರನ್ನು ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿದಾಗ ಅಷ್ಟೊತ್ತಿಗಾಗಲೇ ಸಂದೀಪ್ ತೀರಿ ಹೋಗಿದ್ದಾರೆ ಎಂದು ವೈದ್ಯರು ತಿಳಿಸಿದರು ಎಂದು ದುಃಖದಿಂದಲೇ ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post