ಕಲ್ಪ ಮೀಡಿಯಾ ಹೌಸ್ | ಮೈಸೂರು |
ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಹಣಕಾಸು ಮತ್ತು ಕಾರ್ಮಿಕ ವಿಭಾಗದಿಂದ ರೈಲ್ವೆ ನಿವೃತ್ತ ನೌಕರರು ಮತ್ತು ಕುಟುಂಬ ಪಿಂಚಣಿದಾರರಿಗಾಗಿ ವಿಶೇಷ ಡಿಜಿಟಲ್ ಲೈಫ್ ಸರ್ಟಿಫಿಕೇಟ್ (ಜೀವನ್ ಪ್ರಮಾಣ) ವಿಶೇಷ ಶಿಬಿರವನ್ನು ಆಯೋಜಿಸಿದೆ.
ಶಿಬಿರವು 2025ರ ನವೆಂಬರ್ 11ರಿಂದ 21ರವರೆಗೆ ವಿಭಾಗದ ವಿವಿಧ ಸ್ಥಳಗಳಲ್ಲಿ ನಡೆಯಲಿದೆ.

ಅಭಿಯಾನವನ್ನು ನವೆಂಬರ್ 11ರಂದು ರಾಣಿಬೆನ್ನೂರು, 12ರಂದು ಹರಿಹರ ಮತ್ತು ನಂಜನಗೂಡು, 14ರಂದು ಹೋಳೆನರಸೀಪುರ, 17ರಂದು ಬೆಳಿಗ್ಗೆ 10:30 ರಿಂದ ಸಂಜೆ 5:00 ಗಂಟೆಯವರೆಗೆ ಮೈಸೂರು ರೈಲು ಕಲ್ಯಾಣ ಮಂಟಪದಲ್ಲಿ, 18ರಂದು ಅರಸೀಕೆರೆ, 19ರಂದು ಶಿವಮೊಗ್ಗ, 20ರಂದು ಚಿತ್ರದುರ್ಗ, ಮತ್ತು 21ರಂದು ಬೀರೂರುಗಳಲ್ಲಿ ಆಯೋಜಿಸಲಾಗುತ್ತದೆ.
ಏನೆಲ್ಲಾ ದಾಖಲೆ ಬೇಕು?
ಪಿಂಚಣಿದಾರರು ತಮ್ಮ ಆಧಾರ್ ಕಾರ್ಡ್, ಪಿಂಚಣಿ ಪಾವತಿ ಬ್ಯಾಂಕ್ ಖಾತೆ ಸಂಖ್ಯೆ, ಮತ್ತು ಪಿಪಿಒ ಸಂಖ್ಯೆಗಳನ್ನು ತರಬೇಕು. ಈ ಶಿಬಿರದಲ್ಲಿ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯಲು ಅಗತ್ಯ ಸಹಾಯವನ್ನು ಒದಗಿಸಲಾಗುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post