ಕಲ್ಪ ಮೀಡಿಯಾ ಹೌಸ್ | ಕಾನೂನು ಕಲ್ಪ – ಪ್ರಶ್ನೋತ್ತರ ಅಂಕಣ |
ಉತ್ತರ: ಹಿಂದೂ ವಿವಾಹ ಕಾಯಿದೆ, 1955ರ ಪ್ರಕಾರ ವಿವಾಹ ನೋಂದಣಿ ಕಡ್ಡಾಯವಲ್ಲ. ಆದರೆ ಮಾನ್ಯ ಸುಪ್ರೀಂ ಕೋರ್ಟ್ ಸೀಮಾ ವಿರುದ್ಧ ಅಶ್ವನಿ ಕುಮಾರ್ ಹಾಗು ಇತರ ಪ್ರಕರಣಗಳಲ್ಲಿ ವಿವಾಹ ನೋಂದಣಿಯಿಂದ ಆಗುವ ಅನುಕೂಲತೆಗಳ ಬಗ್ಗೆ ಒತ್ತಿ ಹೇಳಿದೆ. ನೋಂದಣಿಯಾಗುವದರಿಂದ ವಿವಾಹಕ್ಕೆ ಕಾನೂನಿನ ಮಾನ್ಯತೆ ದೊರಕುತ್ತದೆ. ಜಂಟಿ ಆಸ್ತಿ ಖರೀದಿ ಹಾಗು ನಿರ್ವಹಣೆ, ಉತ್ತಾರಾಧಿಕಾರದ ಹಕ್ಕುಗಳು, ವೀಸಾ ಪಡೆಯುವುದು, ತೆರಿಗೆ ಪಾವತಿ, ಪತಿಯ ಅಥವಾ ಪತ್ನಿಯ ನಿಧನದ ನಂತರ ಕೆಲವು ವಿಮೆ ಹಾಗು ಇತರೆ ಕ್ಲೇಮುಗಳನ್ನು ಸಲ್ಲಿಸಲು ಮೊದಲಾದ ವಿಚಾರಗಳಲ್ಲಿ ವಿವಾಹ ನೋಂದಣಿಯಿಂದ ಅನುಕೂಲತೆಗಳಿವೆ.
ವಿವಾಹ ನೋಂದಣಿಯಾಗದಿದ್ದರೂ ದಂಪತಿಗಳಿಗೆ ಪರಸ್ಪರ ಒಬ್ಬರ ಮೇಲೆ ಇನ್ನೊಬ್ಬರಿಗೆ ಇರುವ ಹಕ್ಕುಗಳಿಗೆ ಯಾವುದೇ ಚ್ಯುತಿ ಬರುವುದಿಲ್ಲ. ಉದಾಹರಣೆಗೆ ಡೈವೋರ್ಸ್ ಪ್ರಕರಣ ದಾಖಲಿಸಲು ವಿವಾಹ ನೋಂದಣಿ ಪತ್ರ ಹಾಜರುಪಡಿಸುವುದು ಕಡ್ಡಾಯವಲ್ಲ. ಕೇವಲ ಮದುವೆ ಆಹ್ವಾನ ಪತ್ರಿಕೆ ಹಾಜರುಪಡಿಸಿದರಾಯಿತು.
ಇನ್ನು ನಿಮ್ಮ ವಿಚಾರದಲ್ಲಿ ಕನ್ಯೆಯ ಮನೆಯವರು ಇದು ಹೊಸ ಸಂಬಂಧವಾಗಿರುವುದರಿಂದ, ಮುಂದೆ ತೊಂದರೆಗಳಾಗುವುದು ಬೇಡ ಎಂದು ವಿವಾಹ ನೋಂದಣಿಗೆ ಕೇಳಿರಬಹುದು. ಹುಡುಗಿಯ ಮನೆಯವರ ಬೇಡಿಕೆಗೆ ನೀವು ಒಪ್ಪಿಗೆ ಸೂಚಿಸಿದರೆ ನಿಮ್ಮ ಹಿತಾಸಕ್ತಿಗೆ ಯಾವ ರೀತಿಯಿಂದಲೂ ಧಕ್ಕೆಯಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post