ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ನೈಋತ್ಯ ರೈಲ್ವೆ ಪ್ರಧಾನ ಕಚೇರಿಯ ರೈಲ್ ಸೌಧದಲ್ಲಿ #Railwaysoudha ಇಂದು ರಾಷ್ಟ್ರೀಯ ಗೀತೆ ವಂದೇ ಮಾತರಂನ #Vandematharam 150 ವರ್ಷಗಳ ಸ್ಮರಣಾರ್ಥವನ್ನು ಸ್ಮರಿಸಲಾಯಿತು.
ಐತಿಹಾಸಿಕ ವರ್ಷದ ಆಚರಣೆಯ ಆರಂಭವನ್ನು ಸೂಚಿಸುವ ಈ ಕಾರ್ಯಕ್ರಮದಲ್ಲಿ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥೂರ್, ಇಲಾಖೆಗಳ ಪ್ರಧಾನ ಮುಖ್ಯಸ್ಥರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ವಂದೇ ಮಾತರಂ ನ ಸಾಮೂಹಿಕ ಗಾಯನದಲ್ಲಿ ಭಾಗವಹಿಸಿದರು.

ಸ್ಮರಣಾರ್ಥದ ಭಾಗವಾಗಿ, ನೈಋತ್ಯ ರೈಲ್ವೆ ವಲಯದಾದ್ಯಂತದ ರೈಲು ನಿಲ್ದಾಣಗಳಲ್ಲಿ ವಂದೇ ಮಾತರಂ ಅನ್ನು ಸಹ ನುಡಿಸಲಾಯಿತು. ಇದು ಪ್ರಯಾಣಿಕರು ಮತ್ತು ಸಿಬ್ಬಂದಿಗಳಲ್ಲಿ ದೇಶಭಕ್ತಿ ಮತ್ತು ಏಕತೆಯ ಮನೋಭಾವವನ್ನು ಪ್ರೇರೇಪಿಸಿತು. ಈ ಕಾರ್ಯಕ್ರಮವು ರಾಷ್ಟ್ರೀಯ ಗೀತೆಯ 150 ವರ್ಷಗಳನ್ನು ಆಚರಿಸಲು ಭಾರತ ಸರ್ಕಾರ ಘೋಷಿಸಿದ ರಾಷ್ಟçವ್ಯಾಪಿ ಆಚರಣೆಯನ್ನು ಪ್ರತಿಧ್ವನಿಸಿತು. ಭಾರತದ ಸ್ವಾತಂತ್ರಮತ್ತು ಸಾಂಸ್ಕೃತಿಕ ಹೆಮ್ಮೆಯ ಸಂಕೇತವಾಗಿರುವ ಅಕಾಲಿಕ ಸಂಯೋಜನೆಯಾಗಿದೆ ಎಂಬುದನ್ನು ಸಾರಲಾಯಿತು.

1875 ರಲ್ಲಿ ಬಂಕಿಮ್ ಚಂದ್ರ ಚಟರ್ಜಿ ಬರೆದ ವಂದೇ ಮಾತರಂ ಅನ್ನು ನಂತರ ಅವರ ಕಾದಂಬರಿ ಆನಂದಮಠ (1882) ನಲ್ಲಿ ಸೇರಿಸಲಾಯಿತು. ಭಾರತವನ್ನು ದೈವಿಕ ರೂಪದಲ್ಲಿ ತಾಯಿ ಎಂದು ನಿರೂಪಿಸುವ ಈ ಹಾಡು ಸ್ವಾತಂತ್ರ ಚಳವಳಿಯ ಸಮಯದಲ್ಲಿ ರಾಷ್ಟ್ರೀಯ ಜಾಗೃತಿಯ ಸಾರವನ್ನು ಸೆರೆಹಿಡಿದು ಸ್ವಾತಂತ್ರಕ್ಕಾಗಿ ಏಕೀಕೃತ ಕರೆಯಾಯಿತು.
ಮೊಟ್ಟ ಮೊದಲು 1896 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಸಾರ್ವಜನಿಕವಾಗಿ ಇದನ್ನು ಹಾಡಲಾಯಿತು. 1950ರ ಜನವರಿ 24ರಂದು, ಸಂವಿಧಾನ ಸಭೆಯು ಅದರ ಮೊದಲ ಎರಡು ಚರಣಗಳಿಗೆ ರಾಷ್ಟ್ರೀಯ ಸ್ಥಾನಮಾನವನ್ನು ನೀಡಿ, ಭಾರತದ ರಾಷ್ಟ್ರೀಯ ಗೀತೆಯಾಗಿ ಅಳವಡಿಸಿಕೊಂಡಿತು.ಇದು ಜನ ಗಣ ಮನ, ರಾಷ್ಟçಗೀತೆಗೆ ಪೂರಕವಾಗಿದೆ.

ಈ ಕಾರ್ಯಕ್ರಮವು ವಂದೇ ಮಾತರಂನ ಶಾಶ್ವತ ಮನೋಭಾವಕ್ಕೆ ಗೌರವವಾಗಿ, ಭಾರತದ ಏಕತೆ, ಗುರುತು ಮತ್ತು ಮಾತೃಭೂಮಿಯ ಮೇಲಿನ ಭಕ್ತಿಯ ಕಾಲಾತೀತ ಸಂಕೇತವಾಗಿ ನಿಂತಿದೆ. ಇದಕ್ಕೆ ಪೂರಕವಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಕ್ರಿಯ ಭಾಗವಹಿಸುವಿಕೆಯು ಅವರ ದೇಶಭಕ್ತಿಯ ಉತ್ಸಾಹ ಮತ್ತು ಒಗ್ಗಟ್ಟನ್ನು ಪ್ರದರ್ಶಿಸಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post