ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬಹು ನಿರೀಕ್ಷಿತ ಬೆಂಗಳೂರು ಹಾಗೂ ಎರ್ನಾಕುಲಂ ನಡುವಿನ ಹೊಸ ವಂದೇ ಭಾರತ್ ಎಕ್ಸ್’ಪ್ರೆಸ್ ರೈಲು #Bangalore Ernakulam New VandeBharath Express Train ಸಂಚಾರ ಆರಂಭಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೆಎಸ್’ಆರ್ ಬೆಂಗಳೂರಿನಿಂದ ಕೇರಳದ ಎರ್ನಾಕುಲಂ ನಡುವೆ ವಂದೇ ಭಾರತ್ ಎಕ್ಸ್’ಪ್ರೆಸ್ ರೈಲಿನ ಸೇವೆಯನ್ನು ಪ್ರಾರಂಭಿಸಲು ಅನುಮೋದನೆ ನೀಡಿತ್ತು. ಈ ಪ್ರಮುಖ ರೈಲು ಸೇವೆಯು ಬುಧವಾರ ಹೊರತುಪಡಿಸಿ, ವಾರದಲ್ಲಿ ಆರು ದಿನಗಳು ಸಂಚರಿಸಲಿದ್ದು, ಪ್ರಯಾಣಿಕರಿಗೆ ಸುಧಾರಿತ ಸೌಕರ್ಯದೊಂದಿಗೆ ಕಡಿಮೆ ಪ್ರಯಾಣದ ಸಮಯವನ್ನು ಒದಗಿಸಿ ಎರಡೂ ರಾಜ್ಯಗಳ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ.
ನಿಯಮಿತ ಸೇವೆಯ ವಿವರಗಳು:
26651/26652 ಸಂಖ್ಯೆಯ ರೈಲುಗಳು ಕೆಎಸ್’ಆರ್ ಬೆಂಗಳೂರು – ಎರ್ನಾಕುಲಂ – ಕೆಎಸ್’ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್’ಪ್ರೆಸ್’ನ ನಿಯಮಿತ ಸೇವೆಯು ನವೆಂಬರ್ 11ರಿಂದ ಎರಡೂ ಕಡೆಗಳಿಂದ ಪ್ರಾರಂಭವಾಗಲಿದೆ.
26651/26652 ಸಂಖ್ಯೆಯ ವಂದೇ ಭಾರತ್ ಆಗಮನ ಮತ್ತು ನಿರ್ಗಮನ ಸಮಯಗಳು ಹೀಗಿವೆ:
- 26651 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು – ಎರ್ನಾಕುಲಂ ವಂದೇ ಭಾರತ್ ಎಕ್ಸ್’ಪ್ರೆಸ್ ಕೆಎಸ್’ಆರ್ ಬೆಂಗಳೂರಿನಿಂದ ಬೆಳಿಗ್ಗೆ 05:10ಕ್ಕೆ ಹೊರಟು ಅದೇ ದಿನ ಮಧ್ಯಾಹ್ನ 01:50ಕ್ಕೆ ಎರ್ನಾಕುಲಂ ತಲುಪಲಿದೆ.
- ಮಾರ್ಗದಲ್ಲಿ, ಈ ರೈಲು ಕೃಷ್ಣರಾಜಪುರಂ (05:23/05:25), ಸೇಲಂ (ಬೆಳಿಗ್ಗೆ 08:13/08:15), ಈರೋಡ್ (ಬೆಳಿಗ್ಗೆ 09:00/09:05), ತಿರುಪ್ಪೂರು (ಬೆಳಿಗ್ಗೆ 09:45/09:47), ಕೊಯಮತ್ತೂರು (ಬೆಳಿಗ್ಗೆ 10:33/10:35), ಪಾಲಕ್ಕಾಡ್ (ಬೆಳಿಗ್ಗೆ 11:28/11:30) ಮತ್ತು ತ್ರಿಶೂರ್ (ಮಧ್ಯಾಹ್ನ 12:28/12:30) ನಿಲ್ದಾಣಗಳಲ್ಲಿ ಆಗಮಿಸಿ, ನಿರ್ಗಮಿಸಲಿದೆ.
- ಹಿಂತಿರುಗುವ ಪ್ರಯಾಣದಲ್ಲಿ, ರೈಲು ಸಂಖ್ಯೆ 26652 ಎರ್ನಾಕುಲಂ – ಕೆಎಸ್’ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್’ಪ್ರೆಸ್ ಎರ್ನಾಕುಲಂನಿಂದ ಮಧ್ಯಾಹ್ನ 02:20ಕ್ಕೆ ಹೊರಟು ಅದೇ ದಿನ ರಾತ್ರಿ 11:00ಕ್ಕೆ ಕೆಎಸ್’ಆರ್ ಬೆಂಗಳೂರಿಗೆ ಆಗಮಿಸಲಿದೆ.
- ಈ ರೈಲು ತ್ರಿಶೂರ್ (03:17/03:20 mಞ), ಪಾಲಕ್ಕಾಡ್ (04:35/04:37 mಞ), ಕೊಯಮತ್ತೂರು (05:20/05:23 mಞ), ತಿರುಪ್ಪೂರು (06:03/06:05 mಞ), ಈರೋಡ್ (06:45/06:50 mಞ), ಸೇಲಂ (07:18/07:20 mಞ), ಮತ್ತು ಕೃಷ್ಣರಾಜಪುರಂ (10:23/10:25 mಞ) ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ವಾರದಲ್ಲಿ ಬುಧವಾರ ಹೊರತುಪಡಿಸಿ ಆರು ದಿನಗಳು ಸಂಚರಿಸುವ ಈ ರೈಲಿನಲ್ಲಿ ಉದ್ಘಾಟನಾ ರೈಲಿನಂತೆಯೇ ಎಂಟು ಬೋಗಿಗಳು ಇರಲಿವೆ. ಈ ವಂದೇ ಭಾರತ್ ಎಕ್ಸ್’ಪ್ರೆಸ್ ಪುಷ್ ಬ್ಯಾಕ್ ಆಸನಗಳು, ಸ್ವಯಂಚಾಲಿತ ಪ್ಲಗ್ ಡೋರ್’ಗಳು, ಜಿಪಿಎಸ್ ಆಧಾರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆಗಳು ಮತ್ತು ಉತ್ತಮ ಆನ್ ಬೋರ್ಡ್ ಸೌಕರ್ಯದಂತಹ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ.
ಈ ಹೊಸ ವಂದೇ ಭಾರತ್ ಎಕ್ಸ್’ಪ್ರೆಸ್’ನ ಪರಿಚಯವು ಕರ್ನಾಟಕ ಮತ್ತು ಕೇರಳದ ನಡುವೆ ಅತ್ಯಾಧುನಿಕ ರೈಲು ಸಂಪರ್ಕವನ್ನು ಒದಗಿಸುವಲ್ಲಿ ಮತ್ತೊಂದು ಮೈಲಿಗಲ್ಲಾಗಿದೆ. ಈ ಸೇವೆಯು ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದಲ್ಲದೆ, ವೇಗವಾದ, ಸುರಕ್ಷಿತ ಮತ್ತು ಹೆಚ್ಚು ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುವ ಮೂಲಕ ಎರಡೂ ರಾಜ್ಯಗಳ ನಡುವಿನ ಪ್ರವಾಸೋದ್ಯಮ, ವ್ಯಾಪಾರ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















