ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ವ್ಯಕ್ತಿಯೊರ್ವ ಏಕಾಏಕಿ ರಸ್ತೆಗೆ ಬಂದ ಕಾರಣ ಲಾರಿಯ ಚಕ್ರಕ್ಕೆ ಸಿಲುಕಿ ಎರಡು ಕಾಲು ತುಂಡಾಗಿರುವ ಘಟನೆ ತಳುವೆ ಸಮೀಪ ಬುಧವಾರ ಸಂಜೆ ನಡೆದಿದೆ.
ತೀರ್ಥಹಳ್ಳಿ ತಾಲೂಕಿನ ತಳುವೆ ಬಳಿ ಮೇಲಿನಕುರುವಳ್ಳಿಯ ಲಾರಿಯ ಚಕ್ರಕ್ಕೆ ಸಿಲುಕಿ ವ್ಯಕ್ತಿಯ ಕಾಲು ಕಟ್ ಆಗಿದೆ. ಆದರೆ ಈ ಅಪಘಾತಕ್ಕೆ ಆ ವ್ಯಕ್ತಿಯೇ ಕಾರಣ ಎಂಬ ಮಾತು ಕೇಳಿ ಬರುತ್ತಿದೆ.
ನಿನ್ನೆ ಬೆಳಗ್ಗೆಯಿಂದ ಬಸ್ ಹಾಗೂ ಕಾರುಗಳಿಗೆ ಅಡ್ಡ ಹೋಗುತ್ತಿದ್ದ ಎಂದು ತಿಳಿದು ಬಂದಿದೆ.

ಆದರೂ ಸಂಜೆ ಲಾರಿ ಬರುತ್ತಿದ್ದದ್ದನ್ನು ನೋಡಿ ಏಕಾಏಕಿ ರಸ್ತೆಗೆ ಹಾರಿದ್ದಾನೆ. ಈ ವೇಳೆ ಲಾರಿ ಚಾಲಕ ಎಷ್ಟೇ ತಪ್ಪಿಸಿದರು ಲಾರಿ ಹಿಂದಿನ ಚಕ್ರಕ್ಕೆ ಸಿಲುಕಿ ಕಾಲು ಕಟ್ ಮಾಡಿಕೊಂಡಿದ್ದಾನೆ.
ಈ ಪ್ರಕರಣ ವಿಚಿತ್ರವಾಗಿದ್ದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post