ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಇಲ್ಲಿನ ಕೆಂಪು ಕೋಟೆಯ ಬಳಿಯಲ್ಲಿ ನಡೆದ ಬಾಂಬ್ ಸ್ಫೋಟ #BombBlast ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೇ ಅಂಶಗಳು ಹೊರ ಬೀಳುತ್ತಿದ್ದು, ಒಂದೊಂದು ಮಾಹಿತಿಯೂ ಸಹ ಬೆಚ್ಚಿ ಬೀಳಿಸುತ್ತಿವೆ.
ಪ್ರಮುಖವಾಗ, ಕಳೆದ ಸೋಮವಾರ ಸಂಜೆ ವೇಳೆಗೆ ಕೆಂಪುಕೋಟೆ #Redfort ಮೆಟ್ರೋ ಸ್ಟೇಶನ್ ಬಳಿಕ ಐ20 ಕಾರಿನಲ್ಲಿ ಸ್ಪೋಟವಾಗಿತ್ತು. ಅದರ ಬೆನ್ನಲ್ಲೇ, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಇದೀಗ ಬೆಚ್ಚಿ ಬೀಳಿಸುವ ಮಾಹಿತಿಗಳು ಹೊರಬಿದ್ದಿದ್ದು, ಸುಮಾರು 32 ಕಾರುಗಳಲ್ಲಿ ಬಾಂಬ್ ಇರಿಸಲಾಗಿತ್ತು ಎಂದು ವರದಿಯಾಗಿದೆ.
ಮಾರುತಿ ಸುಜುಕಾ ಬ್ರೆಝಾ, ಮಾರುತಿ ಸ್ವಿಫ್ಟ್ ಡಿಜೈರ್ ಮತ್ತು ಫೋರ್ಡ್ ಇಕೋಸ್ಪೋರ್ಟ್ ಸೇರಿದಂತೆ ಮೂವತ್ತೆರಡು ಕಾರುಗಳನ್ನು ಸ್ಫೋಟಕ ವಸ್ತುಗಳನ್ನು ಸಾಗಿಸಲು ಮತ್ತು ಬಾಂಬ್’ಗಳನ್ನು ತಲುಪಿಸಲು ಸಿದ್ಧಪಡಿಸಲಾಗುತ್ತಿತ್ತು ಎಂದು ದೆಹಲಿ ಕೆಂಪು ಕೋಟೆ ಸ್ಫೋಟ ತನಿಖೆಯ ನಿಕಟ ಮೂಲಗಳನ್ನು ಉಲ್ಲೇಖಿಸಿ ಗುರುವಾರ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಅಯೋಧ್ಯೆಯ 16 ನೇ ಶತಮಾನದ ಬಾಬರಿ ಮಸೀದಿಯನ್ನು ಕೆಡವಿದ ದಿನವಾದ ಡಿಸೆಂಬರ್ 6 ರಂದು ಸೇಡು ತೀರಿಸಿಕೊಳ್ಳಲು ದೇಶದೆಲ್ಲೆಡೆ ಹಲವು ಸ್ಪೋಟಗಳನ್ನು ಮಾಡಲು ಈ ಗುಂಪು ಯೋಜನೆ ರೂಪಿಸಿತ್ತು ಎಂದು ವರದಿಯಾಗಿದೆ.
ಸೋಮವಾರ ಸಂಜೆ ಸ್ಫೋಟಗೊಂಡ ಹುಂಡೈ ಐ20 ಸೇರಿದಂತೆ ಈ ಕಾರುಗಳು ದೆಹಲಿಯಲ್ಲಿ ಆರು ಸ್ಥಳಗಳನ್ನು ಒಳಗೊಂಡಂತೆ ಅನೇಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ನಡೆಸಬೇಕಿದ್ದ ಸರಣಿ ಸೇಡು ದಾಳಿಯ ಭಾಗವಾಗಬೇಕಿತ್ತು.
ಈ ಕಾರ್ಯಕ್ಕಾಗಿ ಬಳಸಲಾಗುತ್ತಿದ್ದ ನಾಲ್ಕು ಕಾರುಗಳನ್ನು ಈಗಾಗಲೇ ಪತ್ತೆ ಮಾಡಲಾಗಿದೆ. ಹಳೆಯ ಕಾರುಗಳಾದ ಇವುಗಳನ್ನು ಈಗಾಗಲೇ ಹಲವು ಬಾರಿ ಮರು ಮಾರಾಟ ಮಾಡಲಾಗಿತ್ತು. ಪೊಲೀಸರಿಗೆ ಗುರುತು ಪತ್ತೆ ಮಾಡಲು ಕಷ್ಟವಾಗಬೇಕು ಎಂದು ಇಂತಹ ಕಾರುಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೂ ನಾಲ್ಕು ಕಾರುಗಳನ್ನು ಪತ್ತೆ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post