ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ತಾಲೂಕು ಗಡಿ ಗ್ರಾಮ ಅಮಚವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪೋಷಕ ಉಪನ್ಯಾಸಕರ ಮಹಾಸಭೆ ಹಾಗೂ ಮಕ್ಕಳ ದಿನಾಚರಣೆ #Childrens Day ಸಂಭ್ರಮ ಸಡಗರದಿಂದ ಜರಗಿತು.
ವಿದ್ಯಾರ್ಥಿ ಪೋಷಕರಾದ ಪುಟ್ಟಮ್ಮ, ಸೋಮಣ್ಣ ,ಕುಮಾರ್, ಪುಟ್ಟಲಕ್ಷ್ಮಿ ತುಳಸಿ ನಾಗ ಶೆಟ್ಟಿ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಪೋಷಕರಾದ ಕುಮಾರ್ ಮಾತನಾಡಿ ವಿದ್ಯೆ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಬಹಳ ಮುಖ್ಯವಾದದ್ದು. ಉನ್ನತ ಶಿಕ್ಷಣವನ್ನು ಪಡೆಯುವ ಗುರಿ ಹೊಂದಬೇಕು ಎಂದರು.
ಹಿರಿಯ ಉಪನ್ಯಾಸಕರಾದ ಮೂರ್ತಿ ಮಾತನಾಡಿ ಸರ್ಕಾರದ ಕಾರ್ಯಕ್ರಮ ಸರ್ವರು ಯಶಸ್ವಿಗೊಳಿಸಿ ಜಾಗೃತಿ ಮೂಡಿಸೋಣ. ಪೋಷಕರು ಉಪನ್ಯಾಸಕರು ಸದಾ ಮಕ್ಕಳ. ಕಲಿಕೆಗೆ ಸ್ಪೂರ್ತಿ ತುಂಬಬೇಕು ಎಂದರು.
ಉಪನ್ಯಾಸಕರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಬಡತನ ಮತ್ತು ಇತರ ಕಾರಣಗಳು ಶಿಕ್ಷಣ ಪಡೆಯಲು ತೊಡಕಾಗಬಾರದು. ಬಡತನದ ನೋವಿನಲ್ಲಿ ಜಗತ್ತಿನ ಅನೇಕರು ಶ್ರೇಷ್ಠರು ಹಾಗೂ ವಿಶ್ವ ಪ್ರಸಿದ್ಧಿರಾಗಿದ್ದಾರೆ. ಕಲಿಕೆಯ ಗುರಿ ಬಹಳ ಮುಖ್ಯವಾದದ್ದು. ನಮ್ಮ ಎಲ್ಲಾ ಮೂಲ ಸಮಸ್ಯೆಗಳಿಗೆ ಪರಿಹಾರ ಶಿಕ್ಷಣವನ್ನು ಪಡೆಯುವುದೇ ಆಗಿದೆ ಎಂದರು.
ಉಪನ್ಯಾಸಕರಾದ ಶಿವರಾಮ ಬಸವಣ್ಣ ರಮೇಶ್ ಸುರೇಶ್ ದೊಡ್ಡಮ್ಮ ಹಾಗೂ ಪೋಷಕರು ಮಾತನಾಡಿದರು.
ಪ್ರತಿಭಾ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಮಕ್ಕಳ ದಿನಾಚರಣೆ ಅಂಗವಾಗಿ ಎಲ್ಲಾ ವಿದ್ಯಾರ್ಥಿಗಳಿಗೂ ಪೆನ್ನು ಮತ್ತು ಪುಸ್ತಕಗಳನ್ನು ನೀಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಶಿವನಂಜಪ್ಪ ವಹಿಸಿ ಯಶಸ್ವಿಗೊಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















