ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನೈರುತ್ಯ ರೈಲ್ವೆಯ #Southwestern Railway ಪ್ರಧಾನ ವ್ಯವಸ್ಥಾಪಕರಾದ ಮುಕುಲ್ ಶರಣ್ ಮಾಥುರ್ ರವರು ಇಂದು ಕೆ.ಎಸ್.ಆರ್. ಬೆಂಗಳೂರು – ವೈಟ್ ಫೀಲ್ಡ್ ಭಾಗದಲ್ಲಿ ವಿಸ್ತೃತ ಪರಿಶೀಲನೆಯನ್ನು ನಡೆಸಿ ಸುರಕ್ಷತೆಯ ಅಂಶಗಳು, ಪ್ರಗತಿಯಲ್ಲಿರುವ ಮೂಲಸೌಕರ್ಯ ಮತ್ತು ಮಾರ್ಗ ಸಾಮರ್ಥ್ಯ ವೃದ್ಧಿಯ ಕಾಮಗಾರಿಗಳನ್ನು ಪರಿಶೀಲಿಸಿದರು.
ಕೆ.ಎಸ್.ಆರ್. ಬೆಂಗಳೂರು ನಿಲ್ದಾಣದ ನಿರೀಕ್ಷಣೆಯನ್ನು ನಡೆಸಿದ ಅವರು ಪಿಟ್ ಲೈನ್ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಪ್ರಯಾಣಿಕರಿಗೆ ಉನ್ನತ ದರ್ಜೆಯ ಆಧುನಿಕ ಸೌಲಭ್ಯಗಳನ್ನು ಒದಗಿಸಲು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ಕೈಗೊಂಡಿರುವ ನಿಲ್ದಾಣ ಪುನರಾಭಿವೃದ್ಧಿ ಕಾಮಗಾರಿಯನ್ನು ಸಹಾ ಅವರು ಪರಿಶೀಲಿಸಿದರು
ಬೆಂಗಳೂರು ಕಂಟೋನ್ಮೆಂಟ್ ಮತ್ತು ವೈಟ್ ಫೀಲ್ಡ್ ನಡುವೆ ನಡೆಯುತ್ತಿರುವ ಚತುಷ್ಫಥ ರೈಲ್ವೆ ಮಾರ್ಗ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದ ಅವರು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಿ ಪರಿಚಾಲನಾ ದಕ್ಷತೆಯನ್ನು ಮತ್ತಷ್ಟು ಹೆಚ್ಚಿಸುವ ಈ ಕಾಮಗಾರಿಯನ್ನು ನಿಗದಿಪಡಿಸಿದ ಸಮಯದೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು.
ಅಜಯ್ ಶರ್ಮಾ, ಮುಖ್ಯ ಆಡಳಿತಾಧಿಕಾರಿಗಳು (ನಿರ್ಮಾಣ); ಆಶುತೋಷ್ ಮಾಥುರ್, ಮುಖ್ಯ ಇಂಜಿನಿಯರ್ (ನಿರ್ಮಾಣ); ಪರೀಕ್ಷಿತ್ ಮೋಹನ್‌ಪೂರಿಯಾ, ಅಪರ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು; ಗುಲ್ ಅಶ್ಫಾಕ್ ಮೊಹಮ್ಮದ್, ಮುಖ್ಯ ಯೋಜನಾ ವ್ಯವಸ್ಥಾಪಕರು, ಗತಿಶಕ್ತಿ ಮತ್ತು ಇತರ ಅಧಿಕಾರಿಗಳಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















