ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಕೆಎಸ್’ಆರ್’ಟಿಸಿ ಬಸ್ #KSRTC Bus ಚಕ್ರದಡಿ ನಾಡ ಬಾಂಬ್ ಒಂದು ಸ್ಪೋಟಗೊಂಡಿದ್ದು, ಅದೃಷ್ಟವಷಾತ್ ಯಾವುದೇ ರೀತಿಯಲ್ಲೂ ಸಹ ಅಪಾಯ ಸಂಭವಿಸಿಲ್ಲ.
ನಿನ್ನೆ ಸಂಜೆ ಶಿಕಾರಿಪುರ ಪಟ್ಟಣದಿಂದ ಮುಡುಬಸಿದ್ದಾಪುರ ಮಾರ್ಗದಲ್ಲಿ ಎಂದಿನಂತೆ ಸಂಚರಿಸುತ್ತಿದ್ದ ವೇಳೆ ತಾಲೂಕಿನ ಹಿರೇಕಲವತ್ತಿ ಗ್ರಾಮದಲ್ಲಿ ನಡೆದಿದ್ದು. ಶಿಕಾರಿಪುರ ಕೆಎಸ್’ಆರ್’ಟಿಸಿ ಡಿಪೋಗೆ ಸೇರಿದ ಬಸ್ ಚಕ್ರದಡಿ ಸ್ಪೋಟ ಸಂಭವಿಸಿದೆ.

ಘಟನೆಯಲ್ಲಿ ಯಾವುದೇ ರೀತಿಯ ಹಾನಿ, ಅಪಾಯ ಸಂಭವಿಸಿಲ್ಲ. ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.
ರಸ್ತೆಯಲ್ಲಿ ನಾಡ ಬಾಂಬ್ ಹೇಗೆ ಬಂತು? ಬಳಸುತ್ತಿರುವುದು ಯಾರು? ಎಂಬೆಲ್ಲಾ ಮಾಹಿತಿ ತಿಳಿದುಬರಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post