ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಐತಿಹಾಸಿಕ ಕೋಟೆ ಶ್ರೀ ಸೀತಾ ರಾಮಾಂಜನೇಯ ಸ್ವಾಮಿ ದೇವಾಲಯದ ಶ್ರೀ ಸೀತಾ ಕಲ್ಯಾಣ ಶತಮಾನೋತ್ಸವ ಸಮಿತಿ ಆಶ್ರಯದಲ್ಲಿ ಡಿ. 7ರ ಭಾನುವಾರದಿಂದ ಜ. 5ರ ಸೋಮವಾರದವರೆಗೆ ಶ್ರೀ ಸೀತಾ ಕಲ್ಯಾಣ ಶತಮಾನೋತ್ಸವ ಹಾಗೂ ಕೋಟಿತ್ರಯ ರಾಮಾ ನಾಮಾರ್ಚನ ಮಹೋತ್ಸವವನ್ನು ಆಯೋಜಿಸಲಾಗಿದೆ.
ಈ ಅಂಗವಾಗಿ ಒಂದು ತಿಂಗಳು ಪೂರಾ ವಿವಿಧ ಧಾರ್ಮಿಕ ಹಾಗೂ ಸಾಂಸ್ಕತಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
- ಡಿಸೆಂಬರ್ 7: ಬೆಳಿಗ್ಗೆ ಮಹಾ ಸಂಕಲ್ಪ ಹಾಗೂ ನವಗ್ರಹ ಪೂಜೆಯ ಮೂಲಕ ಚಾಲನೆ
- ಡಿಸೆಂಬರ್ 8ರಿಂದ 17ರವರೆಗೆ ಶ್ರೀ ಭಾಗವತ ಮಹಾಪುರಾಣ ಹೋಮ, ಇದೇ ಸಂದರ್ಭದಲ್ಲಿ ಬೆಂಗಳೂರಿನ ಎಚ್.ಆರ್. ಶ್ರೀಧರ್ ಅವರಿಂದ ಪ್ರತಿನಿತ್ಯ ಸಂಜೆ 6.30ಕ್ಕೆ ಭಾಗವತ ಸಪ್ತಾಹ ಉಪನ್ಯಾಸ
- ಡಿಸೆಂಬರ್ 15ರಿಂದ 17ರವರೆಗೆ ಕಲ್ಲಾಪುರದ ಪವಮಾನ ಆಚಾರ್ ಅವರಿಂದ ವಿಷ್ಣುವಿನ ದಶಾವತಾರ ಕುರಿತು ಉಪನ್ಯಾಸ ಹಾಗೂ ದಶಾವತಾರ ಉತ್ಸವ
- ಡಿಸೆಂಬರ್ 18ರಂದು ಸಪ್ತ ಚಿರಂಜೀವಿಗಳ ಪೂಜೆ ಹೋಮ ನಡೆಯಲಿದ್ದು, ಸಂಜೆ ಮತ್ತೂರು ಸನತ್ ಕುಮಾರ, ಅಚ್ಯುತ ಅವಧಾನಿಯವರಿಂದ ಸೀತಾ ಕಲ್ಯಾಣ ಗಮಕ ವಾಚನ ವ್ಯಾಖ್ಯಾನ
- ಡಿಸೆಂಬರ್ 19ರಂದು ಎಳ್ಳು ಅಮಾವಾಸ್ಯೆ ಭಾಗವಾಗಿ ಶಕ್ತಿದೇವತೆಗಳ
- ಡಿಸೆಂಬರ್ 20ರಂದು ಮಾರುತಿ ಹೋಮ, ಸಂಜೆ ಉಸ್ತಾದ್ ಹುಮಾ ಯೂನ್ ಹರ್ಲಾಪುರ, ನೌಷಾದ್ ಹರ್ಲಾಪುರ, ನಿಷದ್ ಹರ್ಲಾಪುರ ರವರಿಂದ ಹಿಂದೂಸ್ಥಾನೀ ಸಂಗೀತ, ದಾಸವಾಣಿ ಕಾರ್ಯಕ್ರಮ
- ಡಿಸೆಂಬರ್ 21ರಂದು ಶ್ರೀ ಗಾಯತ್ರಿ ಹೋಮ, ಸಂಜೆ ಅರುಣ್ ಕುಮಾರ್ ಮತ್ತು ಸಂಗಡಿಗರಿಂದ ಭಕ್ತಿ ಸಂಕೀರ್ತನೆ
- ಡಿಸೆಂಬರ್ 22ರಂದು ವಿಷ್ಣು ಸಹಸ್ರನಾಮ ಹೋಮ, ಮೈಸೂರಿನ ಎಂ.ಜಿ. ಶ್ರೀಧರ್ ಸಂಗಡಿಗರಿಂದ ನಾಗಸ್ವರ
- ಡಿಸೆಂಬರ್ 23ರಂದು ಲಲಿತಾ ಸಹಸ್ರನಾಮ ಹೋಮ, ಸಂಜೆ ನೃತ್ಯಗುರು ಸೌಮ್ಯ ರಂಗಸ್ವಾಮಿಯವರ ನವಭಾವ್ ಸ್ಕೂಲ್ ಆಫ್ ಆರ್ಟ್ ವಿದ್ಯಾರ್ಥಿ ಗಳಿಂದ ನೃತ್ಯ ವೈಭವ
- ಡಿಸೆಂಬರ್ 24ರಂದು ಶ್ರೀಲಕ್ಷ್ಮೀ ನರಸಿಂಹ ಹೋಮ ನಡೆಯಲಿದೆ. ಸಂಜೆ ಶೃಂಗೇರಿ ಎಚ್.ಎಸ್. ನಾಗರಾಜ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ
- ಡಿಸೆಂಬರ್ 25ರಂದು ಶ್ರೀ ಲಕ್ಷ್ಮೀ ಹಯಗ್ರೀವ ಹೋಮ ಸಂಜೆ ಸಹನಾ ಚೇತನ್ ತಂಡದವರಿಂದ ಭರತ ನಾಟ್ಯ ಕಾರ್ಯಕ್ರಮ
- ಡಿಸೆಂಬರ್ 26ರಂದು ಶ್ರೀ ಸೂಕ್ತ ಹೋಮ, ಸಂಜೆ ಬೆಂಗಳೂರಿನ ಸೂಕ್ತ ಪಟ್ಟಾಭಿರಾಮನ್, ವಾಸುಕಿ ವೈಭವ್ ತಂಡದವರಿಂದ ಸಂಗೀತ ಸಂಜೆ
- ಡಿಸೆಂಬರ್ 27ರಂದು ಶ್ರೀ ವೈನತೇಯ ಮಂತ್ರ ಹೋಮ ಸಂಜೆ ವಿದುಷಿ ಸಂಭ್ರಮ ಎಚ್.ಎಸ್. ತಂಡದವರಿಂದ ಕರ್ನಾಟಕ ಶಾಸೀಯ ಸಂಗೀತ
- ಡಿಸೆಂಬರ್ 28ರಂದು ವರಾಹಸ್ವಾಮಿ ಮಂತ್ರ ಹೋಮ, ಸಂಜೆ ಗಜೇಂದ್ರ ಮೋಕ್ಷ
- ಡಿಸೆಂಬರ್ 29ರಂದು ಉತ್ಸವ ರಾಮರಿಗೆ ಅಭಿಷೇಕ, ಸಂಜೆ ವೈಭವದ ಸೀತಾ ಕಲ್ಯಾಣ ಮಹೋತ್ಸವ
- ಡಿಸೆಂಬರ್ 30ರಂದು ವೈಕುಂಠ ಏಕಾದಶೀ, ಆನೆ ಉತ್ಸವ ಸಂಜೆ ಕುಮಾರ ಸ್ವಾಮಿ ಸಂಗಡಿಗರಿಂದ ನಾದ ವೈಭವ-ಸ್ಯಾಕ್ಯೋ ಫೋನ್ ವಾದನ
- ಡಿಸೆಂಬರ್ 31ರಂದು ತೀರ್ಥ ಸ್ನಾನ, ಬೆಳ್ಳಿ ಮಂಟಪದಲ್ಲಿ ರಾಜಬೀದಿ ಉತ್ಸವ
- ಜನವರಿ 1ರಂದು ಸುದರ್ಶನ ಹೋಮ, ಉರುಟಣೆ, 108 ಸತ್ಯ ನಾರಾಯಣ ವ್ರತ
- ಜನವರಿ 2ರಂದು ಪಲ್ಲಕ್ಕಿ ಉತ್ಸವ ಶ್ರೀವತ್ಸ ಸಂಗಡಿಗರಿಂದ ವೇಣುವಾದನ, ಶಯನೋತ್ಸವ
- ಜನವರಿ 3ರಂದು ಶ್ರೀ ಧನ್ವಂತರಿ ಹೋಮ, ಸಂಜೆ ತುಂಗಾ ತೀರದಲ್ಲಿ ತೆಪ್ಪೋತ್ಸವ
- ಜನವರಿ 4ರಂದು ಮಹಾಭಿಷೇಕ, ಮೋಹಿನಿ ಅಲಂಕಾರ, ಕೋಟಿ ತ್ರಯ ನಾಮಾರ್ಚನೆ ಸಮಾರೋಪ
- ಜನವರಿ 5ರಂದು ರಾಮತಾರಕ ಮಂತ್ರ ಹೋಮ, ಮಹಾಭಿಷೇಕ, ಕಿರೀಟ ಸಮರ್ಪಣೆ ಹಾಗೂ ಸಂಜೆ ಪ್ರಾಕಾರೋತ್ಸವ
ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಶ್ರೀ ಸೀತಾ ಕಲ್ಯಾಣ ಶತಮಾನೋತ್ಸವ ಸಮಿತಿ ವಿನಂತಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post