ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಲಾ ಕ್ಷೇತ್ರಕ್ಕೆ ಕಳೆದ ನಾಲ್ಕು ದಶಕಗಳಿಂದ ವಿಭಿನ್ನ ರೀತಿಯಲ್ಲಿ ಸೇವೆ ಸಲ್ಲಿಸಿರುವ ಅಂತರಾಷ್ಟ್ರೀಯ ಖ್ಯಾತಿಯ ವಿದ್ವಾಂಸ ಡಾ. ಟಿ.ವಿ. ರಾಮಪ್ರಸಾದ್ ಮತ್ತು ಪ್ರಖ್ಯಾತ ನೃತ್ಯ ವಿದುಷಿ ಇಂದಿರಾ ಕಡಾಂಬಿ ಅವರ ಅಂಬಾಲಂ ಫೌಂಡೇಶನ್ ಸಂಸ್ಥೆಯು “ಆರಾಧನಾ ಕಲಾ ಸಮಾರಾಧನೆ” ಶೀರ್ಷಿಕೆ ಅಡಿಯಲ್ಲಿ ಡಿ.6 ಮತ್ತು 7ರಂದು ವಿಭಿನ್ನ ಕಲಾ ಪ್ರಸ್ತುತಿಗಳನ್ನು ಆಯೋಜಿಸಿದೆ.
ನಗರದ ಮಲ್ಲೇಶ್ವರಂನ ಸೇವಾ ಸದನ ಸಭಾಂಗಣದಲ್ಲಿ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ಡಿ. 6ರಂದು ಬೆಳಗ್ಗೆ 9:30ಕ್ಕೆ ಪ್ರಖ್ಯಾತ ಕಲಾವಿದೆ ಲಲಿತಾರಾಮ್ ರಾಮಚಂದ್ರನ್ ರವರು” ಎಸ್. ರಾಜಮ್ ಅವರ ಲ್ಯಾಂಡಿಂಗ್ ಕಾಂಪೋಸಿಶನ್” ಬಗ್ಗೆ ವಿಶೇಷ ಪ್ರಾತ್ಯಕ್ಷಿಕೆ ನೀಡಲಿದ್ದಾರೆ.
ಎರಡನೇ ಅವಧಿಯಲ್ಲಿ ಬೆಳಗ್ಗೆ 10 ಗಂಟೆ 15 ನಿಮಿಷಕ್ಕೆ ಪ್ರೊ. ಡಾ. ಪರಿಮಳ ಗುರುಮೂರ್ತಿ ಅವರು “ಎಸ್. ರಾಜಮ್ ಅವರ ಮ್ಯೂಸಿಕ್ ಅಂಡ್ ಪೆಡಿಗೋಗಿ” ಬಗ್ಗೆ ಪ್ರೌಢ ಉಪನ್ಯಾಸ ನೀಡಲಿದ್ದಾರೆ.
ಮೂರನೇ ಅವಧಿಯಲ್ಲಿ ಬೆಳಗ್ಗೆ 11 ಗಂಟೆಗೆ ಪ್ರಖ್ಯಾತ ಕಲಾವಿದ ಟಿ.ವಿ. ರಾಮಪ್ರಸಾದ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಚೇರಿಯನ್ನು ಪ್ರಸ್ತುತಪಡಿಸಲಿದ್ದಾರೆ.

ಇದೇ ಅವಧಿಯಲ್ಲಿ ವಿದುಷಿ ಇಂದಿರಾ ಕಡಾಂಬಿಯವರು ಅಭಿನಯ ಕುರಿತಾದ ವಿಶೇಷ ಕಾರ್ಯಗಾರವನ್ನು ನಡೆಸಿಕೊಳ್ಳುತ್ತಿದ್ದಾರೆ. ಸಂಜೆ 5 ಗಂಟೆಗೆ ಪಂಡಿತ್ ಅಭಿಜಿತ್ ಮತ್ತು ತಂಡದವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಚೇರಿ ನೆರವೇರಲಿದೆ.
ಕರ್ನಾಟಕ ಶಾಸ್ತ್ರೀಯ ಸಂಗೀತದ ಪರಿಶುದ್ಧವಾದ ಪರಂಪರೆ ಉಳಿಯಬೇಕು. ಈ ನಿಟ್ಟಿನಲ್ಲಿ ಹೊಸ ಪೀಳಿಗೆಗೆ ಸಮರ್ಥ ಮಾರ್ಗದರ್ಶನವನ್ನು ನೀಡಬೇಕು. ವೇದಿಕೆ ಸಂಪ್ರದಾಯಗಳು ಉಳಿಯಬೇಕು. ಕಲಾ ಕ್ಷೇತ್ರದ ಹಿರಿಯರು ಮತ್ತು ಸಾಧಕರ ಸಾಧನೆಗಳನ್ನು ಪರಿಚಯಿಸಬೇಕು ಎಂಬ ನೀತಿನಲ್ಲಿ ಗದ್ದಲ ರಹಿತ ಸಂಗೀತವನ್ನು ಒಳಗಣ್ಣಿನಿಂದ ನೋಡುವ ಪ್ರವೃತ್ತಿಯನ್ನು ಹೆಚ್ಚಿಸಬೇಕು ಎಂಬ ನಿಟ್ಟಿನಲ್ಲಿ ಈ ಬಾರಿ ಉತ್ಸವವನ್ನು ಹಮ್ಮಿಕೊಂಡಿದ್ದೇವೆ
-ವಿದ್ವಾನ್ ರಾಮಪ್ರಸಾದ್, ಉತ್ಸವ ಆಯೋಜಕರು
ಸಂಜೆ 6:45 ಕ್ಕೆ ಪ್ರಖ್ಯಾತ ಕಲಾವಿದ ಆನೂರು ಅನಂತ ಕೃಷ್ಣ ಶರ್ಮ ಮತ್ತು ತಂಡದವರಿಂದ ಲಯ ಲಾವಣ್ಯ ವಿಶೇಷ ವಾದ್ಯ ವೈಭವ ರಂಜಿಸಲಿದೆ. ಡಿ. 7ರಂದು ಬೆಳಗ್ಗೆ 9:30ಕ್ಕೆ ಜಯಂತಿ ಸುಬ್ರಮಣ್ಯಂ ಮತ್ತು ನಿತ್ಯ ಕಲ್ಯಾಣಿ ವೈದ್ಯನಾಥನ್ ಅವರಿಂದ ಪ್ರೌಢ ಚರ್ಚೆ ನಡೆಯಲಿದೆ. (ವಿಷಯ: ಬಾನಿ ಮತ್ತು ಅಭಿನಯ ಕ್ಷೇತ್ರಕ್ಕೆ ಕಲಾನಿಧಿ ನಾರಾಯಣ ಅವರ ಕೊಡುಗೆ).

ಅಂದು ಮಧ್ಯಾಹ್ನ 2 ಗಂಟೆಗೆ ಪ್ರಖ್ಯಾತ ಕಲಾವಿದ ಟಿ.ವಿ. ರಾಮಪ್ರಸಾದ್ ಅವರು ಕೋಟೇಶ್ವರ ಅಯ್ಯರ್ ಅವರ ಸಂಯೋಜನೆಗಳ ಬಗ್ಗೆ ಕಾರ್ಯಾಗಾರವನ್ನು ನಡೆಸಿಕೊಡದಿದ್ದಾರೆ. ಇದೆ ಅವಧಿಯಲ್ಲಿ ಕಲಾವಿದೆ ಇಂದಿರಾ ಕಡಾಂಬಿಯವರು ಅಭಿನಯ ಕುರಿತಾದ ಕಾರ್ಯಗಾರವನ್ನು ಸಮರ್ಪಣೆ ಮಾಡಲಿದ್ದಾರೆ.
ಸಂಜೆ 4 ಗಂಟೆಗೆ ಅಬಾಲಂ ವಿದ್ಯಾರ್ಥಿಗಳಿಂದ ಸಮೂಹ ನೃತ್ಯ ಪ್ರಸ್ತುತಿ ನಡೆಯಲಿದೆ.
ವಿದುಷಿ ಲಕ್ಷ್ಮಿ ಗೋವಿಂದನ್ ಅವರಿಂದ ಕೂಚಿ ಪುಡಿ ನೃತ್ಯ ನಂತರ ರಮಾ ವೈದ್ಯನಾಥನ್ ಅವರಿಂದ ಭರತನಾಟ್ಯ ಕಾರ್ಯಕ್ರಮವಿದೆ.
ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಆಯೋಜಕರು ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post