ಕಲ್ಪ ಮೀಡಿಯಾ ಹೌಸ್ | ಮೈಸೂರು |
ಕ್ರಿಸ್ಮಸ್ ಮತ್ತು ಹೊಸ ವರ್ಷದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು ರೈಲ್ವೆ ಮಂಡಳಿ #RailwayBoard ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ #SouthWesternRailway ಮಾಹಿತಿ ನೀಡಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಮೈಸೂರು-ಟ್ಯುಟಿಕೊರಿನ್ ನಡುವೆ ಎರಡು ಟ್ರಿಪ್ ವಿಶೇಷ ಎಕ್ಸ್’ಪ್ರೆಸ್ ರೈಲನ್ನು ಓಡಿಸಲಾಗುತ್ತದೆ ಎಂದು ತಿಳಿಸಿದೆ.
06283 ಸಂಖ್ಯೆಯ #Mysore ಮೈಸೂರು-ಟ್ಯುಟಿಕೊರಿನ್ ವಿಶೇಷ ಎಕ್ಸ್’ಪ್ರೆಸ್ ಈ ರೈಲು 2025ರ ಡಿಸೆಂಬರ್ 23 ಮತ್ತು 27ರಂದು (ಮಂಗಳವಾರ ಮತ್ತು ಶನಿವಾರ) ಸಂಜೆ 18:35ಕ್ಕೆ ಮೈಸೂರಿನಿಂದ ಹೊರಟು, ಮರುದಿನ ಬೆಳಗ್ಗೆ 11:00ಕ್ಕೆ ಟ್ಯುಟಿಕೊರಿನ್ ತಲುಪಲಿದೆ.
ಮರಳಿ ಸಂಚರಿಸುವ 06284 ಸಂಖ್ಯೆಯ ರೈಲು #Tuticorin ಟ್ಯುಟಿಕೊರಿನ್-ಮೈಸೂರು ವಿಶೇಷ ಎಕ್ಸ್’ಪ್ರೆಸ್ 2025ರ ಡಿಸೆಂಬರ್ 24 ಮತ್ತು 28ರಂದು (ಬುಧವಾರ ಮತ್ತು ಭಾನುವಾರ) ಮಧ್ಯಾಹ್ನ 14:00ಕ್ಕೆ ಟ್ಯುಟಿಕೊರಿನ್’ನಿಂದ ಹೊರಟು, ಮರುದಿನ ಬೆಳಗ್ಗೆ 07:45ಕ್ಕೆ ಮೈಸೂರು ತಲುಪಲಿದೆ.
ಎಲ್ಲೆಲ್ಲಿ ನಿಲುಗಡೆ?
ಮಾರ್ಗಮಧ್ಯೆ ಈ ವಿಶೇಷ ರೈಲು ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರಂ, ಕೆಂಗೇರಿ, ಕೆ.ಎಸ್.ಆರ್. ಬೆಂಗಳೂರು, ಬೆಂಗಳೂರು ಕ್ಯಾಂಟ್, ಹೊಸೂರು, ಧರ್ಮಪುರಿ, ಸೇಲಂ, ನಮಕ್ಕಲ್, ಕರೂರು, ದಿಂಡಿಗಲ್, ಮಧುರೈ, ವಿರುದುನಗರ, ಸತೂರ್, ಕೋವಿಲ್ಪಟ್ಟಿ ಮತ್ತು ಟುಟಿಮೇರ್ಲು ಸ್ಟೇಷನ್’ಗಳಲ್ಲಿ ನಿಲುಗಡೆಗೊಳ್ಳಲಿದೆ.
ಎಷ್ಟು ಬೋಗಿ ಇರಲಿವೆ?
ಈ ವಿಶೇಷ ರೈಲು 18 ಬೋಗಿಗಳನ್ನು ಒಳಗೊಂಡಿರಲಿದೆ, ಇದರಲ್ಲಿ ಒಂದು ಎಸಿ 2-ಟಯರ್, ಎರಡು ಎಸಿ 3-ಟಯರ್, ಒಂಬತ್ತು ಸ್ಲೀಪರ್ ಕೋಚ್’ಗಳು, ನಾಲ್ಕು ಸಾಮಾನ್ಯ ದ್ವಿತೀಯ ವರ್ಗ ಬೋಗಿಗಳು ಮತ್ತು ಎರಡು ದ್ವಿತೀಯ ವರ್ಗ-ಸಾಮಾನು ಬ್ರೇಕ್ ವ್ಯಾನ್/ದಿವ್ಯಾಂಗಜನ ಬೋಗಿಗಳು ಸೇರಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















