ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮಕ್ಕಳಲ್ಲಿ ಸಂಸ್ಕೃತಿಯ ಅರಿವು ಮೂಡಿಸುವ ಹಾಗೂ ಪೋಷಕರು-ಮಕ್ಕಳ ಬಾಂಧವ್ಯವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಪೂರ್ಣ ಚೇತನ ಶಾಲೆ ಇದೇ ಮೊದಲ ಬಾರಿಗೆ ‘ಮೈಸೂರು ಹೆರಿಟೇಜ್ ಟ್ರೆಷರ್ ಹಂಟ್’ #Mysore Heritage Treasure Hunt ಅನ್ನುವ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿದೆ.
16 ವರ್ಷದೊಳಗಿನ ಮಕ್ಕಳಿಗಾಗಿ ರೂಪಿಸಲಾದ ಈ ವಿಶೇಷ ಟ್ರೆರ್ಷ ಹಂಟ್ ಕಾರ್ಯಕ್ರಮ ಡಿ.21 ನಡೆಯಲಿದೆ. ಅಂದು ಮಕ್ಕಳು ತಮ್ಮ ಪೋಷಕರ ಜೊತೆಗೆ ಬೆಳಿಗ್ಗೆ 7 ಗಂಟೆಗೆ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಆರಂಭವಾಗುವ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.
ಭಾಗವಹಿಸುವ ಪ್ರತೀ ತಂಡಕ್ಕೂ ಕಾರ್ಯಕ್ರಮದ ಆರಂಭದಲ್ಲೇ 10 ಸುಳಿವುಗಳನ್ನು ಒಳಗೊಂಡ ವಿಶೇಷ ಟ್ರೆರ್ಷ ಕಿಟ್ ನೀಡಲಾಗುತ್ತದೆ. ತಂಡಗಳು ಮೈಸೂರು ನಗರದ ಪ್ರಮುಖ ಐತಿಹಾಸಿಕ ಮತ್ತು ಪಾರಂಪರಿಕ ಸ್ಥಳಗಳಿಗೆ ತೆರಳಿ ಸುಳಿವುಗಳನ್ನು ಬಗೆಹರಿಸಬೇಕು. ಇನ್ನೊಂದು ವಿಶೇಷ ಆಕರ್ಷಣೆ ಪೂರ್ಣ ಚೇತನ ಶಾಲೆಯ ವಿದ್ಯಾರ್ಥಿಗಳಿಂದ ಮೈಸೂರು ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಹೆರಿಟೇಜ್ ಫ್ಲ್ಯಾಶ್ ಮೊಬ್ ಪ್ರದರ್ಶನ ನಡೆಯಲಿದೆ.
ಈ ಕುರಿತು ಮಾತನಾಡಿದ ಶಾಲೆಯ ಸಿಇಒ ದರ್ಶನ್ ರಾಜ್, ಮಕ್ಕಳು ಮೈಸೂರಿನ ಪರಂಪರೆಯನ್ನು ಅನುಭವದ ಮೂಲಕ ತಿಳಿದುಕೊಳ್ಳಬೇಕು. ಜೊತೆಗೆ ಪೋಷಕರೊಂದಿಗೆ ಗುಣಮಟ್ಟದ ಸಮಯ ಕಳೆಯುವ ಅವಕಾಶ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ಸ್ಪರ್ಧೆಯ ವಿಜೇತರಿಗೆ 10,000, 7,500 ಮತ್ತು 5,000 ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುವುದು. ಭಾಗವಹಿಸುವ ಎಲ್ಲಾ ತಂಡಗಳಿಗೆ ಪ್ರಮಾಣಪತ್ರ ನೀಡಲಾಗುತ್ತದೆ. ಪ್ರತಿ ತಂಡಕ್ಕೆ ಪ್ರವೇಶ ಶುಲ್ಕ 200 ನಿಗದಿಪಡಿಸಲಾಗಿದೆ. ನೋಂದಣಿ ಲಿಂಕ್‌ಗಾಗಿ ಈ ಸಂಖ್ಯೆಗೆ 7204836513 ವಾಟ್ಸಾಪ್ ಸಂದೇಶ ಕಳುಹಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















