ಕಲ್ಪ ಮೀಡಿಯಾ ಹೌಸ್ | ಆಲಮಟ್ಟಿ |
ಮಧ್ಯ ಹಾಗೂ ಉತ್ತರ ಕರ್ನಾಟಕದಾದ್ಯಂತ ರೈಲು ಸಂಪರ್ಕವನ್ನು ವಿಸ್ತರಿಸುವ ಸಲುವಾಗಿ ಆಲಮಟ್ಟಿ-ಕುಷ್ಟಗಿ ಹೊಸ ರೈಲು ಮಾರ್ಗವನ್ನು ಪ್ರಸ್ತಾಪಿಸಲಾಗಿದೆ.
ಈ ಕುರಿತಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಪತ್ರ ಬರೆದಿದ್ದು, ಈ ಕುರಿತಂತೆ ಪ್ರಸ್ತಾಪ ಮಾಡಿದ್ದಾರೆ.
ಈ ನೂತನ ಮಾರ್ಗಕ್ಕೆ ಸಂಬಂಧಿಸಿದಂತೆ ಅಂತಿಮ ಸ್ಥಳ ಸಮೀಕ್ಷೆಯನ್ನು ಫೆಬ್ರವರಿ 2023 ರಲ್ಲಿ ಮಂಜೂರು ಮಾಡಲಾಗಿದ್ದು, ಸದ್ಯ ಡಿಪಿಆರ್ ಪ್ರಸ್ತುತ ಸಿದ್ಧತೆಯಲ್ಲಿದೆ ಎಂದಿದ್ದಾರೆ.
ಒಟ್ಟು 91 ಕಿಮೀ ಮಾರ್ಗವು ಗದಗ-ಹೊಟಗಿ ಮಾರ್ಗದ ಆಲಮಟ್ಟಿವರೆಗೂ ಇರಲಿದೆ. ಅಲ್ಲದೇ, ಈ ಮಾರ್ಗವು ಗದಗ-ವಾಡಿ ಮಾರ್ಗದ ಕುಷ್ಟಗಿಯನ್ನು ಸಂಪರ್ಕಿಸುತ್ತದೆ. ಪ್ರಮುಖವಾಗಿ ಕೂಡಲಸಂಗಮ, ಹುನಗುಂದ ಮತ್ತು ಇಳಕಲ್ ಮೂಲಕ ಹಾದುಹೋಗುತ್ತದೆ.
ಯೋಜನೆಗೆ ಸಂಬಂಧಿಸಿದಂತೆ ಸರ್ವೆ ಮತ್ತು ಇಂಜಿನಿಯರಿಂಗ್ ಅಧ್ಯಯನಗಳು ಪೂರ್ಣಗೊಂಡಿವೆ. ಸಂಚಾರ ಸಮೀಕ್ಷೆ ವರದಿ ಪರಿಶೀಲನೆಯಲ್ಲಿದ್ದು, ಮೇ 2026 ರ ವೇಳೆಗೆ ಡಿಪಿಆರ್ ಸಿದ್ಧವಾಗುವ ಸಾಧ್ಯತೆಯಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















