ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು, ಶಿವಮೊಗ್ಗ ಜಿಲ್ಲಾ ಘಟಕ, ಕುವೆಂಪು ವಿವಿ ಇವರುಗಳ ಸಂಯುಕಾಶ್ರಯದಲ್ಲಿ ಡಿ.21ರಂದು ಕುವೆಂಪು ವಿವಿಯ #Kuvempu University ಬಸವಸಭಾ ಭವನದಲ್ಲಿ ಅಖಿಲ ಕರ್ನಾಟಕ 5ನೇಯ ಕವಿಕಾವ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಕೇಂದ್ರ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 5ನೇ ಕವಿಕಾವ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಾಡಿನ ಹಿರಿಯ ಸಾಹಿತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ರಾಜೇಂದ್ರಚನ್ನಿ ಅವರನ್ನು ಆಯ್ಕೆಮಾಡಲಾಗಿದೆ. ಸಮ್ಮೇಳನವನ್ನು ಕುವೆಂಪು ವಿವಿ ಕುಲಪತಿ ಡಾ. ಶರತ್‍ಅನಂತಮೂರ್ತಿ ಉದ್ಘಾಟಿಸುವರು. ಸಾಹಿತಿ ಡಾ. ರಂಜನ್‍ದರ್ಗಾ ಅಧ್ಯಕ್ಷತೆ ವಹಿಸಲಿರುವ ಈ ಕಾರ್ಯಕ್ರಮದಲ್ಲಿ ಹಲವು ಕವಿಗಳು, ಗಣ್ಯರು, ಸುಪ್ರಸಿದ್ಧ ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದರು.

ಪ್ರಶಸ್ತಿಯ ಪ್ರಮುಖರು
ರಮೇಶ್ ಗಬ್ಬೂರು, ಶ್ರೀದೇವಿ ಕೆರೆಮನೆ, ಸಾತನೂರು ದೇವರಾಜು, ಡಾ.ಜಿ. ಪ್ರಶಾಂತ್‍ನಾಯಕ್, ಪ್ರೊ.ನಲ್ಲಿಕಟ್ಟೆ ಎಸ್. ಸಿದ್ದೇಶ್, ದೇಶಪಾಂಡೆ, ಕೆ.ಎಸ್. ಪವಿತ್ರ, ಎನ್. ಮಂಜುನಾಥ್, ಎ.ಎ.ದರ್ಗಾ, ಅನುಸೂಯ ಜಹಗೀರದಾರ, ಸುಶೀಲ, ರೇಷ್ಮಾಕಂದಕೂರು, ಶಿವಲೀಲಾ, ಡಾ.ರಘುಕೋಟಿ, ಫೈರೋಜ್‍ಗಾಂಧಿ, ಪಿ.ಸಿ. ಸೋಮಶೇಖರ್, ಡಾ.ರಾಕೇಶ್ ಹೆಚ್.ಎಸ್., ಪ್ರೊ.ಎನ್.ಬಿ. ತಿಪ್ಪೇಸ್ವಾಮಿ, ರಶ್ಮೀ ಕೆ.ವಿಶ್ವನಾಥ್, ಜೆ.ಸಿ. ದೀಪು ಮುಂತಾದವರು.
ವೇದಿಕೆಯು ನಾಡಿನ ಎಂಟು ಸಾಧಕರಿಗೆ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ನೀಡಿದೆ. ಹಾಗೆಯೇ ಮೂರು ರಾಜ್ಯಮಟ್ಟದ ಕವಿಗೋಷ್ಠಿಗಳನ್ನು ಏರ್ಪಡಿಸಲಾಗಿದ್ದು, ಸುಮಾರು 30 ಕವಿಗಳಂತೆ 3 ಗೋಷ್ಠಿಯಿಂದ 90 ಕವಿಗಳು ಭಾಗವಹಿಸಲಿದ್ದಾರೆ. ಮೊದಲನೇ ಕವಿಗೋಷ್ಠಿಯಲ್ಲಿ ಡಾ.ಕಾವ್ಯಶ್ರೀ, 2ನೇ ಕವಿಗೋಷ್ಠಿಯಲ್ಲಿ ಡಾ.ಕುಂಸಿ ಉಮೇಶ್, ಡಾ.ಎನ್.ಶೈಲಜಾ ಹಾಸನ, 3ನೇ ಕವಿಗೋಷ್ಠಿಯಲ್ಲಿ ಡಾ.ಸಿದ್ಧರಾಮ ಹೊನ್ಕಲ್ ಭಾಗವಹಿಸುವರು ಎಂದರು.
ಇದೇ ಸಂದರ್ಭದಲ್ಲಿ ದೀನಬಂಧು ಟ್ರಸ್ಟಿನ ರಮೇಶ್ ಶಂಕರಘಟ್ಟ, ನಾಗವೇಣಿರೆಡ್ಡಿ, ರವಿಕಾಂತ್ ಹೆಗಡೆ ಅವರಿಗೆ ಸಮಾಜ ಸೇವಾ ಪ್ರಶಸ್ತಿ ನೀಡಲಾಗುವುದು. ಇದರ ಜೊತೆಗೆ ಕರ್ನಾಟಕ ಶಿರೋಮಣಿ ರಾಜ್ಯ ಪ್ರಶಸ್ತಿಯನ್ನು ಕೂಡ ಹಲವರಿಗೆ ನೀಡಲಾಗುವುದು ಎಂದರು.
ಜಿಲ್ಲಾಧ್ಯಕ್ಷೆ ಡಾ.ಹಸೀನಾ ಹೆಚ್.ಕೆ. ಮಾತನಾಡಿ, ಅಂದು ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಕುವೆಂಪು ವಿವಿ ಕನ್ನಡ ಭಾರತೀಯ ಹಿರಿಯ ಪ್ರಾಧ್ಯಾಪಕ ಡಾ.ಜಿ. ಪ್ರಶಾಂತ್‍ನಾಯಕ್ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಡಾ.ರಾಜೇಂದ್ರ ಚೆನ್ನಿ ಸಮ್ಮೇಳನ ನುಡಿಗಳನ್ನಾಡುವರು. ಅಖಿಲ ಭಾರತ ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ. ಸೋಮಶೇಖರ್, 12 ಸಾಧಕರಿಗೆ ಕರ್ನಾಟಕ ಶಿರೋಮಣಿ ರಾಜ್ಯ ಪ್ರಶಸ್ತಿ ನೀಡುವರು. ಸಂಸ್ಥಾಪಕ ಅಧ್ಯಕ್ಷ ಎಸ್. ಕೋಟ್ರೇಶ್ ಉಪ್ಪಾರ್ ನಿರ್ಣಯ ಮಂಡಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ತಾಲ್ಲೂಕು ಅಧ್ಯಕ್ಷ ಇಂದಿರಾ ಪ್ರಕಾಶ್, ಗೌರವ ಸಲಹೆಗಾರರಾದ ಸೈಯದ್ ಮುಹಿಬುಲ್ಲಾ ಖಾದ್ರಿ, ತೀರ್ಥಹಳ್ಳಿ ತಾಲ್ಲೂಕು ಅಧ್ಯಕ್ಷೆ ಸುಜಾತ ಎಸ್., ಹೇಮಂತ್ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















