ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿನ್ನೆ ನಮ್ಮ ಬಿಜೆಪಿ ಪಕ್ಷದ ಕಚೇರಿ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ರಾಜಕೀಯ ಪ್ರೇರಿತವಾದದ್ದು ಮತ್ತು ಕಾಂಗ್ರೆಸ್ಸಿನ ಕೆಟ್ಟ ಸಂಸ್ಕೃತಿಯನ್ನ ಇದು ಬಿಂಬಿಸುತ್ತದೆ ಎಂದು ಬಿಜೆಪಿ ಶಿವಮೊಗ್ಗ ನಗರ ಅಧ್ಯಕ್ಷ ಮೋಹನ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಆಡಳಿತದಲ್ಲಿ ತನ್ನೆಲ್ಲ ಹುಳುಕನ್ನ ಮುಚ್ಚಿಕೊಳ್ಳಲು, ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಲಾಗದೆ, ಜನರನ್ನು ಬೇರಡೆ ಸೆಳೆಯಲು ತಂತ್ರ ರೂಪಿಸುತ್ತಿದೆ, ರಾಜ್ಯದ ಮಹಿಳೆಯರ ಖಾತೆಗೆ ಬರಬೇಕಿದ್ದ ಎರಡು ತಿಂಗಳ ಗೃಹಲಕ್ಷ್ಮಿ ಹಣ ಕಾಣೆಯಾಗಿದೆ,
ತಿಂಗಳಿಗೆರಡು ಸಾವಿರ ಎಂದು ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿಯಲ್ಲಿ ಹೇಳಿದ್ದು,ಪ್ರತಿ ತಿಂಗಳು ಹಣ ಹಾಕಿದ್ದೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಎರಡು ತಿಂಗಳ ಸುಮಾರು ಐದು ಸಾವಿರ ಕೋಟಿ ರೂ ಹಣವನ್ನು ನೀಡದೆ ಕಳುಹಿಸಿದ್ದು ಎಲ್ಲಿಗೆ ಎಂಬ ಪ್ರಶ್ನೆಯನ್ನು ರಾಜ್ಯದ ಮಹಿಳೆಯರು ಕೇಳುತ್ತಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಚಿವರು ಸದನದಲ್ಲೂ ಕೂಡ ತಪ್ಪು ಮಾಹಿತಿಯನ್ನು ನೀಡಿ ತಮ್ಮ ಜನರಿಗೆ ದ್ರೋಹ ಬಗೆದಿದ್ದು ತಮ್ಮ ಸರ್ಕಾರದ ಮೇಲೆ ಜನರು ತಿರುಗಿ ಬೀಳುತ್ತಾರೋ ಎಂದು ಇದನ್ನು ಮುಚ್ಚಿಕೊಳ್ಳಲು, ಜನರ ಗಮನವನ್ನು ಬೇರೆ ಸೆಳೆಯಲು ಕಾಂಗ್ರೆಸ್ ನವರು ನಿನ್ನೆ ನಮ್ಮ ಪಕ್ಷದ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಇದು ದಿಕ್ಸೂಚಿಯಾಗಿದೆ, ನಮ್ಮ ಪಕ್ಷದ ಕಚೇರಿ ಮುಂಭಾಗ ನಡೆಸಿರುವ ಪ್ರತಿಭಟನೆ ಇದು ಕಾಂಗ್ರೆಸ್ ನಾಯಕರ ಕೆಟ್ಟ ಸಂಸ್ಕೃತಿಯನ್ನು ಬಿಂಬಿಸುತ್ತದೆ,ಇದನ್ನು ನಮ್ಮ ನಗರ ಬಿಜೆಪಿ ಘಟಕವು ಮತ್ತು ನಮ್ಮ ನಾಯಕರು ಇದನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದಿದ್ದಾರೆ.
ನಿನ್ನೆ ಈ ಪ್ರತಿಭಟನೆಯ ವೇಳೆ, ಮಹಿಳಾ ಪೊಲೀಸ್ ಒಬ್ಬರು ಮಾಂಗಲ್ಯ ಸರ ಕಳವು ಆಗಿದ್ದು, ಈ ಅತ್ಯಂತ ಹೀನವಾದ ಕೃತ್ಯವು ಶಿವಮೊಗ್ಗ ಜನತೆಯಲ್ಲಿ ಅನುಮಾನ ಹುಟ್ಟಿದೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ಮೊದಲು ಕಾಂಗ್ರೆಸ್ ನವರು ತಮ್ಮ ಹುಳುಕನ್ನು ಸರಿ ಮಾಡಿಕೊಳ್ಳಲಿ, ಇವರ ಆಡಳಿತದಲ್ಲಿ ರಾಜ್ಯದಲ್ಲಿ ಕಳ್ಳರಿಗೆ ಭ್ರಷ್ಟಾಚಾರಿಗಳಿಗೆ ಹೆದರಿಕೆಯೇ ಇಲ್ಲದಂತಾಗಿದೆ, ಮೊದಲು ಸರಿಯಾದ ರೀತಿಯಲ್ಲಿ ಸರ್ಕಾರ ನಡೆಸುವುದು ಕಲಿಯಲಿ ಎಂದು ಕಾಂಗ್ರೆಸ್ ನಾಯಕರ ನಡೆಯನ್ನ ತೀವ್ರವಾಗಿ ಖಂಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















