ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಶ್ವ ಹಿಂದೂ ಪರಿಷತ್ ಮತ್ತು ಶಕ್ತಿ ದೇವತೆಗಳ ಸಮಾಗಮ ಸಮಿತಿ ಶಿವಮೊಗ್ಗ ವತಿಯಿಂದ ಇಂದು ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ 27ನೇ ವರ್ಷದ ಶಕ್ತಿ ದೇವತೆಗಳ ಸಮಾಗಮಾ ಅದ್ಧೂರಿಯಾಗಿ ನಡೆಯಿತು.
75ಕ್ಕೂ ಹೆಚ್ಚು ಅಲಂಕೃತ ಶಕ್ತಿದೇವತೆಗಳನ್ನು ಅದ್ಧೂರಿ ಮೆರವಣಿಗೆಯಲ್ಲಿ ದೇವಾಲಯದ ಆವರಣದಲ್ಲಿ ಕರೆತಂದು ಸಮಾಗಮಾ ಪೂಜೆ ನಡೆಸಲಾಯಿತು.
ಇಂದು ಸಂಜೆ 6.30ರ ವರೆಗೆ ಎಲ್ಲಾ ದೇವರುಗಳಿಗೆ ಮಡಿಲಕ್ಕಿ ಸಮರ್ಪಣೆ ಮತ್ತು ದೀಪಾರಾಧನೆ ಕಾರ್ಯಕ್ರಮ ನಡೆಯಲಿದ್ದು, ನಂತರ ಎಲ್ಲಾ ದೇವತೆಗಳು ದೇವಾಲಯಗಳಿಗೆ ಹೊರಡುವ ಕಾರ್ಯಕ್ರಮವಿದೆ.
ಈ ಕಾರ್ಯಕ್ರಮದಲ್ಲಿ ಪ್ರಧಾನ ಅರ್ಚಕರಾದ ರಾಮ್‍ಪ್ರಸಾದ್, ದೀನ್‍ದಯಾಳ್, ವಿಹೆಚ್‍ಪಿ ಹಾಗೂ ಸಮಾಗಮ ಸಮಿತಿಯ ಪ್ರಮುಖರಾದ ವಾಸುದೇವ್, ರಮೇಶ್ ಬಾಬು ಜಾದವ್, ಆನಂದ್‍ರಾವ್ ಜಾದವ್, ರಾಮಪ್ಪ, ಜಗದೀಶ್, ನಟರಾಜ್, ಪ್ರಕಾಶ್ ಜೋಡಿಯಾಕ್, ಮಾಲತೇಶ್, ಸುನೀತಾ, ಶಶಿಕಲಾ, ಅರವಿಂದ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 
















