ಕಲ್ಪ ಮೀಡಿಯಾ ಹೌಸ್ | ಪಾಂಡವಪುರ |
ಸಮಯಪ್ರಜ್ಞೆಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ತಮ್ಮ ಪ್ರಾಣವನ್ನೂ ಲೆಕ್ಕಿಸದ ರೈಲ್ವೆ ಸ್ಟೇಷನ್ ಮಾಸ್ಟರ್ ಒಬ್ಬರು ಪ್ರಯಾಣಿಕರೊಬ್ಬರ ಜೀವ ಉಳಿಸಿರುವ ಘಟನೆ ಪಾಂಡವಪುರ ರೈಲು ನಿಲ್ದಾಣದಲ್ಲಿ ನಡೆದಿದೆ.
ಅಭಿಜಿತ್ ಸಿಂಗ್ ಅವರೇ ಈ ಸಾಹಸಿ ಸ್ಟೇಷನ್ ಮಾಸ್ಟರ್. ಇವರ ಎಚ್ಚರಿಕೆಯ ಸಮಯಪ್ರಜ್ಞೆ, ಸಮಯೋಚಿತ ಕ್ರಮ ಹಾಗೂ ಕರ್ತವ್ಯನಿಷ್ಠೆ ಒಬ್ಬ ವ್ಯಕ್ತಿಯ ಅಮೂಲ್ಯ ಪ್ರಾಣ ಉಳಿದಿದೆ.
16219 ಸಂಖ್ಯೆಯ ರೈಲು ಪಾಂಡವುರ ನಿಲ್ದಾಣದಲ್ಲಿ ನಿಲುಗಡೆಯಾಗಿದ್ದ ವೇಳೆ, ಪಾಂಡವಪುರ ತಾಲೂಕಿನ ನಿವಾಸಿಯಾದ ಶಿವರಾಜು ಕಟ್ಟೇರಿ (55) ಅವರು ಚಲಿಸುತ್ತಿದ್ದ ರೈಲಿಗೆ ಏರುವಾಗ ಜಾರಿ ಬಿದ್ದು ಅಪಾಯಕರ ಸ್ಥಿತಿಗೆ ಒಳಗಾದರು.

ಸ್ಥಳದಲ್ಲೇ ಇದ್ದ ಅಭಿಜಿತ್ ಸಿಂಗ್ ಅವರು ಇದನ್ನು ಗಮನಿಸಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ಧೈರ್ಯ ಮತ್ತು ಚುರುಕಿನಿಂದ ಪ್ರಯಾಣಿಕರನ್ನು ರಕ್ಷಿಸಿ, ಸಂಭವಿಸಬಹುದಾದ ಭಾರೀ ಅವಘಡವನ್ನು ತಪ್ಪಿಸಿದರು. ನಂತರ ಪ್ರಯಾಣಿಕರಿಗೆ ಅಗತ್ಯ ಸಹಾಯ ಒದಗಿಸಲಾಗಿದ್ದು ಅವರು ಸುರಕ್ಷಿತವಾಗಿ ಮರಳಿದ್ದಾರೆ.
ತಮ್ಮ ಪ್ರಾಣದ ಹಂಗು ತೊರೆದು ಪ್ರಯಾಣಿಕನ ಜೀವ ಉಳಿಸಿದ ಅಭಿಜಿತ್ ಸಿಂಗ್ ಅವರ ಧೈರ್ಯಶಾಲಿ ಮತ್ತು ಸಮಯೋಚಿತ ನಿರ್ಧಾರಕ್ಕೆ ಜನರಲ್ ಮ್ಯಾನೇಜರ್ ಮುಕುಲ್ ಸರನ್ ಮಾಥುರ್ ಶ್ಲಾಘಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















