No Result
View All Result
Hyderabad Pink Power Run 35K Breast Cancer Awareness copy
English Articles

Hyderabad Runs Pink : 35,000 Unite For Breast Cancer Awareness

by kalpa News
September 27, 2026
0

Kalpa Media House  |  Hyderabad  | 35,000 Unite in Hyderabad for Pink Power Run 3.0 MEIL and Sudha Reddy Foundation jointly...

Read moreDetails
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
  • Advertise With Us
  • Grievances
  • About Us
  • Contact Us
Monday, September 28, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ರೂಪ ಅಯ್ಯರ್ ನಿರ್ದೇಶನದ ಹಿಂದಿ ಚಲನಚಿತ್ರ ವಿಶ್ವವ್ಯಾಪಿ ಬಿಡುಗಡೆ

ಸುಭಾಷ್ ಚಂದ್ರ ಬೋಸ್ ಸೈನೈದ ಪ್ರಥಮ ಮಹಿಳಾ ಗೂಢಚಾರಿಣಿಯ ಮೈನವಿರೇಳಿಸುವ ದೇಶಭಕ್ತಿಯ, 'ಆಜಾದ್ ಭಾರತ್ '

kalpa News by kalpa News
December 27, 2025
in Special Articles
0
ರೂಪ ಅಯ್ಯರ್ ನಿರ್ದೇಶನದ ಹಿಂದಿ ಚಲನಚಿತ್ರ ವಿಶ್ವವ್ಯಾಪಿ ಬಿಡುಗಡೆ

ಆಜಾದ್ ಭಾರತ್ ಚಲನಚಿತ್ರದ ನಿರ್ದೇಶಕಿ ರೂಪಾ ಅಯ್ಯರ್ ಅವರಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮರಿ ಮೊಮ್ಮಗಳು ರಾಜಶ್ರೀ ಚೌಧರಿ ಬೋಸ್ ಬೆಂಗಳೂರಿನ ಬಿ ಎನ್ ಎಂ ಐ ಟಿ ಸಭಾಂಗಣದಲ್ಲಿ ಸತ್ಕರಿಸುತ್ತಿರುವುದು.

Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ಭಾರತದ ಸ್ವಾತಂತ್ರ್ಯ ಚಳುವಳಿ ಅಹಿಂಸೆಯ ಹೋರಾಟವಾಗಿತ್ತು ಎಂದು ಇತಿಹಾಸದ ಪಾಠಗಳಲ್ಲಿ ಹೇಳಿಕೊಡಲಾಗಿದೆ. ವಾಸ್ತವವಾಗಿ, ಗಾಂಧಿಜೀ #Gandhiji ನೇತೃತ್ವದಲ್ಲಿ ನಡೆದ ಅಹಿಂಸೆಯ ಹೋರಾಟಕ್ಕೂ ಮುನ್ನ ಹಾಗೂ ಅದಕ್ಕೆ ಸಮಾನಾಂತರವಾಗಿ ಶೌರ್ಯ..ಸಾಹಸ… ತ್ಯಾಗ.. ಬಲಿದಾನದ ಸ್ವಾತಂತ್ರ್ಯ ಹೋರಾಟ ನಡೆದಿರುವುದು ಇಂದಿನ ಜನಾಂಗದ ಸ್ಮೃತಿ ಪಟಲದಿಂದ ಮರೆಯಾಗಿದೆ.

ಇಂಥ ಪರಾಕ್ರಮದ ಭಾರತದ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ಇದ್ದವರು ನೇತಾಜಿ ಸುಭಾಷ್ ಚಂದ್ರ ಬೋಸ್ #Nethaji Subhashchandrabose ಇಂಡಿಯನ್ ನ್ಯಾಷನಲ್ ಆರ್ಮಿ #Indian National Army ಸ್ಥಾಪಿಸಿ ಬ್ರಿಟಿಷರ ವಿರುದ್ಧ ರಣಕಹಳೆ ಊದಿದ ನೇತಾಜಿ, ಹೋರಾಟದ ಮೂಲಕ ಭಾರತ ಸ್ವಾತಂತ್ರ್ಯ ಪಡೆಯಬೇಕು ಎಂದು ಅಚಲ ನಿರ್ಧಾರ ಮಾಡಿದ್ದರು.
ಅವರ ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿ ಅನೇಕ ಪರಾಕ್ರಮಿ ಸೈನಿಕರ ದಂಡೇ ಇತ್ತು. ಇವರಲ್ಲಿ ಭಾರತದ ಸ್ವಾತಂತ್ರ್ಯ ಸಂಭ್ರಮದ ಇತಿಹಾಸದಲ್ಲಿ ಎಂದೂ ಮರೆಯಬಾರದ ಹೆಸರು ನೀರಾ ಆರ್ಯ…! ನೀರಾ ಆರ್ಯಾ : ಅಚಲ ದೇಶಭಕ್ತಿಯ ನಿಜವಾದ ರೂಪವೇ ನೀರಾ ಆರ್ಯ. #Neera Arya

1902ರಲ್ಲಿ ಪ್ರಭಾವಿ ಮತ್ತು ಅಂದಿನ ಕಾಲದ ಗೌರವಾನ್ವಿತ ಕುಟುಂಬದಲ್ಲಿ ನೀರಾ ಆರ್ಯಾ ಜನಿಸಿದರು. ಅವರ ತಂದೆ ಸೆಠ್ ಛಜ್ಜುಮಾಲ್ ಸುಪ್ರಸಿದ್ಧ ಉದ್ಯಮಿ. ಬಾಲ್ಯದಿಂದಲೇ ದೇಶ ಸೇವೆಯ ಬಗ್ಗೆ ಆಸಕ್ತಿ ಹೊಂದಿದ್ದ ನೀರಾ, ಶಿಕ್ಷಣ ಮುಗಿಸಿದ ನಂತರ ಆಜಾದ್ ಹಿಂದ್ ಫೌಜ್‌ನ ‘ರಾಣಿ ಝಾನ್ಸಿ ರೆಜಿಮೆಂಟ್‌ಗೆ’ ಸೇರ್ಪಡೆಯಾಗಿ ಸೈನಿಕಳಾದರು.

ನೀರಾ ಅವರ ತಂದೆ, ಆಕೆಗೆ ಬ್ರಿಟಿಷ್ ಸೇನೆಯ ಅಧಿಕಾರಿಯಾಗಿದ್ದ ಶ್ರಿಕಾಂತ್ ಜೈರಂಜನ್ ದಾಸ್ ಅವರನ್ನು ವರನಾಗಿ ಆಯ್ಕೆ ಮಾಡಿದರು.

ಮದುವೆ ಬಳಿಕ ಇಬ್ಬರೂ ವಿರುದ್ಧ ದಿಕ್ಕಿನಲ್ಲಿ ಯೋಚಿಸುತ್ತಿರುವುದು ಸ್ಪಷ್ಟವಾಯಿತು. ದಂಪತಿಗಳಿಬ್ಬರೂ ಪರಸ್ಪರ ವಿರುದ್ಧ ಚಿಂತನೆಗಳು ಮತ್ತು ಬ್ರಿಟಿಷ್ ಆಡಳಿತದ ಕುರಿತು ತದ್ವಿರುದ್ಧ ಬದ್ಧತೆಯನ್ನು ಹೊಂದಿದ್ದರಿಂದ ಸಂಘರ್ಷಗಳು ಶುರುವಾದವು.

ಶ್ರಿಕಾಂತ್ ಅವರಿಗೆ ನೀರಾ ಆಜಾದ್ ಹಿಂದ್ ಫೌಜ್‌ನಲ್ಲಿ ಮತ್ತು ನೆತಾಜಿ ಸುಭಾಷ್ ಚಂದ್ರ ಬೋಸ್ ಅವರೊಂದಿಗೆ ನಂಟು ಹೊಂದಿರುವುದು ತಿಳಿದಾಗ, ಅವರು ಆಕೆಯಿಂದ ಮಾಹಿತಿ ಪಡೆಯಲು ಒತ್ತಡ ಹೇರಲು ಆರಂಭಿಸಿದರು. ನೀರಾ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ.

ಒಂದು ದಿನ, ನೀರಾ ನೆತಾಜಿಯೊಂದಿಗೆ ಮಹತ್ವದ ವಿಷಯದ ಕುರಿತಾಗಿ ಭೇಟಿಮಾಡಿದ್ದರು. ಆಕೆಗೆ ತಿಳಿಯದೇ ಶ್ರಿಕಾಂತ್ ಅವರ ಹಿಂದೆ ಹೋದರು ಮತ್ತು ಗುಂಡಿನ ದಾಳಿ ನಡೆಸಿದರು. ಇದರಿಂದ ನೇತಾಜಿಯ ಜೀವಕ್ಕೆ ಅಪಾಯ ಉಂಟಾಯಿತು. ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳಿಲ್ಲದೆ ನೇತಾಜಿ ಬದುಕುಳಿದರು.
ಆ ಕ್ಷಣದಲ್ಲಿ ನೀರಾ ತಮ್ಮ ಧೈರ್ಯ ಮತ್ತು ಚುರುಕುತನದಿಂದ ಕ್ರಮ ಕೈಗೊಂಡು ನೇತಾಜಿಯ ಪ್ರಾಣ ಉಳಿಸಿದರು. ಆದರೆ ಇದರಿಂದ ಬ್ರಿಟಿಷ್ ಸರ್ಕಾರ ಅವರ ವಿರುದ್ಧ ಕ್ರಮ ತೆಗೆದುಕೊಂಡು, ಅವರನ್ನು ಕಾಲಾಪಾನಿ ಶಿಕ್ಷೆಗಾಗಿ ಸೆಲ್ಯುಲರ್ ಜೈಲಿಗೆ ಹಾಕಲಾಯಿತು.

ಜೈಲಿನಲ್ಲಿ ಕೂಡ ನೀರಾ ಆರ್ಯಾ ಅಮೋಘ ದೇಶಭಕ್ತಿಯನ್ನು ತೋರಿದರು. ನೆತಾಜಿ ಮತ್ತು ಆಜಾದ್ ಹಿಂದ್ ಫೌಜ್ ಬಗ್ಗೆ ಮಾಹಿತಿ ನೀಡಿದರೆ ಬಿಡುಗಡೆ ಮಾಡುವುದಾಗಿ ಬ್ರಿಟಿಷರು ಒತ್ತಾಯಿಸಿದರೂ, ಅವರು ಧೈರ್ಯದಿಂದ ನಿರಾಕರಿಸಿದರು. ಯಾವುದೇ ದಮನ ಅಥವಾ ಹಿಂಸೆ ಅವರಿಗೆ ದೇಶದ ಮೇಲೆ ಇರುವ ನಿಷ್ಠೆಯನ್ನು ಕಡಿಮೆಗೊಳಿಸಲಿಲ್ಲ.

ಇತಿಹಾಸದ ದಾಖಲೆಗಳು, ನೀರಾ ಜೈಲಿನಲ್ಲಿ ತೀವ್ರ ಪೀಡೆ ಅನುಭವಿಸಿದ್ದರೂ, ಒಂದು ಶಬ್ದವೂ ಹೇಳದೆ ದೇಶದ ರಹಸ್ಯಗಳನ್ನು ಕಾಪಾಡಿಕೊಂಡಿದ್ದಾರೆ ಎಂದು ಹೇಳುತ್ತವೆ. ಎಲ್ಲ ಕಷ್ಟಗಳನ್ನೂ ಸಹಿಸಿಕೊಂಡು, ಆಜಾದ್ ಹಿಂದ್ ಫೌಜ್‌ನ ಮೊದಲ ಮಹಿಳಾ ಗುಪ್ತಚಾರಿಯಾದ ಗೌರವವನ್ನು ಗಳಿಸಿದರು .ಸ್ವತಃ ನೆತಾಜಿಯಿಂದ ಪ್ರಶಂಸೆ ಪಡೆದರು. ಉಸಿರು ನಿಲ್ಲುವ ತನಕ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದರು.

ನೀರಾ ಆರ್ಯಾ ದೇಶಕ್ಕಾಗಿ ಜೀವವನ್ನೇ ಅರ್ಪಿಸಿದ ಸ್ತ್ರೀ. ಅವರ ಕಥೆ ಧೈರ್ಯ, ಶೌರ್ಯ, ನಂಬಿಕೆ ಯುವ ಜನಾಂಗಕ್ಕೆ ಅಚಲ ದೇಶಭಕ್ತಿಯ ಅಮರ ಉದಾಹರಣೆ. ಇವರ ಈ ತ್ಯಾಗವನ್ನು ಇವತ್ತಿನ ಸಮಾಜ ಮರೆಯಬಾರದು, ಈ ಮರೆಯದ ಮಾಣಿಕ್ಯವನ್ನು ನಾವು ಹೆಮ್ಮೆಯಿಂದ ಎಲ್ಲರಿಗು ಪರಿಚಯಿಸುವ ಉದ್ದೇಶದಿಂದ ಇದೇ ಪ್ರಥಮ ಬಾರಿಗೆ, “ಆಜಾದ್ ಭಾರತ್” ಚಲನಚಿತ್ರದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜೊತೆ ನೀರಾ ಆರ್ಯ ಅವರ ಶೌರ್ಯ -ಸಾಹಸದ ಕಥೆ ರೂಪಿಸಲಾಗಿದೆ.

ನೀರಾ ಆರ್ಯ ಪಾತ್ರದಲ್ಲಿ ರೂಪಾ ಅಯ್ಯರ್

ಕನ್ನಡ ಚಿತ್ರರಂಗದಲ್ಲಿ ನಟಿ -ನಿರ್ದೇಶಕಿಯಾಗಿ ಹೆಸರು ಮಾಡಿರುವ ರೂಪಾ ಅಯ್ಯರ್ #Roopa Iyer ಇದೇ ಮೊದಲ ಬಾರಿಗೆ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ನೇತಾಜಿ ಸೈನೈದ ಅಪ್ರತಿಮ ದೇಶಭಕ್ತ ವೀರ ಮಹಿಳೆ ನೀರಾ ಆರ್ಯ ಕುರಿತು ನೈಜ ಕಥೆ ಆಧಾರಿತ ಚಿತ್ರ ‘ಆಜಾದ್ ಭಾರತ್ ‘#Azad Bharath ಸಿನಿಮಾ ನಿರ್ದೇಶನ ಮಾಡಿದ್ದಾರೆ. ಜನೆವರಿ ಎರಡನೇ ತಾರೀಖು ದೇಶದಾದ್ಯಂತ ಈ ಹಿಂದಿ ಚಲನಚಿತ್ರ ಬಿಡುಗಡೆ ಆಗಲಿದೆ. ನೀರಾ ಆರ್ಯ ಪಾತ್ರದಲ್ಲಿ ರೂಪಾ ಅಯ್ಯರ್ ಅದ್ಭುತ ನಟನೆಯ ಮೂಲಕ ಗಮನ ಸೆಳೆದಿದ್ದಾರೆ.

ಬ್ರಿಟಿಷ್ ಆಡಳಿತದಲ್ಲಿ ಕಠಿಣ ಮಾನಸಿಕ ಮತ್ತು ದೈಹಿಕ ಹಿಂಸೆಗೆ ಒಳಗಾದರೂ, ನೇತಾಜಿ ಅವರ ಸ್ವಾತಂತ್ರ್ಯ ಹೋರಾಟದ ಯಾವ ಸುಳಿವನ್ನು ಬಿಟ್ಟು ಕೊಡುವುದಿಲ್ಲ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕರಿನೀರಿನ ಶಿಕ್ಷೆ ಅನುಭವಿಸುತ್ತಾಳೆ. ತನ್ನ ಎದೆಯನ್ನೆ ಕತ್ತರಿಸುವ ದೈರ್ಯ ಮಾಡುತ್ತಾಳೆ. ಬ್ರಿಟಿಷ್ ಸೈನ್ಯದಲ್ಲಿ ಇದ್ದ ತನ್ನ ಪತಿಯಿಂದಲೇ ಚಿತ್ರಹಿಂಸೆ ಅನುಭವಿಸುವ ಪರಿಸ್ಥಿತಿ ನೀರಾ ಆರ್ಯ ಎದುರಿಸುತ್ತಾಳೆ. ಹೀಗೆ, ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ನಡೆದ ರಕ್ತ -ಸಿಕ್ತ ಹೋರಾಟದ ರಣರೋಚಕ ಕಥಾವಸ್ತು ‘ಆಜಾದ್ ಭಾರತ್ ‘ ಅನುಭವಿ ನಿರ್ದೇಶಕಿ ರೂಪಾ ಅಯ್ಯರ್ ಅವರ ಅದ್ಭುತ ಪರಿಕಲ್ಪನೆಯಲ್ಲಿ ತೆರಿಗೆ ಅಪ್ಪಳಿಸಲಿದೆ.

https://kalpa.news/wp-content/uploads/2024/04/VID-20240426-WA0008.mp4

ಈ ಚಲನಚಿತ್ರದಲ್ಲಿ ಅನೇಕ ವೈಶಿಷ್ಟ್ಯಗಳಿವೆ

ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ #Maharashtra CM Devendra Fadnavis ಅವರ ಪತ್ನಿ ಅಮೃತಾ ಫಡ್ನವೀಸ್ #Amrutha Fadnavis ಈ ಸಿನಿಮಾದಲ್ಲಿ ಒಂದು ಹಾಡು ಹಾಡಿದ್ದಾರೆ. ಬಹುತೇಕ ತಾರಾಗಣದಲ್ಲಿ ಕನ್ನಡ ಕಲಾವಿದರು ಇದ್ದಾರೆ. ರೂಪಾ ಅಯ್ಯರ್ ಅವರ ಪತಿ ಶ್ರೀವಾತ್ಸವ್ ಅವರ ಸಂಗೀತ ಚಿತ್ರಕ್ಕಿದೆ. ಇತ್ತೀಚೆಗೆ ಈ ಚಿತ್ರದ ಪ್ರಚಾರಕ್ಕಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮರಿ ಮೊಮ್ಮಗಳು ರಾಜಶ್ರೀ ಚೌಧರಿ ಬೋಸ್ ಬೆಂಗಳೂರಿಗೆ ಬಂದಿದ್ದರು.

ನೇತಾಜಿ ಸೈನೈದ ಪ್ರಥಮ ಮಹಿಳಾ ಗೂಢಚಾರಿಣಿಯ ಕಥೆ ಆಧಾರಿತ ಚಿತ್ರ ಆಜಾದ್ ಭಾರತ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ರೂಪಾ ಅಯ್ಯರ್ ಅವರ ಈ ಸಾಹಸಕ್ಕೆ ತಮ್ಮ ಸಹಕಾರ ಹಾಗೂ ಬೆಂಬಲ ನೀಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಇನ್ನೂಂದು ಮಗ್ಗುಲಿನ ಹೋರಾಟವನ್ನು ಪ್ರಸಕ್ತ ಯುವ ಜನಾಂಗಕ್ಕೆ ತೋರಿಸುವ ಪ್ರಯತ್ನ ಮಾಡಿರುವ ರೂಪಾ ಅಯ್ಯರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಭಾರತೀಯರೆಲ್ಲರೂ ನೋಡಲೇಬೇಕಾದ ಈ ಸಿನಿಮಾ ಹಿಂದಿ ಭಾಷೆಯಲ್ಲಿ ಇದ್ದರೆ ಉತ್ತಮ ಎಂಬ ಉದ್ದೇಶದಿಂದ ಬರೀ ಹಿಂದಿಯಲ್ಲಿ ಮಾತ್ರ ನಿರ್ಮಾಣ ಮಾಡಲಾಗಿದೆ.

ಕೊವಿಡ್ ಕಾರಣಕ್ಕೆ ಹಾಗೂ ಬೇರೆ ಬೇರೆ ಅಡಚಣೆಗಳು ಬಂದರೂ ಅದನ್ನು ಸಮರ್ಥವಾಗಿ ಎದುರಿಸಿ ಮೂರು ವರ್ಷಗಳ ಸತತ ಪರಿಶ್ರಮದಿಂದ ರೂಪಾ ಅಯ್ಯರ್ ಅವರ ಮಹತ್ವಾಕಾಂಕ್ಷೆಯ ಆಜಾದ್ ಭಾರತ್ ಜನೆವರಿ ಎರಡನೇ ತಾರೀಖು ದೇಶದಾದ್ಯಂತ ಪ್ರೇಕ್ಷಕರ ಮುಂದೆ ಬರುತ್ತಿದೆ.

ಲೇಖನ: ಹನುಮೇಶ್ ಕೆ ಯಾವಗಲ್, ಹಿರಿಯ ಪತ್ರಕರ್ತರು

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

Tags: 'ಆಜಾದ್ ಭಾರತ್ 'Amrutha FadnavisAzad BharathGandhijiIndian national armyKannada NewsKannada News LiveKannada News OnlineKannada News WebsiteKannada WebsiteLatest News KannadaMaharashtra CM Devendra FadnavisNethaji SubhashchandraboseNews in KannadaNews KannadaRoopa IyerSpecial Articleಇಂಡಿಯನ್ ನ್ಯಾಷನಲ್ ಆರ್ಮಿಗಾಂಧಿಜೀನೇತಾಜಿ ಸುಭಾಷ್ ಚಂದ್ರ ಬೋಸ್ವಿಶೇಷ ಲೇಖನ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಶಿವಮೊಗ್ಗ – ಬೆಂಗಳೂರು ಜನಶತಾಬ್ದಿ, ಶಿವಮೊಗ್ಗ – ಚಿಕ್ಕಮಗಳೂರು, ತುಮಕೂರು ರೈಲುಗಳ ಮೇಜರ್ ಅಪ್ಡೇಟ್

Next Post

ಕೃಷಿ ವಿವಿ ವಿದ್ಯಾರ್ಥಿಗಳಿಂದ ಸಸಿ ನೆಟ್ಟು ಶಾಲಾ ಮಕ್ಕಳಲ್ಲಿ ಪರಿಸರದ ಜಾಗೃತಿ

kalpa News

kalpa News

Next Post
ಕೃಷಿ ವಿವಿ ವಿದ್ಯಾರ್ಥಿಗಳಿಂದ ಸಸಿ ನೆಟ್ಟು ಶಾಲಾ ಮಕ್ಕಳಲ್ಲಿ ಪರಿಸರದ ಜಾಗೃತಿ

ಕೃಷಿ ವಿವಿ ವಿದ್ಯಾರ್ಥಿಗಳಿಂದ ಸಸಿ ನೆಟ್ಟು ಶಾಲಾ ಮಕ್ಕಳಲ್ಲಿ ಪರಿಸರದ ಜಾಗೃತಿ

Leave a Reply Cancel reply

Your email address will not be published. Required fields are marked *

No Result
View All Result
Hyderabad Pink Power Run 35K Breast Cancer Awareness copy
English Articles

Hyderabad Runs Pink : 35,000 Unite For Breast Cancer Awareness

by kalpa News
September 27, 2026
0

Kalpa Media House  |  Hyderabad  | 35,000 Unite in Hyderabad for Pink Power Run 3.0 MEIL and Sudha Reddy Foundation jointly...

Read moreDetails
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL