ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀ ಜ್ಞಾನೇಶ್ವರಿ ಗೋಶಾಲೆ 10 ವರ್ಷದಿಂದ ಪವಿತ್ರ ಗೋಸೇವೆ ಮಾಡುತ್ತಿದ್ದು, ಅನಾಥ ಗೋವುಗಳು, ನೋಂದ ಗೋವುಗಳಿಗೆ ಆಶ್ರಯತಾಣವಾಗಿದೆ ಎಂದು ಶ್ರೀ ಕ್ಷೇತ್ರ ಕರ್ಕಿಯ ಶ್ರೀ ಸಚ್ಚಿದಾನಂದ ಜ್ಞಾನೇಶ್ವರಿ ಭಾರತೀ ಮಹಾಸ್ವಾಮಿಗಳು ಹೇಳಿದರು.
ಹುಣಸೋಡಿನಲ್ಲಿರುವ ಶ್ರೀ ಜ್ಞಾನೇಶ್ವರಿ ಗೋಶಾಲೆಗೆ ಕಿರಿಯ ಶ್ರೀ ಸುಜ್ಞಾನೇಶ್ವರ ಭಾರತೀ ಮಹಾಸ್ವಾಮಿ ಅವರೊಂದಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿ, ಗೋಶಾಲೆಯು ಸ್ವಚ್ಛ ಮತ್ತು ಸುಂದರವಾಗಿದೆ. ಗೋವುಗಳು ಸುಖಿ ಮತ್ತು ನೆಮ್ಮದಿಯಾಗಿದ್ದರೆ ಇಡೀ ಸಮಾಜ ಸುಭೀಕ್ಷವಾಗುತ್ತದೆ. ಹಿಂದು ಸನಾತನ ಧರ್ಮದಲ್ಲಿ ಗೋವುಗಳಿಗೆ ಪವಿತ್ರ ಸ್ಥಾನವಿದೆ ಎಂದು ತಿಳಿಸಿದರು.
ದೈವಜ್ಞ ಬ್ರಾಹ್ಮಣ ಸಮಾಜದ ಏಕೈಕ ಗೋಶಾಲೆ ಶ್ರೀ ಜ್ಞಾನೇಶ್ವರಿ ಗೋಶಾಲೆ ಕಾರ್ಯ ಶ್ಲಾಘನೀಯ. ಗೋರಕ್ಷಣೆಯಲ್ಲಿ ಇಡೀ ಸಮುದಾಯ ಭಾಗಿಯಾಗಬೇಕು ಎಂದರು.
ಶ್ರೀ ಸುಜ್ಞಾನೇಶ್ವರಿ ಭಾರತೀ ಮಹಾಸ್ವಾಮಿಗಳು ಒಂದು ಗೋವು ದತ್ತು ಪಡೆದು 15 ಸಾವಿರ ರೂ. ದೇಣಿಗೆ ನೀಡಿದರು. ಶ್ರೀದ್ವಯರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.
ಗೋಶಾಲೆ ಅಧ್ಯಕ್ಷ ಚಂದ್ರಹಾಸ ಪಿ.ರಾಯ್ಕರ್ ಶ್ರೀಗಳಿಗೆ ದಿನನಿತ್ಯದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ವಿಜಯ ರಾಯ್ಕರ್, ಗುರುರಾಜ್ ಶೇಟ್, ಜನಾರ್ಧನ್ ಎಂ.ಶೇಟ್, ಗಣೇಶ್, ಕೃಷ್ಣಮೂರ್ತಿ, ಶ್ರೀಪಾದ ರೇವಣಕರ್, ದೇವಿದಾಸ್ ಶೇಟ್, ಎಸ್.ಪಾಂಡುರಂಗ ಶೇಟ್, ರಾಧಾಕೃಷ್ಣ ರಾಯ್ಕರ್, ಶೇಷಾದ್ರಿ ಇತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 
















