ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿರಂತರ ಉರಿಯುವ ಸೂರ್ಯನನ್ನು ನೋಡಿ ಕತ್ತಲು ಭಯಪಡುವ ಹಾಗೆ ನಿರಂತರ ಕಷ್ಟ ಪಡುವ ವ್ಯಕ್ತಿಯನ್ನು ನೋಡಿ ಸೋಲು ಭಯಪಡುವಂತೆ ನಿಮ್ಮೆಲ್ಲರ ಜೀವನ ಸಾಗಲಿ ಎಂದು ಇಂಗ್ಲೀಷ್ ವಿಭಾಗದ ಮುಖ್ಯಸ್ಥರು ಸುಧಾರಾಣಿ ಮಕ್ಕಳಿಗೆ ಸಂದೇಶ ನೀಡಿದರು.
ನನಗೆ ಬೇಕಾದುದು ಕಬ್ಬಿಣದ ಸ್ನಾಯುಗಳು, ಉಕ್ಕಿನ ನರಗಳು ಮತ್ತು ಸಿಡಿಲಿನಂತಹ ಮನಸ್ಸುಗಳು ಅಂತಹ ತರುಣರಿಂದ ದೇಶದ ಭವಿಷ್ಯವನ್ನೇ ಬದಲಿಸಬಹುದು ಎಂಬ ಸಂದೇಶ ಸಾರಿದ ಸ್ವಾಮಿ ವಿವೇಕಾನಂದರ #Swamy Vivekananda 163ನೇ ರಾಷ್ಟ್ರೀಯ ಯುವ ದಿನಾಚರಣೆ #National Youth Day ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಾಲೆಯ ಪ್ರಾಂಶುಪಾಲರು, ಶಾಲಾ ಸಂಯೋಜಕರು ಹಾಗೂ ಶಾಲಾ ಶಿಕ್ಷಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಶಾಲಾ ಮಕ್ಕಳಿಂದ ಹಾಡು, ಕಿರು ಪ್ರಹಸನಗಳನ್ನು ಮತ್ತು ರಸಪ್ರಶ್ನೆಗಳ ಮೂಲಕ ಮಕ್ಕಳಲ್ಲಿ ಉದಾತ್ತ ಚಿಂತನೆಗಳನ್ನು ಬೆಳೆಸಿಕೊಳ್ಳಲು ಈ ಕಾರ್ಯಕ್ರಮವು ಸಹಾಯಕವಾಯಿತು.
ಧರ್ಮ ಪ್ರಭು ಮಕ್ಕಳಿಗೆ ವಿವೇಕಾನಂದರ ಸಿದ್ದಾಂತಗಳ ಪ್ರಮಾಣ ವಚನವನ್ನು ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















