ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿಡ್ಲಘಟ್ಟ ನಗರಸಭೆ ಆಯುಕ್ತರಾದ ಅಮೃತಗೌಡ #Shidlaghatta Municipal Commissioner Amrutha Gowda ಅವರನ್ನು ಕಾಂಗ್ರೆಸ್ ಮುಖಂಡ ರಾಜೀವ ಗೌಡ #Congress Leader Rajeev Gowda ಎಂಬ ವ್ಯಕ್ತಿಯು ಬೆದರಿಕೆ ಹಾಕಿ ಸರ್ಕಾರಿ ಕೆಲಸಕ್ಕೆ ಅಡಚಣೆ ಮಾಡಿರುವುದರಿಂದ ಕೂಡಲೇ ಸದರಿ ವ್ಯಕ್ತಿಯನ್ನು ಬಂಧಿಸುವಂತೆ ಆಗ್ರಹಿಸಿ ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಸಂಘ ಇಂದು ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ #CM Siddaramaiah ಮನವಿ ಸಲ್ಲಿಸಿತು.
ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಅಳವಡಿಸಿದ್ದ ಫ್ಲೆಕ್ಸನ್ನು ಸಾರ್ವಜನಿಕರ ದೂರಿನ ಮೇರೆಗೆ ತೆರವುಗೊಳಿಸಿರುವ ಆಯುಕ್ತರಿಗೆ ಫೋನ್ ಕರೆ ಮಾಡಿ ಅವಾಚ್ಯ ನಿಂದನೆ ಮಾಡಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ರಾಜೀವ್ ಗೌಡ ವಿರುದ್ಧ ಮಹಿಳೆಯ ಘನತೆಗೆ ಧಕ್ಕೆ ತರುವಂತಹ ಘಟನೆ, ಸರ್ಕಾರ ಕೆಲಸಕ್ಕೆ ಅಡ್ಡಿ, ಶಾಂತಿ ಭಂಗಕ್ಕೆ ಪ್ರಚೋದನೆ ಮತ್ತು ಬೆದರಿಕೆ, ಸಾರ್ವಜನಿಕರ ನೆಮ್ಮದಿಗೆ ಭಂಗ, ಗಲಭೆಗೆ ಕುಮ್ಮಕ್ಕು ನೀಡುವುದು ಇದರಡಿಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ನಾಗರೀಕ ಸಮಾಜ ತಲೆತಗ್ಗಿಸುವಂತಹ ಘಟನೆ ಇದಾಗಿದ್ದು, ಸರ್ಕಾರಿ ಅಧಿಕಾರಿಗಳಿಗೆ ಇಂತಹ ಸ್ಥಿತಿ ಬಂದರೆ ಅವರ ಪರಿಸ್ಥಿತಿ ಏನು ಎಂದು ಚಿಂತಿಸುವಂತ್ತಾಗಿದ್ದು, ಸಮಾಜಕ್ಕೆ ಕೆಟ್ಟ ಸಂದೇಶ ಹೋಗುತ್ತಿದೆ. ಮಹಿಳೆಯರು ಪ್ರಾಮಾಣಿಕವಾಗಿ ಮತ್ತು ನಿರ್ಭೀತಿಯಿಂದ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ.
ಆದ್ದರಿಂದ ಕೂಡಲೇ ರಾಜೀವ್‍ಗೌಡನನ್ನು ಬಂಧಿಸಬೇಕು. ಇಂತಹ ಘಟನೆಗಳು ನಡೆಯಬಾರದು. ನಿರಂತರವಾಗಿ ಪೌರಕಾರ್ಮಿಕರಿಂದ ಹಿಡಿದು, ಆಯುಕ್ತರವರೆಗೆ ನಿಂಧನೆ ಮತ್ತು ಬೆದರಿಕೆ ಬರುತ್ತಿದ್ದು, ಕೆಲಸಮಾಡುವ ನೌಕರರಿಗೆ ಅವಮಾನ ಮಾಡಲಾಗುತ್ತಿದೆ. ಆದ್ದರಿಂದ ರಾಜೀವ್‍ಗೌಡನನ್ನು ಕೂಡಲೇ ಬಂಧಿಸಬೇಕು. ಪೌರಾಯುಕ್ತರ ಸೇವಾ ಅವಧಿಯ ಉದ್ದಕ್ಕೂ ಸೂಕ್ತವಾದ ಭದ್ರತೆ ನೀಡಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಎನ್. ಗೋವಿಂದ, ಪ್ರಧಾನ ಕಾರ್ಯದರ್ಶಿ ಮೋಹನ್‍ಕುಮಾರ್, ಪದಾಧಿಕಾರಿಗಳಾದ ಪೂಜಾರ್, ವಸಂತ್‍ಕುಮಾರ್, ಮಂಜುನಾಥ್, ಬಾಲಯ್ಯ, ಲೋಹಿತ್‍ಯಾದವ್, ಮಧು, ಮಾರುತಿ, ಎಸ್.ಆರ್. ನಾಗೇಶ್, ಸುನೀಲ್‍ಕುಮಾರ್ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















