ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಮ್ಮೆಲ್ಲರ ಭವಿಷ್ಯ ಹೂವಿನಂತೆ ಅರಳಲಿ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ #B S Yadiyurappa ಹೇಳಿದರು.
ಅವರು ಇಂದು ನಗರದ ನಗರದ ಅಲ್ಲಮಪ್ರಭು ಪ್ರೀಡಂ ಪಾರ್ಕಿನಲ್ಲಿ ಜಿಲ್ಲಾಡಳಿತ ,ಜಿಲ್ಲಾ ಪಂಚಾಯತ್, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ ,ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 4 ದಿನಗಳ ಕಾಲದ ಮಲೆನಾಡು ಕರ ಕುಶಲ ಉತ್ಸವ ಮತ್ತು ಸಿರಿಧಾನ್ಯ ಮೇಳ ಹಾಗೂ ಪುಷ್ಪ ಸಿರಿ ,63ನೇ ಫಲ ಪುಷ್ಪ ಪ್ರದರ್ಶನ ನಡೆಯಲಿದ್ದು ಅದನ್ನು ವೀಕ್ಷಣೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರೈತನ ಪರಿಶ್ರಮ, ವಿಜ್ಞಾನಿಗಳ ಮಾರ್ಗದರ್ಶನ, ಸ್ವಸಾಯ ಸಂಘಗಳ ಉತ್ಪನ್ನಗಳು, ಹೂವು ಹಣ್ಣು ಅಲಂಕಾರಿಕ ವಸ್ತುಗಳು ವಿವಿಧ ತಳಿಯ ಸಸ್ಯಗಳು ವಿವಿಧ ಬಗೆಯ ಹಣ್ಣುಗಳು ಎಲ್ಲವೂ ಕೂಡ ಹೊಸ ಲೋಕವನ್ನೇ ಸೃಷ್ಟಿಸಿವೆ ಇಲ್ಲಿ ಅರಳಿದ ಹೂವು ನೋಡಿದಾಗ ನಮ್ಮ ಮನಸ್ಸಿನಲ್ಲಿ ಕೂಡ ಕನಸುಗಳು ಅರಳುತ್ತವೆ. ಒಂದೊಂದು ಸಸಿ ನೆಟ್ಟರೆ ಒಂದೊಂದು ಜೀವನ ಅರಳಿದಂತೆ ಹಣ್ಣುಗಳ ಸಿಹಿಯಂತೆ ನಮ್ಮ ಜೀವನವು ಕೂಡ ಸಿಹಿಯಾಗಲಿ. ಭವಿಷ್ಯ ಹೂವಿನಂತೆ ಅರಳಲಿ ಶಿವಮೊಗ್ಗ ಹಸಿರಾಗಲಿ ಎಲ್ಲರೂ ಬಂದು ಈ ಪ್ರದರ್ಶನವನ್ನು ವೀಕ್ಷಿಸಿ ಎಂದು ಕರೆ ನೀಡಿದರು.
ಮನಸೂರೆಗೊಂಡ ಹೂ ಹಣ್ಣು ವಸ್ತುಗಳು
ಇಂದಿನ ಮೇಳದಲ್ಲಿ ದೇಶದ ಎಲ್ಲ ರಾಜ್ಯದ ವೈವಿಧ್ಯಮಯ ಸೀರೆಗಳು_ ಮಣ್ಣಿನ ಆಭರಣಗಳು, ಹಸೆ ಚಿತ್ತಾರ, ಮತ್ತು ತಳಿರು ತೋರಣಗಳು ಬಿದಿರಿನ ಉತ್ಪನ್ನಗಳು ಗಜೇಂದ್ರಗ ಡದ ಪಟ್ಟದ ಅಂಚಿನ ಸೀರೆ, ಮೊಳಕಾಲ್ಮೂರು, ಇಳುಕಲ್, ಮೈಸೂರ್ ರೇಷ್ಮೆ ಸೀರೆಗಳು, ಸೇಲಂ ರೇಷ್ಮೆ ಸೀರೆಗಳು, ಬನಾರಸ್ ಮತ್ತು ಜಮದಾನಿ ಸೀರೆಗಳು ಕುಕ್ಕೀಸ್ ಮತ್ತು ಸಿರಿಧಾನ್ಯ ಉತ್ಪನ್ನಗಳು, ಪ್ರಸಿದ್ಧ ಶ್ರೀ ಕೇದಾರನಾಥ ದೇವಾಲಯ, ಬಳ್ಳಿಗಾವೆ ದೇವಾಲಯ,ಹೂವಿನಲ್ಲೇ ಅರಳಿದ ಜೋಗ ಜಲಪಾತ, ಮತ್ತು ಶಿವಪ್ಪ ನಾಯಕ ಕೋಟೆ, ಪ್ರತಿ ಕೃತಿಗಳು, ಚರಕದ ಉತ್ಪನ್ನಗಳು ವಿವಿಧ ಬಗೆಯ ತೋಟಗಾರಿಕಾ ಬೆಳೆಗಳು ಹೂ ಹಣ್ಣುಗಳು, ತಿನಿಸು ಮಳಿಗೆಗಳು ಪ್ರದರ್ಶನದಲ್ಲಿ ಇದ್ದು ಜನಸಾಗರ ಹರಿದು ಬರುತ್ತಿದೆ. ಅಧಿಕೃತವಾಗಿ ಸಚಿವ ಮಧು ಬಂಗಾರಪ್ಪನವರು ನಾಳೆ ಉದ್ಘಾಟಿಸಲಿದ್ದಾರೆ.
ಈ ಸಂದರ್ಭದಲ್ಲಿ ಸಿಇಒ ಹೇಮಂತ್ ಎನ್ ನಿರ್ದೇಶಕ ನಂದಿನಿ ಜಿಲ್ಲಾ ಉದ್ಯಾನ ಸಂಘದ ಉಪಾಧ್ಯಕ್ಷ ಸಿದ್ದಪ್ಪ ಹರಳೆಣ್ಣೆನವರ್ ಮಲ್ಲಿಕಾರ್ಜುನ್, ಚಂದ್ರಕಾಂತ್ ಹೊಸಗೋಡ, ಹಾಪ್ ಕಾಮ್ಸ್ ಅಧ್ಯಕ್ಷ ವಿಜಯಕುಮಾರ್, ಹಿರಿಯ ಸಹಕಾರಿ ಬಿ ಡಿ ಭೂಕಾಂತ’ ತೇಜಸ್ವಿನಿ ರಾಘವೇಂದ್ರ, ವೈ ಹೆಚ್ ನಾಗರಾಜ್, ಸೇರಿದಂತೆ ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖ್ಯಸ್ಥ ರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















