ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರ ಸಂಚಾರ ವ್ಯವಸ್ಥೆಯಲ್ಲಿ #Traffic system ಬಹಳಷ್ಟು ಸುಧಾರಣೆ ಮಾಡಿರುವ ಟ್ರಾಫಿಕ್ ಇಲಾಖೆ ಇದೀಗ ಹೊಸದಾಗಿ ನಿರ್ಮಾಣವಾಗುತ್ತಿರುವ ಉಷಾ ನರ್ಸಿಂಗ್ ಹೋಂ ವೃತ್ತದಲ್ಲಿ (ಅಕ್ಕಮಹಾದೇವಿ ವೃತ್ತ) ವೈಜ್ಞಾನಿಕ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಕಾರ್ಯೋನ್ಮುಖವಾಗಿದೆ.
ವೃತ್ತದ ಕಾಮಗಾರಿ ನಡೆಯುವ ಹಂತದಲ್ಲೇ ಸಿಗ್ನಲ್ ಕಂಬಗಳು ಯಾವ ಸ್ಥಳಗಳಲ್ಲಿ ಇರಬೇಕು, ತಡೆರಹಿತ ಎಡ ತಿರುವು ಮುಂತಾದ ಜಾಗಗಳನ್ನು ಗುರುತು ಮಾಡುವ ಕಾರ್ಯವನ್ನು ಇಂದು ಶಿವಮೊಗ್ಗ ಟ್ರಾಫಿಕ್ ಸರ್ಕಲ್ ಇನ್‌ಸ್ಪೆಕ್ಟರ್ ದೇವರಾಜ್‌ರವರ ಮಾರ್ಗದರ್ಶನದಲ್ಲಿ ಮಾಡಲಾಯಿತು.
ಈ ಹಿಂದೆ ಸ್ಮಾರ್ಟ್ ಸಿಟಿ ಕಾಮಗಾರಿ ವೇಳೆ ನಿರ್ಮಿಸಿದ್ದ ಸರ್ಕಲ್ ಗಳಲ್ಲಿ ಸುಗಮ ಸಂಚಾರಕ್ಕೆ ಅನೇಕ ನ್ಯೂನತೆಗಳಿದ್ದು ಅವುಗಳ ನಿರ್ಮಾಣ ವೇಳೆ ಅಧಿಕಾರಿಗಳು ಈ ರೀತಿಯ ಕಾಳಜಿ ವಹಿಸಿದ್ದರೆ ಶಿವಮೊಗ್ಗ ನಗರ ನಿಜಕ್ಕೂ ಸ್ಮಾರ್ಟ್ ಸಿಟಿ ಎನಿಸುತ್ತಿತ್ತು ಎಂದು ಸಾರ್ವಜನಿಕರು ಪ್ರತಿಕ್ರಿಯಿಸಿದ್ದು ಟ್ರಾಫಿಕ್ ಇನ್‌ಸ್ಪೆಕ್ಟರ್‌ರವರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















