ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಕಾಶಿಪುರ ಮೇಲ್ಸೆತುವೆಯ ಮೈತ್ರಿ ಅಪಾರ್ಟ್‌ಮೆಂಟ್ ಬಳಿ ಇಂದು ಬೆಳಗ್ಗೆ ಅಪಘಾತವಾಗಿದ್ದು, ಬೈಕ್ ಸವಾರರಿಬ್ಬರು ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಸೋಮಿನಕೊಪ್ಪದಿಂದ ಬರುತ್ತಿದ್ದ ವಾಹನ ಸವಾರ ಮೈತ್ರಿ ಅಪಾರ್ಟ್‌ಮೆಂಟ್ ಬಳಿಯ ಕಾಶಿಪುರ ಮೇಲ್ಸೆತುವೆಯನ್ನು ಹತ್ತುವಾಗ ಪೊಲೀಸ್ ಚೌಕಿಯಿಂದ ಬರುತ್ತಿದ್ದ ವಾಹನ ಮೇಲ್ಸೆತುವೆಯನ್ನು ಇಳಿಯುವಾಗ ರಾಂಗ್ ರೂಟ್‌ನಲ್ಲಿ ಬಂದ ಪರಿಣಾಮ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ.
ವಾಹನ ಚಾಲನೆ ಮಾಡುತ್ತಿದ್ದ ಸವಾರನಿಗೆ ಹಾಗೂ ಹಿಂಬದಿಯಲ್ಲಿ ಕುಳಿತ್ತಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಹಂಪ್ಸ್ ಹಾಕಲು ಮನವಿ:
ಈ ಕಾಶಿಪುರ ಮೇಲ್ಸೆತುವೆಯ ಬಳಿ ತಿಂಗಳಿಗೊಮ್ಮೆ ಇಂತಹ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಈ ಭಾಗದಲ್ಲಿ ಸಂಚರಿಸುವ ವಾಹನಗಳು ಅತಿ ವೇಗವಾಗಿ ಚಾಲನೆ ಮಾಡುವುದರಿಂದ ಅಪಘಾತಗಳು ಸಂಭವಿಸುತ್ತವೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ವಾಹನಗಳ ಅತಿವೇಗದ ಚಾಲನೆಗೆ ಕಡಿವಾಣ ಹಾಕಲು ಕಾಶಿಪುರ ಮೇಲ್ಸೇತುವೆಯ ಬಳಿ ಹಂಪ್ಸ್ ಹಾಕುಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಲು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















