ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅತ್ಯಂತ ಶಿಸ್ತುಬದ್ಧವಾದ ಕ್ರೀಡಾ ಪ್ರಕಾರ ದೇಹದಾಢ್ರ್ಯ ಸ್ಪರ್ಧೆ #Bodybuilding competition ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಕಡೆಗೆ ಗಮನಕೊಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಮೋಹನಕುಮಾರ್ ಹೇಳಿದರು.
ಅವರು ಇಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಕುವೆಂಪು ವಿಶ್ವವಿದ್ಯಾಲಯದ ಕ್ರೀಡಾ ವಿಭಾಗ ಜಂಟಿಯಾಗಿ ಹಮ್ಮಿಕೊಂಡ ಕುವೆಂಪು ವಿಶ್ವವಿದ್ಯಾಲಯ ಅಂತರ ಕಾಲೇಜು ದೇಹದಾಢ್ರ್ಯ ಪಂದ್ಯಾವಳಿ 2025-26 ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವಜನತೆ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ನೈತಿಕತೆ ಮತ್ತು ಪ್ರಾಮಾಣಿಕತೆ ಮೂಲಕ ಸಮಸಮಾಜಕ್ಕೆ ಪ್ರೇರಕರಾಗಬೇಕೆಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಕೋಟೆ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಂತೋಷ ಬಾಘೋಜಿ ಮಾತನಾಡಿ ದೇಹದಾಢ್ರ್ಯ ಅನ್ನುವುದು ಕೇವಲ ದೇಹದ ಬೆಳವಣಿಗೆ ಮಾತ್ರವಲ್ಲ. ಅದು ಮಾನಸಿಕ ಬೆಳವಣಿಗೆಯು ಹೌದು. ನಾವು ತಿನ್ನುವ ಆಹಾರ ಹೇಗಿರಬೇಕು, ಹೇಗಿರಬಾರದು ಅನ್ನುವುದು ಗೊತ್ತಿರಬೇಕು.
ಈ ಸ್ಪರ್ಧೆಯ ಮೂಲಕ ಸಮಾಜದ ಆರೋಗ್ಯಕ್ಕೆ ಪೂರಕವಾಗಿ ಕೆಲಸ ಮಾಡಬೇಕು. ಇದರ ಜೊತೆಗೆ ಇಂದಿನ ಯುವಜನತೆ ಪ್ರಾಮಾಣಿಕತೆ ಬೆಳೆಸಿಕೊಂಡು ಸಮಾಜದ ಮಾರಕ ವಿಚಾರಗಳ ವಿರುದ್ಧವಾಗಿ ಹೋರಾಡಬೇಕು ಎಂದರು. ಶಿವಮೊಗ್ಗ ಜಿಲ್ಲಾ ಬಾಡಿ ಬಿಲ್ಡರ್ ಅಸೋಸಿಯೇಷನ್ ಅಧ್ಯಕ್ಷರಾದ ರಘುನಾಥ್ ಮಾತನಾಡಿ, ಇವತ್ತಿನ ಒತ್ತಡದ ಬದುಕಿನಲ್ಲಿ ದೇಹದ ಆರೋಗ್ಯಕ್ಕೆ ಪ್ರತಿದಿನ ಒಂದು ಗಂಟೆ ಅವಕಾಶ ನೀಡಬೇಕು. ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಆ ಮೂಲಕ ವಿಶ್ವವಿದ್ಯಾಲಯಕ್ಕೆ ಕೀರ್ತಿಯನ್ನು ತರುವುದರ ಜೊತೆಗೆ ಉದ್ಯೋಗ ಅವಕಾಶಗಳನ್ನು ದಕ್ಕಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.. ಶಶಿಧರ ಎಸ್. ಮಾತನಾಡಿ ನಮ್ಮ ಕಾಲೇಜಿನಲ್ಲಿ ಇಂತಹ ಸ್ಪರ್ಧೆ ನಡೆಯುತ್ತಿರುವುದು ಸಂತಸ ಸಂಗತಿ. ಈ ಸ್ಪರ್ಧೆ ನಿರಂತರ ಪರಿಶ್ರಮದಿಂದ ಕೂಡಿರುತ್ತದೆ. ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಮುಂದಿನ ಜೀವನ ಯಶಸ್ಸು ಪಡೆಯಲಿ ಎಂದರು.
ವೇದಿಕೆಯಲ್ಲಿ ಐಕ್ಯೂಎಸಿ ಸಂಚಾಲಕ ಡಾ.ವಿದ್ಯಾಮರಿಯ ಜೋಸೆಫ್, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಪಾಪಣ್ಣ ಉಪಸ್ಥಿತಿ ಇದ್ದರು. ಕ್ರೀಡಾ ಸ್ಪರ್ಧೆಯ ಸಂಘಟನಾ ಕಾರ್ಯದರ್ಶಿ ಜಯಕೀರ್ತಿ ಹೆಚ್.ಟಿ. ಸ್ವಾಗತಿಸಿದರು. ಡಾ.ಮಂಜುನಾಥ ಎಂ.ಎಂ ಪ್ರಾರ್ಥಿಸಿ, ಡಾ.ಮೋಹನ್ ಎಸ್.ಕೆ. ನಿರೂಪಿಸಿ, ಡಾ.ಪ್ರಸನ್ನ ಎಸ್.ಹೆಚ್. ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















