ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದ ನಾರಾಯಣ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್ ವತಿಯಿಂದ ಫೆ.7ರಂದು ಉಚಿತ ಮೂಳೆ ಸಾಂದ್ರತಾ ಪರೀಕ್ಷೆ #BMDTest ಮತ್ತು ವೈದ್ಯಕೀಯ ಸಮಾಲೋಚನಾ ಶಿಬಿರವನ್ನು ಆಯೋಜಿಸಲಾಗಿದೆ.
ಸಾರ್ವಜನಿಕರಲ್ಲಿ ಮೂಳೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆರಂಭಿಕ ಹಂತದಲ್ಲಿ ಮೂಳೆ ಸಂಬಂಧಿತ ಸಮಸ್ಯೆಗಳನ್ನು ಪತ್ತೆಹಚ್ಚುವ ಉದ್ದೇಶದಿಂದ ಈ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ.
ಉಚಿತ ಶಿಬಿರವು ಫೆಬ್ರವರಿ 07 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಕುವೆಂಪು ರಸ್ತೆಯ ನಂಬಿಯಾರ್ ಅಟ್ರಿಯಂ ನಲ್ಲಿರುವ ನಾರಾಯಣ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್’ನಲ್ಲಿ ನಡೆಯಲಿದೆ.
ಶಿಬಿರದ ವೈಶಿಷ್ಟ್ಯಗಳು
ಈ ಶಿಬಿರದಲ್ಲಿ ನುರಿತ ಕೀಲು ಮೂಳೆ ಮತ್ತು ಕೀಲು ಮರುಜೋಡಣೆ ತಜ್ಞ ವೈದ್ಯರಾದ ಡಾ. ಎಂ.ಆರ್. ನಾಗೇಂದ್ರ ಪ್ರಸಾದ್ ಅವರು ಸಾರ್ವಜನಿಕರಿಗೆ ಉಚಿತವಾಗಿ ಲಭ್ಯವಿರಲಿದ್ದಾರೆ. ಶಿಬಿರಕ್ಕೆ ಬರುವ ಸಾರ್ವಜನಿಕರಿಗೆ ವೈದ್ಯರೊಂದಿಗೆ ಸಮಾಲೋಚನೆ ನಡೆಸಲು ಯಾವುದೇ ಶುಲ್ಕವಿರುವುದಿಲ್ಲ.
ನಿಮ್ಮಲ್ಲಿ ಈ ಆರೋಗ್ಯ ಲಕ್ಷಣವಿದೆಯೇ? ಹಾಗಾದರೆ ಈ ಶಿಬಿರದ ಪ್ರಯೋಜನ ಪಡೆಯಿರಿ
- ದೀರ್ಘಕಾಲದ ಮಂಡಿ ಮತ್ತು ಸೊಂಟ ನೋವಿನಿಂದ ಬಳಲುತ್ತಿರುವವರು.
- ಮೆಟ್ಟಿಲು ಹತ್ತಲು ಅಥವಾ ಇಳಿಯಲು ಕಷ್ಟವಾಗುತ್ತಿರುವವರು. ಮೂಳೆಗಳ ಕಾರ್ಯಕ್ಷಮತೆ ಕ್ಷೀಣಿಸುತ್ತಿರುವವರು.
- ಋತುಚಕ್ರ ನಿಂತ ಮಹಿಳೆಯರಲ್ಲಿ ಮೂಳೆ ಸವಕಳಿ ಕಂಡುಬಂದಲ್ಲಿ.
- ವಯಸ್ಸಾದಂತೆ ಮೂಳೆ ಸವಕಳಿ ಎದುರಿಸುತ್ತಿರುವ ಪುರುಷರು ಮತ್ತು ಮಹಿಳೆಯರು.
ಮೊಣಕಾಲು ನೋವಿನಿಂದ ಸಂಪೂರ್ಣ ಸ್ವಾತಂತ್ರ ಪಡೆಯಲು ಮತ್ತು ನಿಮ್ಮ ಮೂಳೆಗಳ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಆಸ್ಪತ್ರೆ ಪ್ರಕಟಣೆಯಲ್ಲಿ ವಿನಂತಿಸಿದೆ.
ಹೆಚ್ಚಿನ ಮಾಹಿತಿಗಾಗಿ ಅಥವಾ ನೋಂದಣಿಗಾಗಿ 98864 13131 ಸಂಖ್ಯೆಯನ್ನು ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















