ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಮ್ಮೂರ ಬಳಗ ಶಿವಮೊಗ್ಗದ ವತಿಯಿಂದ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರೆ #Shri Marikamba Fair ಅಂಗವಾಗಿ ಫೆಬ್ರವರಿ 15ರಂದು ಅಲ್ಲಮಪ್ರಭು ಮೈದಾನ ಫ್ರೀಡಂ ಪಾರ್ಕ್‍ನಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ಟಗರು ಕಾಳಗದ #National Level Tagaru Kalaga ಅಂಕಣ ಪೂಜೆಯನ್ನು ಹಾರನಹಳ್ಳಿಯ ಚೌಕಿಮಠದ ಶ್ರೀ ನೀಲಕಂಠ ಸ್ವಾಮೀಜಿಯವರು ನೆರವೇರಿಸಿ ಪ್ರಚಾರದ ವಾಹನಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಸ್ವಾಮೀಜಿಗಳು, ಇಂತಹ ಕ್ರೀಡಾ ಉತ್ಸವಗಳಿಂದ ಸಂಘಟನೆಗಳು ಶಕ್ತಿಯುತವಾಗಿ ಬೆಳೆಯುವುದರ ಜೊತೆಗೆ ಜಾತ್ರೆ ಉತ್ಸವಗಳ ಸಂದರ್ಭದಲ್ಲಿ ಟಗರು ಕಾಳಗ ಕುಸ್ತಿ ಹಾಗು ಗ್ರಾಮೀಣ ಕ್ರೀಡೆಗಳನ್ನು ನಡೆಸುವುದರಿಂದ ಊರ ಹಬ್ಬಗಳಿಗೆ ಮೆರಗು ಬರಲಿದೆ ಎಂದರು, ನಮ್ಮೂರ ಬಳಗದಿಂದ ನಡೆಯುತ್ತಿರುವ ರಾಷ್ಟ್ರಮಟ್ಟದ ಟಗರು ಕಾಳಗವು ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಮ್ಮೂರ ಬಳಗದ ಪ್ರಧಾನ ಸಂಚಾಲಕ ಕೆ.ರಂಗನಾಥ್, ಗೌರವ ಸಂಚಾಲಕರಾದ ಹೆಚ್. ಪಾಲಾಕ್ಷಿ, ಐಡಿಯಲ್ ಗೋಪಿ ಹೆಚ್.ಸಿ. ಮಾಲ್ತೇಶ್, ಹಾಪ್ ಕಾಮ್ಸ್ ನಿರ್ದೇಶಕ ಶರತ್ ಮರಿಯಪ್ಪ, ಸೂಡ ಸದಸ್ಯರಾದ ಎಂ. ಪ್ರವೀಣ್ ,ಕುಮಾರ್ ಯುವ ಮುಖಂಡರಾದ ಬಳ್ಳಕೆರೆ ಸಂತೋಷ್,ಸಂಚಾಲಕರುಗಳಾದ ಕೆ.ಆರ್. ಸುರೇಶ್, ಹೆಚ್.ಪಿ. ಗಿರೀಶ್, ಬಿ. ಲೋಕೇಶ್, ವಿನಯ್, ವಿಜಯ್, ಗುರುಪ್ರಸಾದ್, ಚಂದ್ರುಗೆಡ್ಡೆ, ಆರ್. ಕಿರಣ್, ರಾಜೇಶ್ ಮಂದಾರ, ಎಮ್ ರಾಕೇಶ್, ಕೆ.ಎಲ್. ಪವನ್, ರವಿ ಶಾಸ್ತ್ರಿ, ಕೇಬಲ್ ಲೋಕೇಶ್, ಎಂ. ವಿಜಯ್, ರಾಜೀವ್ ರಾಯ್ಕರ್, ರಜನಿಕಾಂತ್, ದೀಪು, ಜಿ.ಕಿರಣ್, ಕೇಶವ ಸಿಗೆಹಟ್ಟಿ, ಪ್ರವೀಣ್ ಕಾಶಿಪುರ, ರಾಹುಲ್, ಮಣಿ, ಸುನಿಲ್, ಕುಮಾರ್ ಶ್ರೀಕಾಂತ್ ಇತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















