ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗ್ರಾಮ ದೇವತೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಗೆ ಇಂದು ಸಾರು ಹಾಕಲಾಗಿದ್ದು, ಈ ಬಾರಿ ಹಲವು ವಿಶೇಷತೆಗಳನ್ನು ಒಳಗೊಂಡಿದೆ.
ಈ ಕುರಿತಂತೆ ಮಾತನಾಡಿದ ಸಮಿತಿಯವರು, ಈ ಬಾರಿ ಅಮ್ಮನವರಿಗೆ ಬಂಗಾರದ ಮುಖವಾಡವನ್ನು ತಯಾರಿಸಲಾಗಿದೆ. ಸುಮಾರು 1 ಕೆಜಿ 600 ಗ್ರಾಂ ತೂಕದ ಅಮ್ಮನವರ ಮುಖವಾಡವನ್ನು ಈ ಬಾರಿ ಅಮ್ಮನವರಿಗೆ ತೊಡಿಸಲಾಗುವುದು ಎಂದರು.
ಇದರ ಜೊತೆಗೆ ಸುಮಾರು 16 ಕೆಜಿ ಬೆಳ್ಳಿಯ ಬಾಗಿಲನ್ನು ಗರ್ಭಗುಡಿ ಬಾಗಿಲಿಗೆ ಜೋಡಿಸಲಾಗುವುದು. ಇದು ಅಮ್ಮನವರನ್ನು ಕಣ್ತುಂಬಿಕೊಳ್ಳಲು ಕಾರಣವಾಗುತ್ತದೆ ಎಂದರು.
ಅಷ್ಟೇ ಅಲ್ಲ, ಯಾವ ಭಕ್ತಾದಿಗಳಿಗೂ ಸರತಿಸಾಲಿನಲ್ಲಿ ನಿಲ್ಲುವಾಗ ಬಿಸಿಲಿನಿಂದ ಬಳಲುಬಾರದು ಎಂಬ ಕಾರಣಕ್ಕಾಗಿ ಶಿವಪ್ಪನಾಯಕ ಮಹದ್ವಾರದಿಂದ ಮತ್ತು ಕರ್ನಾಟಕ ಸಂಘದ ಬಳಿಯಿಂದ ಜರ್ಮನ್ ಟೆಂಟ್ ಹಾಕಲಾಗುವುದು. ಶಾಮಿಯಾನ ಕೂಡ ಹಾಕಲಾಗುತ್ತದೆ ಎಂದು ತಿಳಿಸಿದರು.
ಅಲ್ಲದೇ, ಗಾಂಧಿಬಜಾರಿನ ಮಹಾದ್ವಾರದಲ್ಲಿ ಸುಮಾರು 22 ಅಡಿ ಎತ್ತರದ ಕಾಳಿ ದೇವಿಯ ಮೂರ್ತಿಯನ್ನು ಅಲಂಕರಿಸಿ ನಿರ್ಮಿಸಲಾಗುವುದು. ಜೊತೆಗೆ ಇಡೀ ನಗರದ ಎಲ್ಲಾ ಬಡಾವಣೆಗಳಲ್ಲಿಯೂ ವಿದ್ಯುತ್ ಅಲಂಕಾರವನ್ನು ಮಾಡಲಾಗುವುದು.
ಅಲ್ಲದೆ ಸಂಸ್ಕಾರಕ್ಕೆ ತೊಂದರೆಯಾಗದಂತೆ ನಗರದಂತೆ ನಗರದೆಲ್ಲೆಡೆ ಸಂಘ-ಸಂಸ್ಥೆಗಳು, ಫ್ಲೆಕ್ಸಿಯನ್ನು ಹಾಕಬಹುದಾಗಿದ್ದು, ಮಹಾನಗರ ಪಾಲಿಕೆಯವರು ಯಾವ ಕಾರಣಕ್ಕೂ ಈ ಫ್ಲೆಕ್ಸಿಯನ್ನು ತೆಗೆಯಬಾರದು ಎಂದು ಈಗಾಗಲೇ ಮನವಿ ಮಾಡಿದ್ದೇವೆ. ಅವರು ಕೂಡ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಈ ಬಾರಿಯ ಜಾತ್ರೆಯ ಮುಖ್ಯಾಂಶಗಳು
- ಫೆ.24ರಿಂದ 28ರ ವರೆಗೆ ಐದು ದಿನಗಳ ಜಾತ್ರಾ ಮಹೋತ್ಸವ
- ಫೆ.24ರ ಮಂಗಳವಾರ ಬೆಳಿಗ್ಗೆ 5.30ರಿಂದ ಮಾರಿ ಗದ್ದುಗೆಯಲ್ಲಿ ಎಡೆಪೂಜೆ ಆರಂಭ
- ಬೆಳಿಗ್ಗೆ 7ಗಂಟೆಯಿಂದ ತವರುಮನೆ ಗಾಂಧಿಬಜಾರ್’ನಲ್ಲಿ ಅಮ್ಮನವರಿಗೆ ಮಡಿಲಕ್ಕಿ ಅರ್ಪಣೆ
- ರಾತ್ರಿ 9ಕ್ಕೆ ತವರುಮನೆಯಿಂದ ಗದ್ದುಗೆಗೆ ಪ್ರವೇಶ
- ಶ್ರೀದೇವಿ ದೇವಸ್ಥಾನದಲ್ಲಿ ಫೆ.25ರಿಂದ 28ರ ವರೆಗೆ ಪ್ರತಿದಿನ ಪೂಜೆ, ಹರಕೆ, ಪ್ರಸಾದ ವಿನಿಯೋಗ
- ಫೆ.28ರ ರಾತ್ರಿ 6.30ಕ್ಕೆ ಮಹಾಮಂಗಳಾರತಿ

- ಫೆ.28ರಅದು ಅಮ್ಮನವರ ರಾಜಬೀದಿ ಉತ್ಸವ, ರಾತ್ರಿ 7ಕ್ಕೆ ವನಪ್ರವೇಶ
- ಫೆ.24ರಿಂದ 27ರ ವರೆಗೆ ರಾಮಣ್ಣ ಶ್ರೇಷ್ಠಿ ಪಾರ್ಕಿನಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು
- ಮಾರ್ಚ್ 6ರಿಂದ 8ರ ವರೆಗೆ ನೆಹರೂ ಕ್ರೀಡಾಂಗಣದಲ್ಲಿ ರಾಷ್ಟಮಟ್ಟದ ಬಯಲು ಕುಸ್ತಿ ಪಂದ್ಯಾವಳಿ
- ಈ ಬಾರಿ ಅಮ್ಮನವರಿಗೆ 1.60 ಕೆ.ಜೆ. ಬಂಗಾರದ ಮುಖವಾಡ
- 16ಕೆ.ಜಿ. ತೂಕದ ಬೆಳ್ಳಿ ಬಾಗಿಲು
- ಗಾಂಧಿಬಜಾರಿನ ಮಹಾದ್ವಾರದಲ್ಲಿ 22 ಅಡಿ ಎತ್ತರದ ಕಾಳಿಕಾ ದೇವಿಯ ಮೂರ್ತಿ
- ಇಡೀ ನಗರದಲ್ಲಿ ವಿದ್ಯುತ್ ದೀಪಾಲಂಕಾರ
- ಶಾಂತಿ-ಸುವ್ಯವಸ್ಥೆ ಕಾಪಾಡಲು ಕ್ರಮ
- ನಗರದಲ್ಲಿ ನಡೆಯುವ ಯಾವುದೇ ಪಂದ್ಯಾವಳಿಗಳಿಗೆ ಸಮಿತಿಯವರು ಜವಾಬ್ದಾರರಲ್ಲ
- ಯಾರಿಗೂ ಯಾವುದೇ ಪಂದ್ಯಾವಳಿ, ಕ್ರೀಡೆಗಳನ್ನು ನಡೆಸುವಂತೆ ಸಮಿತಿ ಹೇಳಿಲ್ಲ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















