ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶಿರಸಿಯ ಪ್ರಸಿದ್ಧ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವದ #Sirsi Marikamba Fair ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು, ನೈಋತ್ಯ ರೈಲ್ವೆಯು ಯಶವಂತಪುರ ಮತ್ತು ತಾಳಗುಪ್ಪ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲನ್ನು #Yashavanthapura-Thalaguppa Special Train ಓಡಿಸಲು ನಿರ್ಧರಿಸಿದೆ.
ರೈಲು ಸಂಖ್ಯೆ 06587 ಯಶವಂತಪುರ–ತಾಳಗುಪ್ಪ ವಿಶೇಷ ಎಕ್ಸ್ ಪ್ರೆಸ್ ರೈಲು ಫೆಬ್ರವರಿ 27 (ಶುಕ್ರವಾರ) ರಂದು ರಾತ್ರಿ 10:45ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಶನಿವಾರ (ಫೆ. 28) ಬೆಳಿಗ್ಗೆ 5:05ಕ್ಕೆ ತಾಳಗುಪ್ಪ ತಲುಪಲಿದೆ.
ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06588 ತಾಳಗುಪ್ಪ–ಯಶವಂತಪುರ ವಿಶೇಷ ಎಕ್ಸ್ ಪ್ರೆಸ್ ಫೆಬ್ರವರಿ 28 (ಶನಿವಾರ) ರಂದು ಬೆಳಿಗ್ಗೆ 9:30ಕ್ಕೆ ತಾಳಗುಪ್ಪದಿಂದ ಹೊರಟು, ಅದೇ ದಿನ ಸಂಜೆ 5:15ಕ್ಕೆ ಯಶವಂತಪುರ ಸೇರಲಿದೆ.
ಈ ವಿಶೇಷ ರೈಲು ಎರಡು ಮಾರ್ಗಗಳಲ್ಲಿ ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು ಜಂಕ್ಷನ್, ತರೀಕೆರೆ, ಭದ್ರಾವತಿ, ಶಿವಮೊಗ್ಗ ಟೌನ್, ಕೊನಗವಳ್ಳಿ ಹಾಲ್ಟ್, ಹಾರನಹಳ್ಳಿ ಹಾಲ್ಟ್, ಕುಂಸಿ, ಅರಸಾಳು ಹಾಲ್ಟ್, ಕೆಂಚನಾಳು ಹಾಲ್ಟ್, ಆನಂದಪುರಂ, ಅಡ್ಡೇರಿ ಹಾಲ್ಟ್ ಮತ್ತು ಸಾಗರ ಜಂಬಗಾರು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಈ ವಿಶೇಷ ರೈಲು ಒಟ್ಟು 20 ಬೋಗಿಗಳನ್ನು ಹೊಂದಿರಲಿದ್ದು, ಅದರಲ್ಲಿ 1 ಪ್ರಥಮ ದರ್ಜೆ ಮತ್ತು ಎಸಿ 2-ಟೈರ್, 2 ಎಸಿ ತ್ರೀ-ಟೈರ್, 10 ಸ್ಲೀಪರ್ ಕ್ಲಾಸ್, 5 ಸಾಮಾನ್ಯ ದ್ವಿತೀಯ ದರ್ಜೆ ಹಾಗೂ 2 ಎಸ್ಎಲ್ಆರ್/ಡಿ) ಬೋಗಿಗಳು ಇರಲಿವೆ.
ಜಾತ್ರಾ ಮಹೋತ್ಸವಕ್ಕೆ ತೆರಳುವ ಭಕ್ತಾದಿಗಳು ಮತ್ತು ಸಾರ್ವಜನಿಕ ಪ್ರಯಾಣಿಕರು ಈ ರೈಲು ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















