ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹದಿಹರೆಯದ #Teenage ವಯೋಮಾನದಲ್ಲಿ ಆಕರ್ಷಣೆ ಸಾಮಾನ್ಯವಾಗಿದ್ದು ಅದು ನಿಜವಾದ ಪ್ರೀತಿ ಅಲ್ಲ ಆದ್ದರಿಂದ ಈ ವಯಸ್ಸಿನಲ್ಲಿ ಭಾವನೆಗಳ ಉದ್ವೇಗಗಳಿಗೆ ಒಳಗಾಗದೆ ಓದು ಮತ್ತು ಭವಿಷ್ಯದ ಗುರಿಗಳ ಮೇಲೆ ಗಮನ ಹರಿಸಬೇಕು ಎಂದು ಹೆಲ್ತಿ ಮೈಂಡ್ ಕೌನ್ಸಿಲಿಂಗ್ ಸೆಂಟರ್‌ನ ಸಂಸ್ಥಾಪಕರು, ಆಪ್ತ ಸಮಾಲೋಚನೆ, ಮನೋಚಿಕಿತ್ಸೆ ಹಾಗೂ ಮನೋವೈದ್ಯಕೀಯ ಸಲಹೆಗಾರರಾದ ಎಂ. ಎಸ್. ನಡಹಳ್ಳಿ ವಸಂತ್ ಸಲಹೆ ನೀಡಿದರು.
ಪಿಇಎಸ್ ಐಎಎಮ್‌ಎಸ್ ಕಾಲೇಜಿನಲ್ಲಿ ಮೈತ್ರಿ ಫೋರಂ ವತಿಯಿಂದ Awaken her Power ಎಂಬ ಶೀರ್ಷಿಕೆಯಡಿಯಲ್ಲಿ ಮಹಿಳಾ ಜಾಗೃತಿ ಮತ್ತು ಕೌನ್ಸಿಲಿಂಗ್ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಸಾಮಾಜಿಕ ಜಾಲ ತಾಣಗಳ ಅತಿಯಾದ ಬಳಕೆಯ ಏಕಾಗ್ರತೆಯನ್ನು ಕಡಿಮೆ ಮಾಡುವುದಲ್ಲದೆ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ ಆದ್ದರಿಂದ ಜೀವನದಲ್ಲಿ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅತ್ಯಂತ ಮುಖ್ಯ ಎಂದು ನುಡಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರೊಂದಿಗೆ ಸಂವಾದವನ್ನು ನಡೆಸಿದರು.
ಸಾಮಾಜಿಕ ಜಾಲತಾಣಗಳ ಪರಿಣಾಮದಿಂದಾಗಿ ಇತ್ತೀಚೆಗೆ ಕೆಲವು ವಿದ್ಯಾರ್ಥಿನಿಯರು ಓದಿನ ಮೇಲೆ ಗಮನವನ್ನು ಕಳೆದುಕೊಳ್ಳುತ್ತಿರುವುದು, ವಿವಿಧ ರೀತಿಯ ಆಕರ್ಷಣೆಗೆ ಒಳಗಾಗುತ್ತಿರುವುದು ಮತ್ತು ಭವಿಷ್ಯಕ್ಕೆ ಹಾನಿಯಾಗುವಂತಹ ನಿರ್ಧಾರಗಳನ್ನು ತಪ್ಪಿಸುವ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಯುವತಿಯರ ಹಾರ್ಮೋನಲ್ ಬದಲಾವಣೆಗಳು ಹಾಗೂ ಅದರ ಪರಿಣಾಮವಾಗಿ ವಿರುದ್ಧ ಲಿಂಗದ ಕಡೆಗೆ ಆಕರ್ಷಣೆ ಉಂಟಾಗುವುದು ಸಹಜ ಪ್ರಕ್ರಿಯೆ ಎಂದು ವಿವರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುದರ್ಶನ್ ಜಿ.ಎಂ, ಅವರು ಮಾತನಾಡುತ್ತಾ ಸಾಮಾಜಿಕ ಜಾಲತಾಣಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ತಂತ್ರಜ್ಞಾನವು ನಮ್ಮ ಬದುಕಿನ ಭಾಗವಾಗಬೇಕೆ ವಿನ: ಅದು ನಮ್ಮ ಬದುಕನ್ನು ಕಸಿದುಕೊಳ್ಳಬಾರದಂತೆ ನಾವು ಎಚ್ಚರ ವಹಿಸಬೇಕು ಎಂದು ನುಡಿದರು.
ಸಮಾರಂಭದಲ್ಲಿ ಮೈತ್ರಿ ವೇದಿಕೆಯ ಸಂಚಾಲಕರಾದ ಡಾ. ಅನಿತ ಸಿ ಬಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಕು. ಮೇಘನ ಡಿ ಆರ್ ನಿರ್ವಹಣಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸೀತಮ್ಮ, ಅಧ್ಯಾಪಕ ವೃಂದದವರು ಹಾಗೂ ಪ್ರಥಮ ವರ್ಷದ ಬಿಸಿಎ, ಬಿಎಸ್ಸಿ, ಬಿಕಾಂ ಮತ್ತು ಬಿಬಿಎ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















