ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದ ಯುವ ಸಾಫ್ಟ್‌ವೇರ್ ಇಂಜಿನಿಯರ್ ನಾಫಿ ಅವರು ಅಭಿವೃದ್ಧಿಪಡಿಸಿದ “ನೀಟ್ ಲೀ ಎಐ” #NEETLY AI ಎಂಬ ಆಧುನಿಕ ಶೈಕ್ಷಣಿಕ ಅಪ್ಲಿಕೇಶನ್ ಇದೀಗ ನೀಟ್, ಜೆಇಇ ಮತ್ತು ಸಿಇಟಿಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಅತ್ಯುತ್ತಮ ನೆರವಾಗುತ್ತಿದೆ.
ಇಂಟರ್ನೆಟ್ ಜಗತ್ತಿನಲ್ಲಿ ಇಂತಹ ಅನೇಕ ಅಪ್ಲಿಕೇಶನ್‌ಗಳು ಲಭ್ಯವಿದ್ದರೂ, “ನೀಟ್ ಲೀ ಎಐ” ತನ್ನ ಸರಳ ಬಳಕೆ, ಸ್ಪಷ್ಟ ಮಾರ್ಗದರ್ಶನ ಹಾಗೂ ಪರಿಣಾಮಕಾರಿ ಅಧ್ಯಯನ ವಿಧಾನಗಳಿಂದ ವಿಶೇಷ ಗಮನ ಸೆಳೆಯುತ್ತಿದೆ.
ಈ ಅಪ್ಲಿಕೇಶನ್‌ನಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ವೈಯಕ್ತಿಕ ಅಧ್ಯಯನ ಮಾರ್ಗದರ್ಶನ, ಅಭ್ಯಾಸ ಪ್ರಶ್ನೆಗಳು, ಮಾಕ್ ಟೆಸ್ಟ್‌ಗಳು ಹಾಗೂ ತಕ್ಷಣದ ಫಲಿತಾಂಶ ವಿಶ್ಲೇಷಣೆ ನೀಡಲಾಗುತ್ತದೆ. ವಿದ್ಯಾರ್ಥಿಗಳ ಸಾಧನೆ ಮತ್ತು ದುರ್ಬಲ ವಿಷಯಗಳನ್ನು ವಿಶ್ಲೇಷಿಸಿ ಅವರಿಗೆ ಸೂಕ್ತ ಅಧ್ಯಯನ ಯೋಜನೆಯನ್ನು ನೀಡುವುದು ಇದರ ಮುಖ್ಯ ವೈಶಿಷ್ಟ್ಯವಾಗಿದೆ.
ಇಂಜಿನಿಯರ್ ನಾಫಿ ಅವರ ಪ್ರಕಾರ, ದುಬಾರಿ ಕೋಚಿಂಗ್ ಕೇಂದ್ರಗಳಿಗೆ ತೆರಳಲು ಸಾಧ್ಯವಾಗದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡೇ ಈ ಅಪ್ಲಿಕೇಶನ್ ರೂಪಿಸಲಾಗಿದೆ. ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಇದು ವಿಶೇಷವಾಗಿ ಉಪಯುಕ್ತವಾಗಿದೆ. ಈ ವೇದಿಕೆ ವಿದ್ಯಾರ್ಥಿಗಳ ಸಮಯ ಬಳಕೆ, ಪ್ರಶ್ನೆಗಳ ಉತ್ತರಿಸುವ ಸಾಮರ್ಥ್ಯ ಮತ್ತು ವಿಷಯವಾರು ದುರ್ಬಲತೆಗಳನ್ನು ವಿಶ್ಲೇಷಿಸಿ ಉತ್ತಮ ತಂತ್ರವನ್ನು ಸೂಚಿಸುತ್ತದೆ.
ನೀಟ್ ಲೀ ಎಐಯ ಪ್ರಮುಖ ವೈಶಿಷ್ಟ್ಯಗಳಲ್ಲಿ ಮಾಕ್ ಟೆಸ್ಟ್, ಅಭ್ಯಾಸ ಪ್ರಶ್ನೆಗಳು, ತಕ್ಷಣದ ರ್ಯಾಂಕ್ ಅಂದಾಜು, ದಿನನಿತ್ಯದ ಅಧ್ಯಯನ ಗುರಿ ಮತ್ತು ವಿವರವಾದ ಪ್ರಗತಿ ವರದಿ ಸೇರಿವೆ. ಪ್ರತಿಯೊಂದು ಪರೀಕ್ಷೆಯ ನಂತರ ವಿದ್ಯಾರ್ಥಿಗಳಿಗೆ ಸಂಪೂರ್ಣ ವಿಶ್ಲೇಷಣಾ ವರದಿ ನೀಡಲಾಗುತ್ತದೆ. ಜೊತೆಗೆ ಎಐ ಆಧಾರಿತ ಡೌಟ್ ಕ್ಲಿಯರಿಂಗ್ ವ್ಯವಸ್ಥೆಯ ಮೂಲಕ ವಿದ್ಯಾರ್ಥಿಗಳು ತಮ್ಮ ಸಂದೇಹಗಳನ್ನು ದಾಖಲಿಸಿ ತಕ್ಷಣ ಉತ್ತರ ಪಡೆಯಬಹುದು.
ಶೈಕ್ಷಣಿಕ ವಲಯದಲ್ಲಿ ಈ ಪ್ರಯತ್ನವನ್ನು ಶ್ಲಾಘಿಸಲಾಗುತ್ತಿದೆ. ಅನೇಕ ವಿದ್ಯಾರ್ಥಿಗಳು ಈ ಅಪ್ಲಿಕೇಶನ್ ಬಳಸಿ ಉತ್ತಮ ಅನುಭವ ಹೊಂದಿರುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಲೈವ್ ಆನ್‌ಲೈನ್ ತರಗತಿಗಳು, ವಿಡಿಯೋ ಉಪನ್ಯಾಸಗಳು ಮತ್ತು ಪೋಷಕರಿಗಾಗಿ ಪ್ರಗತಿ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಸೇರಿಸುವ ಯೋಜನೆ ಇದೆ ಎಂದು ನಾಫಿ ತಿಳಿಸಿದ್ದಾರೆ. ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ಈ ವೇದಿಕೆಯಲ್ಲಿ ಸೇರಿಸುವ ಉದ್ದೇಶ ಹೊಂದಿದ್ದಾರೆ.
ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಹಾಗೂ ಬಳಸಲು ಮೊದಲು ಲಾಗಿನ್ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ವೆಬ್‌ಸೈಟ್ neetlyai.in ಗೆ ಭೇಟಿ ನೀಡಬಹುದು.
ನೀಟ್, ಜೆಇಇ ಮತ್ತು ಸಿಇಟಿ #NEET-JEE-CET ಪರೀಕ್ಷೆಗಳು ದೇಶದ ಪ್ರಮುಖ ಪ್ರವೇಶ ಪರೀಕ್ಷೆಗಳಾಗಿದ್ದು, ಅವುಗಳಿಗೆ ಸೂಕ್ತ ಮಾರ್ಗದರ್ಶನ ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಯುವ ಇಂಜಿನಿಯರ್ ನಾಫಿ ಅವರ ಈ ಪ್ರಯತ್ನ ಶಿಕ್ಷಣ ಕ್ಷೇತ್ರದಲ್ಲಿ ಹೊಸ ದಾರಿಯನ್ನು ತೆರೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















