ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಹ್ಯಾದ್ರಿ ಕಲಾತಂಡ ಶಿವಮೊಗ್ಗ ಇವರ ವತಿಯಿಂದ ಮಾ.7ರಿಂದ ಮಾ.10ರವರೆಗೆ ಪ್ರತಿದಿನ ಸಂಜೆ 6.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಸಹ್ಯಾದ್ರಿ ನಾಟಕೋತ್ಸವವನ್ನು ಆಯೋಜಿಸಲಾಗಿದೆ ಎಂದು ನಿರ್ದೇಶಕ ಡಾ. ಲವ ಜಿ.ಆರ್. ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾಟಕೋತ್ಸವವು ಮೊದಲ ದಿನ ಮಾ.7ರಂದು ಚಂದ್ರಶೇಖರ ಕಂಬಾರರ ಡಾ.ಲವ ಜಿ.ಆರ್. ನಿರ್ದೇಶನದ ಸಹ್ಯಾದ್ರಿ ಕಲಾ ತಂಡ ಅರ್ಪಿಸುವ ಜೋಕುಮಾರಸ್ವಾಮಿ ನಾಟಕ ಪ್ರದರ್ಶನದೊಂದಿಗೆ ಚಾಲನೆ ನೀಡಲಾಗುವುದು. ಮಾ.8ರಂದು ಸುಮನಸ ಕೊಡವೂರು ಉಡುಪಿ ಇವರಿಂದ ಈದಿ(ಕನ್ನಡ) ನಾಟಕ, ಮಾ.9ರಂದು ರಂಗಾಯಣ ಕಲ್ಬುರ್ಗಿ ಇವರಿಂದ ಕಾಲಚಕ್ರ ನಾಟಕ ಮಾ.10ರಂದು ಕರಾವಳಿಯ ನಿರ್ದಿಂಗತ ಇವರಿಂದ ರಾಮ, ಕೃಷ್ಣ, ಶಿವ (ಕನ್ನಡ)ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದರು.
ಜಗತ್ತು ಇಂದು ತಲ್ಲಣದಲ್ಲಿದೆ. ಯುದ್ಧಭೀತಿ, ಭಯೋತ್ಪಾದನೆ, ಅಸುರಕ್ಷತೆಯ ಮಾತುಗಳು ಕೇಳಿ ಬರುತ್ತಿರುವ ಈ ಹೊತ್ತಿನಲ್ಲಿ ಜಗತ್ತನ್ನು ನೋಡುವ, ಅವುಗಳಿಗೆ ಹೊಸ ಭರವಸೆಯ ಬೆಳಕನ್ನು ಹುಡುಕುವ ಅಗತ್ಯ ಯಾವುದೇ ಸಾಂಸ್ಕøತಿಕ ಚಳುವಳಿಗೆ ಇರುತ್ತದೆ. ಅದರ ಭಾಗವೇ ರಂಗಭೂಮಿಯಾಗಿದೆ ಎಂದರು.
ಇಲ್ಲಿ ಪ್ರದರ್ಶನ ಕಾಣುವ ನಾಲ್ಕೂ ನಾಟಕಗಳು ಮಾನವ ಸಂಘರ್ಷದ ಜೊತೆಗೆ ಅಂತಃಸತ್ವವನ್ನು ಬಹಿರಂಗಗೊಳಿಸುತ್ತದೆ. ಉಳುವವನೇ ನೆಲದೊಡೆಯ ಕಾನೂನಿನ ಸಂಗತಿಯನ್ನು ಜೋಕುಮಾರ ಸ್ವಾಮಿ ನಾಟಕ ಹೇಳಿದರೆ, ಈದಿ ಧರ್ಮಗಳ ಪರಿಧಿಯಾಚೆಗಿರುವ ಭಾತೃತ್ವದ ಬೇರುಗಳನ್ನು ಶೋಧಿಸುತ್ತದೆ. ಕಾಲಚಕ್ರ ನಾಟಕ ಮನೆ ಮನೆ ಕಥೆಯಾಗಿದೆ. ರಾಮ, ಕೃಷ್ಣ, ಶಿವ ನಾಟಕವು ಇಂಡಿಯಾದ ಮಹಾಸ್ವಪ್ನಗಳು ಮತ್ತು ಮಹಾ ದುಃಖಗಳು ಎಂಬುದನ್ನು ಶೋಧಿಸುತ್ತದೆ. ಹೀಗೆ ಸಹ್ಯಾದ್ರಿ ನಾಟಕೋತ್ಸವವು ಒಂದು ವಿಭಿನ್ನ ವೈವಿಧ್ಯಮಯವಾಗಿರುತ್ತವೆ ಎಂದರು.
ನಾಟಕಗಳು ಪ್ರತಿದಿನ ಸಂಜೆ 6.30ಕ್ಕೆ ಪ್ರಾರಂಭವಾಗುತ್ತದೆ. ರಂಗಗೀತೆ, ಬೀದಿಗೀತೆ, ಬೀದಿ ನಾಟಕಗಳು, ಜಾನಪದ ಗೀತೆಗಳು, ನಾಟಕದ ಮೊದಲು ಪ್ರದರ್ಶನಗೊಂಡು, ನಾಟಕ ಸರಿಯಾಗಿ ಸಂಜೆ 7.15ಕ್ಕೆ ಆರಂಭವಾಗುತ್ತವೆ. ಯಾವುದೇ ವೇದಿಕೆಯ ಕಾರ್ಯಕ್ರಮ ಇರುವುದಿಲ್ಲ ಎಂದರು.
ಜೋಕುಮಾರಸ್ವಾಮಿ ನಾಟಕ ತಯಾರಿಗೆ ಶಿವಮೊಗ್ಗ ಮಹಾನಗರ ಪಾಲಿಕೆ, ಧೀವರು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕುಪ್ಪಯ್ಯ ಟಿ. ಮತ್ತು ಪದಾಧಿಕಾರಿಗಳು ನೆರವು ನೀಡಿವೆ. ವಿಶೇಷವಾಗಿ ನಮ್ಮನಾಡು ದಿನಪತ್ರಿಕೆ 25ನೇ ವರ್ಷದ ನೆನಪಿಗಾಗಿ ಆರ್ಥಿಕ ನೆರವು ಮತ್ತು ಪ್ರಚಾರ ಜವಾಬ್ದಾರಿಯನ್ನು ವಹಿಸಿಕೊಂಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ಎಸ್. ಮಂಜಪ್ಪ, ರಜನೀಶ್ ನಾವುಡ, ರಕ್ಷಿತ, ಪ್ರಜ್ವಲ್, ನವೀನ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















